
ಕರ್ನಾಟಕ ರಣಧೀರ ಪಡೆ, ಹಾಲುಮತ ಸಮಾಜ ಸೇರಿ ರಾಯಣ್ಣ ಅಭಿಮಾನಿಗಳಿಂದ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುವರ್ಣಸೌಧದಿಂದ ರ್ಯಾಲಿ ಆರಂಭಗೊಂಡಿದೆ.
ಬೆಳಗಾವಿ ತಾಲೂಕು ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ.
ಪೀರನವಾಡಿಯಲ್ಲಿ ಮಾತ್ರವಲ್ಲ, ಸುವರ್ಣಸೌಧದ ಎದುರು ಸಹ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಆಗಬೇಕು ಎಂದು ಆಗ್ರಹಿಸಿ ಇಂದು ವಿವಿಧ ಸಂಘಟನೆಗಳು ಬೆಳಗಾವಿ ಚಲೋ ಕರೆ ಕೊಟ್ಟಿದ್ದು, ಕರ್ನಾಟಕ ರಣಧೀರ ಪಡೆ, ಹಾಲುಮತ ಸಮಾಜ ಸೇರಿ ರಾಯಣ್ಣ ಅಭಿಮಾನಿಗಳು ಬೆಳಗಾವಿಗೆ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಕಾರ್ಯಕರ್ತರು ಬೆಳಗಾವಿಗೆ ಆಗಮಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಳಗಾವಿ ಸುವರ್ಣ ವಿಧಾನಸೌಧದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ.