ಕನ್ನಡಕ್ಕೆ ದುಡಿಯಲು ಸಮರ್ಥವಾಗಿ ಹೋರಾಟ ಸಂಘಟಿಸುವ ಯುವ ಶಕ್ತಿಗಳನ್ನು ಹುಡುಕಿ ನಾಡ ರಕ್ಷಣೆಯ ಜವಾಬ್ದಾರಿ ನೀಡುವಲ್ಲಿ ಗುರ್ಲಾಪೂರದ ಕಾರ್ಯಕರ್ತರು ಕಾರ್ಯನಿರತರಾಗಬೇಕು : ಲೆಂಕೆನ್ನವರ

ಕನ್ನಡಕ್ಕೆ ದುಡಿಯಲು ಸಮರ್ಥವಾಗಿ ಹೋರಾಟ ಸಂಘಟಿಸುವ ಯುವ ಶಕ್ತಿಗಳನ್ನು ಹುಡುಕಿ ನಾಡ ರಕ್ಷಣೆಯ ಜವಾಬ್ದಾರಿ ನೀಡುವಲ್ಲಿ ಗುರ್ಲಾಪೂರದ ಕಾರ್ಯಕರ್ತರು ಕಾರ್ಯನಿರತರಾಗಬೇಕು : ಲೆಂಕೆನ್ನವರ

ವರದಿ:ಶಿವಬಸು ಮೋರೆ
ಮೂಡಲಗಿ:ಕರ್ನಾಟಕ ನವನಿರ್ಮಾಣ ಸೇನೆಯ ಸಂಘಟನೆಯನ್ನು ಬಲಪಡಿಸಲು ಕನ್ನಡಕ್ಕೆ ದುಡಿಯಲು ಸಮರ್ಥವಾಗಿ ಹೋರಾಟ ಸಂಘಟಿಸುವ ಯುವ ಶಕ್ತಿಗಳನ್ನು ಹುಡುಕಿ ನಾಡ ರಕ್ಷಣೆಯ ಜವಾಬ್ದಾರಿ ನೀಡುವಲ್ಲಿ ಗುರ್ಲಾಪೂರ ಗ್ರಾಮ ಹಾಗೂ ಸುತ್ತಲಿನ ಭಾಗದಲ್ಲಿ ಪದಾಧಿಕಾರಿಗಳು ಕಾರ್ಯಕರ್ತರು ಕಾರ್ಯನಿರತರಾಗಬೇಕೆಂದು ತಾಲೂಕಾಧ್ಯಕ್ಷ ಸಚಿನ ಲೆಂಕೆನ್ನವರ ಹೇಳಿದರು

ರವಿವಾರ ಸಂಜೆ ಕನಸೇ ತಾಲೂಕಾಧ್ಯಕ್ಷ ಸಚಿನ ಲೆಂಕೆನ್ನವರ ನೇತೃತ್ವದಲ್ಲಿ ಗುರ್ಲಾಪೂರದಲ್ಲಿ ನಡೆದ ಕರ್ನಾಟಕ ನವನಿರ್ಮಾಣ ಸೇನೆ ಗುರ್ಲಾಪೂರ ಘಟಕದ ಕಾರ್ಯಕರ್ತರ ಸಭೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹಿಂದೆ ಗುರ್ಲಾಪೂರ ಗ್ರಾಮದ ಬೇಡಿಕೆಗಳ ವಿಚಾರವಾಗಿ ನಡೆದ ಕೆಲ ಹೋರಾಟಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಹಾಗಾಗಿ ಅವುಗಳ ವಿಚಾರವಾಗಿ ಸೇನೆ ಮುಂದಿನ ನಡೆಗಳ ಬಗ್ಗೆ ಹಾಗೂ ಈ ಬಾಗದಲ್ಲಿ ಯುವಕರನ್ನು ಕನ್ನಡಕ್ಕಾಗಿ ಸಂಘಟಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು ಕಾರ್ಯಕರ್ತರು ಮುಂದಾಗಿ ಎಂದು ಕರೆ ನೀಡಿದರು ‌.

ಗುರ್ಲಾಪೂರ ಘಟಕದ ಅಧ್ಯಕ್ಷ ಸುರೇಶ ಪಾಟೀಲ ನೇತೃತ್ವದಲ್ಲಿ ಸಿದ್ರಾಮ ಮುಗಳಖೋಡರನ್ನು ಪ್ರದಾನ ಕಾರ್ಯದರ್ಶಿಯಾಗಿ ತುಕಾರಾಮ ಕುಲಗೋಡರನ್ನು ಪ್ರಧಾನ ಸಂಚಾಲಕರಾಗಿ ಬಸವರಾಜ ಕ್ವಾನಿರನ್ನು ಕಾರ್ಯದರ್ಶಿಯಾಗಿ ರವಿ ಶಿರಹಟ್ಟಿ ಮತ್ತು ಮಹಾಂತೇಶ ಇಟ್ನಾಳರನ್ನು ಸಹ ಕಾರ್ಯದರ್ಶಿಗಳಾಗಿ ಬಾಳು ಸಹ ಸಂಚಾಲಕರಾಗಿ ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ಉಪಾಧ್ಯಕ್ಷ ಮಹಾಂತೇಶ ಮುಗಳಖೋಡ ತಾಲೂಕಾ ಪ್ರದಾನ ಪ್ರದಾನ ಕಾರ್ಯದರ್ಶಿ ಶಾನೂರ ಕುರಬೇಟ . ತಾಲೂಕಾ ಮಾಧ್ಯಮ ಸಂಚಾಲಕರಾದ ಶಿವಬಸು ಮೋರೆ ಸಭೆಯ ಅಥಿತ್ಯ ವಹಿಸಿದರು
Share
WhatsApp
Follow by Email