ಕುಖ್ಯಾತ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್.


ಕಲಬುರಗಿ : ಕಲಬುರಗಿಯಲ್ಲಿ ಪೊಲೀಸರ ಗನ್ ಸದ್ದು‌ ಮಾಡಿದೆ. ಕುಖ್ಯಾತ ರೌಡಿಶೀಟರ್ ‌ಬಂಧನದ ವೇಳೆ ಪೊಲೀಸರು ಗುಂಡಿನ ದಾಳಿ‌ ನಡೆಸಿದ್ದಾರೆ.
ರೌಡಿಶೀಟರ್ ಫಯೀಂ ಬೇಗ್ ಮೇಲೆ ಗುಂಡಿನ‌‌ ದಾಳಿ ನಡೆಸಿ, ಫಯೀಂ ಕಾಲಿಗೆ ಎರಡು ಗುಂಡುಗಳು ತಾಗಿದೆ. ಗಂಭೀರವಾಗಿ ಗಾಯಗೊಂಡ ಫಯೀಂ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:
ಕಲಬುರಗಿ ಸೇರಿದಂತೆ ಹೊರ ರಾಜ್ಯ ಹೈದರಾಬಾದ್ ನಲ್ಲಿಯೂ ರೌಡಿಶೀಟರ್ ಫಯೀಂ ಬೇಗ್ ಮೇಲೆ ಪ್ರಕರಣ ದಾಖಲಾಗಿದೆ. ಕಲಬುರಗಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕೆಸರಟಗಿ ಗ್ರಾಮದ ಬಳಿ ಬಂಧಿಸಲು ತೆರಳಿದ್ದಾರೆ. ಈ ವೇಳೆ ರೌಡಿಶೀಟರ್ ಫಯೀಂ ಬೇಗ್ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.‌ಇದರಿಂದ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆತ್ಮರಕ್ಷಣೆಗೆ ಪೊಲೀಸರು ಫಯೀಂ ಬೇಗ್ ಕಾಲಿಗೆ ಗುಂಡು ಹಾರಿಸಿ‌, ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಪೊಲೀಸರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Share

WhatsApp
Follow by Email