ಮೂಡಲ ವಾರ್ತೆ ವಾರಪತ್ರಿಕೆಯ 32 ನೇ ಹುಟ್ಟುಹಬ್ಬ ಆಚರಣೆ

ಮೂಡಲ ವಾರ್ತೆ ವಾರಪತ್ರಿಕೆಯ 32 ನೇ ಹುಟ್ಟುಹಬ್ಬ ಆಚರಣೆ


ಮೂಡಲಗಿ ಅಗಷ್ಠ 11: ಮೂಡಲಗಿ ಪಟ್ಟಣದಿಂದ ಪ್ರಪ್ರಥಮವಾಗಿ ಪ್ರಕಟಗೊಂಡ ಮೊದಲ – ವಾರ ಪತ್ರಿಕೆಯು 31 ವರ್ಷ ಪೂರೈಸಿ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ನಿಮಿತ್ಯ ಹುಟ್ಟುಹಬ್ಬವನ್ನು ಮಂಗಳವಾರ ರಂದು ಹುಟ್ಟುಹಬ್ಬ ಸರಳ ಸಮಾರಂಭದಲ್ಲಿ ಆಚರಿಸಿಕೊಂಡಿತು.

ಸರಳ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಸುಲ್ತಾನಪೂರ ಅವರ ಮೊಮ್ಮಗನಾದ ವಿನಾಯಕ ಹುಟ್ಟುಹಬ್ಬದ ಕೇಕ್ ಕತ್ತರಿಸಿದನು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ 32 ನೇ ಹುಟ್ಟುಹಬ್ಬ ಆಚರಿಸಿಕೊಂಡು ಪತ್ರಿಕೆಗೆ ಶುಭ ಕೋರಿ, ದಿನಾಂಕ 11/08/1989ರಂದು ಪ್ರಾರಂಭವಾದ ಈ ಪತ್ರಿಕೆಯನ್ನು ಯಮನಪ್ಪ ಸುಲ್ತಾನಪೂರ ಅವರು ಏಳುಬೀಳುಗಳ ನಡುವೆ ನಡೆಸಿಕೊಂಡಿದ್ದು ಬಂದಿದ್ದು ಹೆಮ್ಮೆಯ ವಿಷಯವಾಗಿದೆ ಇದರೊಂದಿಗೆ ಹಸಿರು ಕ್ರಾಂತಿ ದಿನ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಮಯದಲ್ಲಿ ಮೂಡಲಗಿ ತಾಲೂಕು ಪ್ರೆಸ್ ಅಸೋಶಿಯೇಶನ್ ಉಪಾಧ್ಯಕ್ಷರ ಚಂದ್ರಶೇಖರ್ ಎಸ್ ಎಮ್ ಅತಿಥಿಗಳಾಗಿ ಪತ್ರಕರ್ತ ರಾಘವೇಂದ್ರ ಸವಳೇಕರ , ಕೃಷ್ಣಾ ಗಿರೇನ್ನವರ, ಅಲ್ತಾಫ್ ಹವಾಲ್ದಾರ್ ಈಶ್ವರ ಢವಳೇಶ್ವರ, ರಾಜಶೇಖರ್ ಮಗದುಮ್, ಸುಭಾಷ್ , ಉಮೇಶ್ ಬೆಳಕೂಡ ಸುರೇಶ್ ಎಮ್ಮಿ , ಹಿತೈಷಿಗಳಾದ ಯುವ ಜೀವನ ಸೇವಾ ಸಂಸ್ಥೆ ಅಧ್ಯಕ್ಷ ಈರಪ್ಪಾ ಢವಳೇಶ್ವರ , ಈಶ್ವರ ಮುರಗೋಡ, ಹೊಳೆಪ್ಪ ಶಿವಪೂರ, ಶ್ರೀನಿವಾಸ್ ಕಾತರಕಿ, ಪ್ರಕಾಶ್ ಕೊಳವಿ ಮಲಿಕ್ ಭಗವಾನ ಮುಂತಾದವರು ಇದ್ದರು.
Share
WhatsApp
Follow by Email