ಶುಕ್ರವಾರದ ದಿನ  ಭವಿಷ್ಯ: ಆಡುವ ಮಾತಿನಲ್ಲಿ ನಿಯಂತ್ರಣ ತಪ್ಪಿದರೆ ಅನಾಹುತ ಖಂಡಿತ

ಶುಕ್ರವಾರದ ದಿನ ಭವಿಷ್ಯ: ಆಡುವ ಮಾತಿನಲ್ಲಿ ನಿಯಂತ್ರಣ ತಪ್ಪಿದರೆ ಅನಾಹುತ ಖಂಡಿತ

ಶುಭ ಶುಕ್ರವಾರ-ಆಗಸ್ಟ್-07,2020 ರಾಶಿ ಭವಿಷ್ಯ
ಸೂರ್ಯೋದಯ: 06:09, ಸೂರ್ಯಸ್ತ: 18:40
ಶಾರ್ವರಿ ಶಕ ಸಂವತ
ಶ್ರಾವಣ ಮಾಸ ದಕ್ಷಿಣಾಯಣ
ತಿಥಿ: ಚೌತಿ – 26:05+ ವರೆಗೆ
ನಕ್ಷತ್ರ: ಪೂರ್ವಾ ಭಾದ್ರ – 13:33 ವರೆಗೆ
ಯೋಗ: ಸುಕರ್ಮ – 29:56+ ವರೆಗೆ
ಕರಣ: ಬವ – 13:06 ವರೆಗೆ ಬಾಲವ – 26:05+ ವರೆಗೆ
ದುರ್ಮುಹೂರ್ತ: 08:40 – 09:30
ದುರ್ಮುಹೂರ್ತ : 12:50 – 13:40
ವರ್ಜ್ಯಂ: 24:13+ – 25:59+
ರಾಹು ಕಾಲ: 10:30 – 12:00
ಯಮಗಂಡ: 15:00 – 16:30
ಗುಳಿಕ ಕಾಲ: 07:30 – 09:00
ಅಮೃತಕಾಲ: ಇಲ್ಲ
ಅಭಿಜಿತ್ ಮುಹುರ್ತ: 12:00 – 12:50

ಮೇಷ: ನೀವು ಜಯವನ್ನು ಸಾಧಿಸಲು ಅಗತ್ಯವಾದ ಪೋಷಕ ಶಕ್ತಿಗಳು ನೆರವಿಗೆ ಬರುವಂತಹ ಮಂಗಳಮಯ ಸಾಧ್ಯತೆ ಇದೆ. ಶುಭಸಂಖ್ಯೆ: 1

ವೃಷಭ: ಆಹಾರದ ಬಗ್ಗೆ ಎಚ್ಚರವಿರಲಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕೂಡಲೇ ವೈದ್ಯರನ್ನು ಸಂರ್ಪಸಿ. ಶುಭಸಂಖ್ಯೆ: 3

ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ನಿಮ್ಮ ಮನಸ್ಸು ಭ್ರಮೆಯಲ್ಲಿ ಮುಳುಗದಂತೆ ನೋಡಿಕೊಂಡರೆ ಒಳಿತಾಗಲಿದೆ. ಶುಭಸಂಖ್ಯೆ: 2

ಕಟಕ: ಚತುರತೆಯಿಂದ ಕೂಡಿರುವ ನಿಮ್ಮ ವಿಶಿಷ್ಟವಾದ ಪ್ರತಿಭೆಗೆ ಸುಯೋಗ್ಯವಾದ ಮನ್ನಣೆ ಲಭ್ಯವಾಗಲಿದೆ. ಶುಭಸಂಖ್ಯೆ: 4

ಸಿಂಹ: ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳ ಕುರಿತಾಗಿ ಹೆಚ್ಚಿನ ಎಚ್ಚರದಿಂದಿರಿ. ಅನಗತ್ಯ ಪ್ರಕ್ರಿಯೆ ನೀಡದೆ ಸುಮ್ಮನಿರಿ. ಶುಭಸಂಖ್ಯೆ: 6

ಕನ್ಯಾ: ನಿಮ್ಮ ದುಬಾರಿಯಾದ ವಸ್ತುಗಳ ಪ್ರದರ್ಶನ ಮಾಡಲು ಹೋಗದಿರಿ. ಅಜಾಗ್ರತೆಯಿಂದ ನಾಪತ್ತೆಯಾಗಿಬಿಟ್ಟೀತು. ಶುಭಸಂಖ್ಯೆ: 5

ತುಲಾ: ಆಡುವ ಮಾತಿನಲ್ಲಿ ನಿಯಂತ್ರಣವನ್ನು ತಪ್ಪಿದರೆ ಗ್ರಹಚಾರ ದೋಷವು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಶುಭಸಂಖ್ಯೆ: 8

ವೃಶ್ಚಿಕ: ಯಾವುದನ್ನೂ ಯಾರನ್ನೂ ಅತಿಯಾಗಿ ನಂಬದಿರಿ. ನಂಬಿಯೂ ನಂಬದಂತಿರಿ. ಸಮತೋಲನದಿಂದ ಜಯ. ಶುಭಸಂಖ್ಯೆ: 7

ಧನಸ್ಸು: ಪ್ರತಿ ಬಾರಿಯೂ ನಿಮ್ಮದೇ ಗೆಲುವು ನಿಶ್ಚಿತ ಎಂದು ಭ್ರಮೆಯಲ್ಲಿ ಇರಬೇಡಿ. ಇಂದಂತೂ ಸಾಕಷ್ಟು ಎಚ್ಚರ ಇದ್ದೇ ಇರಲಿ. ಶುಭಸಂಖ್ಯೆ: 9

ಮಕರ: ದಿನವು ನೀರಸವಾಗಿದೆ ಎಂದು ಖಿನ್ನತೆಯನ್ನು ಹೊಂದಬೇಡಿ. ಆಪ್ತರೊಬ್ಬರ ನೆರವಿನಿಂದ ಕಾರ್ಯಗಳಲ್ಲಿ ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 1

ಕುಂಭ: ಎಂದೋ ಮೂಲೆಗೆ ಹಾಕಿದ್ದ ಹಳೆಯ ಕಾಗದಪತ್ರದ ಅಗತ್ಯ ಇಂದು ಬರಬಹುದು. ಅದಕ್ಕೆ ಸಜ್ಜಾಗಿದ್ದರೆ ಉತ್ತಮ. ಶುಭಸಂಖ್ಯೆ: 2

ಮೀನ: ಜಗತ್ತಿನಲ್ಲಿ ಯಾರೂ ಕೂಡ ಪರಿಪೂರ್ಣ ವ್ಯಕ್ತಿಗಳಲ್ಲ. ನೀವು ಆ ನಿಟ್ಟಿನಲ್ಲಿ ಶ್ರಮಿಸಿದರೆ ನಿಶ್ಚಿತವಾಗಿ ಲಾಭವಾಗಲಿದೆ. ಶುಭಸಂಖ್ಯೆ: 3
Share
WhatsApp
Follow by Email