ಒಟ್ಟಿಗೆ ಸರ್ಕಾರಿ ಕೆಲಸ ಪಡೆದುಕೊಂಡ 42 ವರ್ಷದ ತಾಯಿ, 24ರ ಮಗ

42 ವರ್ಷದ ತಾಯಿ ತನ್ನ 24 ವರ್ಷದ ಮಗನೊಂದಿಗೆ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು (Public Service Commission exam) ತೆಗೆದುಕೊಂಡು, ಏಕಕಾಲದಲ್ಲಿ ಇಬ್ಬರೂ ಉತ್ತೀರ್ಣರಾಗಿದ್ದಾರೆ.

ತಿರುವನಂತಪುರಂ: ಕೇರಳದಲ್ಲಿ (Kerala) ತಾಯಿಯೊಬ್ಬರು (Mother) ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. 42 ವರ್ಷದ ತಾಯಿ ತನ್ನ 24 ವರ್ಷದ ಮಗನೊಂದಿಗೆ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು (Public Service Commission exam) ತೆಗೆದುಕೊಂಡು, ಏಕಕಾಲದಲ್ಲಿ ಇಬ್ಬರೂ ಉತ್ತೀರ್ಣರಾಗಿದ್ದಾರೆ. ತಾಯಿ ಮತ್ತು ಮಗ ಇಬ್ಬರೂ ಒಟ್ಟಿಗೆ ಓದಲು ಪ್ರಾರಂಭಿಸಿದ್ದರು. ಪಿಎಸ್‌ಸಿಯಲ್ಲಿ ಯಶಸ್ವಿಯಾದ ಸಂತೋಷವನ್ನು ನಗುತ್ತಿರುವ ತಾಯಿಯ ಮುಖದಲ್ಲಿ ಕಾಣಬಹುದು. ತಾಯಿ-ಮಗ ಕೇರಳದ ಮಲಪ್ಪುರಂ ನಿವಾಸಿಗಳು ಎಂದು ಹೇಳಲಾಗುತ್ತಿದೆ. ತಾಯಿಯ ಹೆಸರು ಬಿಂದು ಮತ್ತು ಮಗನ ಹೆಸರು ವಿವೇಕ್.

ಈ ಸಾಧನೆಯ ಕುರಿತು ಮಾಧ್ಯಮಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡ ವಿವೇಕ್, ನಾವು ಒಟ್ಟಿಗೆ ಕೋಚಿಂಗ್ ತರಗತಿಗಳನ್ನು ತೆಗೆದುಕೊಂಡಿದ್ದೇವೆ. ನನ್ನ ತಾಯಿ ಮತ್ತು ತಂದೆ ಎಲ್ಲಾ ರೀತಿ ಬೆಂಬಲ ನೀಡಿದ್ದರಿಂದ ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು. ನಮ್ಮ ಶಿಕ್ಷಕರಿಂದ ನಮಗೆ ಸಾಕಷ್ಟು ಸ್ಫೂರ್ತಿ ಸಿಕ್ಕಿದೆ. ನಾನು, ಅಮ್ಮ ಒಟ್ಟಿಗೆ ಓದಿದ್ದೇವೆ ಆದರೆ ನಾವು ಒಟ್ಟಿಗೆ ಯಶಸ್ವಿಯಾಗುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ. ಈ ಇಬ್ಬರಿಗೆ ತುಂಬಾ ಸಂತೋಷವಾಗಿದ್ದೇವೆ ಎಂದಿದ್ದಾರೆ.

ಮಗನಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಲು ಯತ್ನಿಸಿದ್ದ ತಾಯಿ


ವರದಿಗಳ ಪ್ರಕಾರ, ತಾಯಿ ಬಿಂದು ಮಗ ವಿವೇಕ್‌ನನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುವ ವಿಶಿಷ್ಟ ಮಾರ್ಗವನ್ನು ಕಂಡುಹಿಡಿದರು. ವಿವೇಕ್ 10 ವರ್ಷದವನಿದ್ದಾಗ, ಬಿಂದು ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಆದ್ದರಿಂದ ಅವನು ಓದಲು ಪ್ರಾರಂಭಿಸಿದನು. ಇದರ ಪರಿಣಾಮ ಮಗನ ಜೊತೆಗೆ ಬಿಂದುವಿನ ಓದು ಕೂಡ ಪ್ರಾರಂಭವಾಯಿತು. ಇಬ್ಬರೂ ಅಂತಿಮವಾಗಿ ಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಈ ಯಶಸ್ಸನ್ನು ಸಾಧಿಸಿದ್ದಾರೆ.

ಈ ಹುದ್ದೆಗಳ ಪರೀಕ್ಷೆಯಲ್ಲಿ ತಾಯಿ-ಮಗ ಉತ್ತೀರ್ಣರಾಗಿದ್ದಾರೆ


ತಾಯಿ ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ ಪರೀಕ್ಷೆಯಲ್ಲಿ 38 ನೇ ರ್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದರೆ, ಅವರ ಮಗ ವಿವೇಕ್ ಕೊನೆಯ ದರ್ಜೆಯ ಸರ್ವೆಂಟ್ ಪರೀಕ್ಷೆಯಲ್ಲಿ 92 ನೇ ರ್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಬಿಂದು ಈ ಹಿಂದೆ ಮೂರು ಪ್ರಯತ್ನಗಳನ್ನು ನೀಡಿದ್ದರು, ಎರಡು LGS ಪರೀಕ್ಷೆಗೆ ಮತ್ತು ಒಂದು LDC ಗೆ, ಅಂತಿಮವಾಗಿ ನಾಲ್ಕನೇ ಬಾರಿಗೆ ಯಶಸ್ಸನ್ನು ಪಡೆದರು. ಹತ್ತಿರದ ಸಂಬಂಧಿಕರು ಹೇಳುವ ಪ್ರಕಾರ, ಬಿಂದು 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Share
WhatsApp
Follow by Email