ಶುಭ ಸೋಮವಾರ-ಆಗಸ್ಟ್-10,2020 ರಾಶಿ ದಿನ ಭವಿಷ್ಯ

ಶುಭ ಸೋಮವಾರ-ಆಗಸ್ಟ್-10,2020 ರಾಶಿ ದಿನ ಭವಿಷ್ಯ

ಶುಭ ಸೋಮವಾರ-ಆಗಸ್ಟ್-10,2020 ರಾಶಿ ಭವಿಷ್ಯ
ಸೂರ್ಯೋದಯ
: 06:10, ಸೂರ್ಯಸ್ತ: 18:39
ಶಾರ್ವರಿ ಶಕ ಸಂವತ
ಶ್ರಾವಣ ಮಾಸ, ದಕ್ಷಿಣಾಯಣ
ತಿಥಿ: ಷಷ್ಠೀ – 06:42 ವರೆಗೆ
ನಕ್ಷತ್ರ: ಅಶ್ವಿನಿ – 22:05 ವರೆಗೆ
ಯೋಗ: ಶೂಲ – 07:43 ವರೆಗೆ
ಕರಣ: ವಣಿಜ – 06:42 ವರೆಗೆ ವಿಷ್ಟಿ – 19:55 ವರೆಗೆ
ದುರ್ಮುಹೂರ್ತ: 12:49 – 13:39
ದುರ್ಮುಹೂರ್ತ : 15:19 – 16:09
ರಾಹು ಕಾಲ: 07:30 – 09:00
ಯಮಗಂಡ: 10:30 – 12:00
ಗುಳಿಕ ಕಾಲ: 13:30- 15:00
ಅಮೃತಕಾಲ: 14:00 – 15:48
ಅಭಿಜಿತ್ ಮುಹುರ್ತ: 11:59 – 12:49

ಮೇಷ: ಬದುಕಿನಲ್ಲಿನ ಶ್ರೇಷ್ಠ ವಿಚಾರಗಳು, ವಸ್ತುಗಳೆಲ್ಲ ನಿಮಗೆ ಲಭ್ಯವಾಗಲಿವೆ. ಆದರೆ ಯಾರು ಏನು ಟೀಕಿಸಿದರೂ ಕೆರಳಬೇಡಿ. ಶುಭಸಂಖ್ಯೆ: 9

ವೃಷಭ: ಮಾತಿನ ಚಾತುರ್ಯದಿಂದ ಉದ್ಯಮದಲ್ಲಿ ಸಹಪಾಲುದಾರರನ್ನು ಪಡೆದುಕೊಳ್ಳುವ ಅವಕಾಶವೊಂದು ಸಿಗಲಿದೆ. ಶುಭಸಂಖ್ಯೆ: 8

ಮಿಥುನ: ಕೆಲಸಗಳಲ್ಲಿ ಪಾರದರ್ಶಕವಾಗಿರುವ ನಿಮ್ಮ ಮನೋಭಾವದಿಂದ ಪರರಿಗೆ ಮಾದರಿ ಆಗಿದ್ದೀರಿ. ಲಾಭ ಹೆಚ್ಚಲಿದೆ. ಶುಭಸಂಖ್ಯೆ: 6

ಕಟಕ: ವೃತ್ತಿರಂಗದಲ್ಲಿ ಹೊಸದೇ ಆದ ಹೊಣೆಗಾರಿಕೆ ಹೆಗಲಿಗೆ ಏರಬಹುದು. ಆದರೂ ಹೆದರದಿರಿ. ಮನ್ನಣೆಯೂ ಒದಗಿಬರಲಿದೆ. ಶುಭಸಂಖ್ಯೆ: 7

ಸಿಂಹ: ಹಿರಿಯರ ಜತೆಗೆ ವಾದ ಮಾಡುವಂತಹ ಸಂದರ್ಭ ಬರಬಹುದು. ಶಾಂತವಾಗಿರಿ. ನಿಮಗೇ ಅಂತಿಮ ಲಾಭವಿದೆ. ಶುಭಸಂಖ್ಯೆ: 5

ಕನ್ಯಾ: ನಿರ್ಲಕ್ಷ್ಯದ ಮನೋಭಾವನೆ ಹೊಂದಿರಬೇಡಿ. ಅಂಥವರು ಸಿಕ್ಕಿದರೂ ದೂರವೇ ಇಟ್ಟುಬಿಡಿ. ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಶುಭಸಂಖ್ಯೆ: 4

ತುಲಾ: ಅನಿರೀಕ್ಷಿತವಾಗಿ ಹೊಸ ಜವಾಬ್ದಾರಿಯನ್ನು ನಿಭಾಯಿಸುವ ಪ್ರಸಂಗ ಬರಬಹುದು. ತಾಳ್ಮೆಯನ್ನು ಪ್ರದರ್ಶಿಸಿ. ಶುಭಸಂಖ್ಯೆ: 1

ವೃಶ್ಚಿಕ: ವೈಯಕ್ತಿಕ ವಿಚಾರದಲ್ಲಿ ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಅವುಗಳಿಗೆ ಸಫಲತೆ ಸಿದ್ಧಿಸಲಿದೆ. ಶುಭಸಂಖ್ಯೆ: 2

ಧನುಸ್ಸು: ಯಾರು ಯೋಗ್ಯರು, ಯಾರು ಅಯೋಗ್ಯರು ಎಂಬುದನ್ನು ಗುರುತಿಸಲು ಸಾಧ್ಯವಾಗದು. ಶ್ರೀ ಗಣೇಶನನ್ನು ಸ್ತುತಿಸಿ. ಶುಭಸಂಖ್ಯೆ: 3

ಕುಂಭ: ಸ್ಪರ್ಧಾತ್ಮಕ ಕಾರ್ಯಗಳಲ್ಲಿ ಸಾಫಲ್ಯವನ್ನು ಕಾಣುವ ಅದೃಷ್ಟವಿದೆ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲೂ ಶುಭವಿದೆ. ಶುಭಸಂಖ್ಯೆ: 7

ಮಕರ: ಉತ್ತಮ ಕಾರ್ಯಯೋಜನೆಗಳಿಗೆ ಸಿದ್ಧತೆ ಮಾಡುತ್ತಿರುವಿರಿ. ಕುಲದೇವತಾನುಗ್ರಹದಿಂದ ಯಶಸ್ಸನ್ನೇ ಪಡೆಯುವಿರಿ. ಶುಭಸಂಖ್ಯೆ: 9

ಮೀನ: ದಿಢೀರ್ ಧನಸಂಪಾದನೆಯ ಬಗ್ಗೆ ಆಸೆ ಮೂಡಿಸುವವರು ಗಂಟುಬಿದ್ದಾರು. ಅತಿ ಆಸೆಯನ್ನು ನಿಯಂತ್ರಿಸಿ. ಶುಭಸಂಖ್ಯೆ: 8
Share
WhatsApp
Follow by Email