ಜನತಾ ಕರ್ಫ್ಯೂ’: ಭಾನುವಾರ ಬೆಳಗಾವಿಯಲ್ಲಿ ಹೊಟೇಲ್ ಗಳು ಬಂದ್!

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ‘ಜನತಾ ಕರ್ಫ್ಯೂ’ ಕರೆಗೆ ಹಲವಾರು ಸಂಘಟನೆಗಳು ಬೆಂಬಲ ಘೋಷಿಸಿದ್ದು, ಅದಕ್ಕೆ ಬೆಳಗಾವಿಯಲ್ಲಿ ಹೊಟೇಲ್ ಮಾಲೀಕರ ಸಂಘವೂ ಸಾಥ್ ನೀಡಿದೆ. ಹೀಗಾಗಿ, ಭಾನುವಾರ ಬೆಳಗಾವಿಯಲ್ಲಿ ಎಲ್ಲ ಹೊಟೇಲ್ ಮತ್ತು ಉಪಹಾರ ಗೃಹಗಳು ಬಂದ್ ಇರಲಿವೆ.
ಇಂದು ಕೀರ್ತಿ ಹೊಟೇಲ್ ನಲ್ಲಿ ನಡೆದ ಬೆಳಗಾವಿ ಹೊಟೇಲ್ ಮಾಲೀಕರ ಪದಾಧಿಕಾರಿಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು. ಅಂದು ಬೆಳಿಗ್ಗೆ ೭ ಗಂಟೆಯಿಂದ ರಾತ್ರಿ ೯ ಗಂಟೆ ವರೆಗೆ ಹೊಟೇಲ್ ಮತ್ತು ಉಪಹಾರ ಗೃಹಗಳು ಬಂದ್ ಇರಲಿವೆ. ಉಳಿದ ದಿನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎಂದಿನಂತೆ ಅವು ಕಾರ್ಯನಿರ್ವಹಿಸಲಿದೆ.
Share

WhatsApp
Follow by Email