ಬೆಟಗೇರಿ : ಅಭಿನವ ಶಿವಪುತ್ರ ಮಹಾಸ್ವಾಮಿಗಳು ಅಕಾಲಿಕವಾಗಿ ಲಿಂಗೈಕ್ಯಾಗಿದ್ದ ಪ್ರಯುಕ್ತ ಮೌನಾಚರಣೆ

ಬೆಟಗೇರಿ : ಅಭಿನವ ಶಿವಪುತ್ರ ಮಹಾಸ್ವಾಮಿಗಳು ಅಕಾಲಿಕವಾಗಿ ಲಿಂಗೈಕ್ಯಾಗಿದ್ದ ಪ್ರಯುಕ್ತ ಮೌನಾಚರಣೆ

ಬೆಟಗೇರಿ:ವಿಜಯಪುರ ಷಣ್ಮುಖಾರೂಢ ಮಠ ಹಾಗೂ ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಶಿವಪುತ್ರ ಮಹಾಸ್ವಾಮಿಗಳು ಅಕಾಲಿಕವಾಗಿ ಶುಕ್ರವಾರ ಆ.7 ರಂದು ರಾತ್ರಿ ಲಿಂಗೈಕ್ಯಾಗಿದ್ದಕ್ಕೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ಭಜನಾ ಮಂಡಳಿ ಹಾಗೂ ಆಧ್ಯಾತ್ಮ ಆಸಕ್ತರು, ಸ್ಥಳೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಭಿನವ ಶಿವಪುತ್ರ ಮಹಾಸ್ವಾಮಿಗಳು ಅಕಾಲಿಕವಾಗಿ ಲಿಂಗೈಕ್ಯಾಗಿದ್ದ ಪ್ರಯುಕ್ತ ಶನಿವಾರದಂದು ಗ್ರಾಮದ ಈಶ್ವರ ದೇವರ ದೇವಸ್ಥಾನದ ಸಭಾಮಂಟಪದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿದ ಬಳಿಕ ಸ್ಥಳೀಯ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಅವರು ಮಾತನಾಡಿ, ಅಭಿನವ ಶಿವಪುತ್ರ ಮಹಾಸ್ವಾಮಿಗಳು ತಮ್ಮಲ್ಲಿದ್ದ ಆರೂಢ ಪರಂಪರೆಯ ಅದ್ಭುತ ಜ್ಞಾನದಿಂದ ಕನ್ನಡ ನಾಡಿನ ಮೂಲೆ ಮೂಲೆಗಳಲ್ಲಿ ಶಿಷ್ಯ ಪರಂಪರೆಯನ್ನಯ ಹೊಂದಿದ್ದರು. ಅಭಿನವ ಶಿವಪುತ್ರ ಮಹಾಸ್ವಾಮಿಗಳ ನಿಧನದಿಂದ ಆರೂಢ ಪರಂಪರೆಯ ಅಮೂಲ್ಯವಾದ ಒಂದು ರತ್ನವನ್ನುನ ಕಳೆದುಕೊಂಡತಾಗಿದೆ ಎಂದರು.

ಶರಣರಾದ ಬಸಪ್ಪ ದೇಯಣ್ಣವರ, ಬಸನಗೌಡ ದೇಯಣ್ಣವರ, ಬಸವರಾಜ ಪಣದಿ, ಚಿಂತಪ್ಪ ಸಿದ್ನಾಳ, ಡಾ. ಬಸು ದೇಯಣ್ಣವರ, ಸುರೇಶ ಸಿದ್ನಾಳ, ಮಹಾದೇವಪ್ಪ ಬೆಟಗೇರಿ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ನಿಂಗಪ್ಪ ಕಂಬಿ, ಬಸಪ್ಪ ತೋಟಗಿ, ಸಿದ್ರಾಮ ಪಡಶೆಟ್ಟಿ, ಈಡಪ್ಪ ರಾಮಗೇರಿ, ಬಸನಪ್ಪ ದೇಯಣ್ಣವರ, ಬಸವರಾಜ ನೀಲಣ್ಣವರ, ಅಡಿವೆಪ್ಪ ಮುರಗೋಡ, ಶ್ರೀಧರ ದೇಯಣ್ಣವರ, ಗೌಡಪ್ಪ ಮೇಳೆಣ್ಣವರ, ಸೇರಿದಂತೆ ಸ್ಥಳೀಯ ಈಶ್ವರ ಭಜನಾ ಮಂಡಳಿ ಸದಸ್ಯರು, ಆಧ್ಯಾತ್ಮ ಆಸಕ್ತರು, ಸ್ಥಳೀಯ ಗಣ್ಯರು, ಭಕ್ತ ಸಮೂಹ ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.

Share
WhatsApp
Follow by Email