ಐಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮತ್ತು ಗ್ರಾಪಂ ಅಧಿಕಾರಿಗಳ ವತಿಯಿಂದ ಹಮ್ಮಿಕೊಂಡ ಕೊರಾನ್ ವೈರಸ್ ಬಗ್ಗೆ ಭಯಬೇಡಾ ಎಚ್ಚರವಿರಲಿ

ಅರಟಾಳ ; ಮನುಷ್ಯನ ಶ್ವಾಸಕೋಶ ಸೇರಿ ಸೀನು, ಕೆಮ್ಮಿನ ಮೂಲಕ ಸ್ಪರ್ಶ, ಹಸ್ತಲಾಘವ, ಗಾಳಿ ಮೂಲಕ ಹರಡುವ ಕರೋನಾ ವೈರಸ್ ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ ಎಂದು ಐಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ ಪೂರ್ಣಿಮಾ ಅಂಕಲಗಿ ಹೇಳಿದರು.
ಶುಕ್ರವಾರ ಅವರು ಗ್ರಾಮದ ಶ್ರೀ ಮಾಳಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪ್ರಾಥಮಿಕ ಆರೋಗ್ಯ ಕೇಂದ್ರದ ಮತ್ತು ಗ್ರಾಪಂ ಅಧಿಕಾರಿಗಳ ವತಿಯಿಂದ ಹಮ್ಮಿಕೊಂಡ ಕೊರಾನ್ ವೈರಸ್ ಬಗ್ಗೆ ಭಯಬೇಡಾ ಎಚ್ಚರವಿರಲಿ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ, ಕರೋನ ವೈರಸ್ ಭೀತಿ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಸಾರ್ವಜನಿಕರು ಕರೋನಾ ವೈರಸ್ ಬಗ್ಗೆ ಜಾಗೃತೆವಹಿಸಬೇಕು. ಜ್ವರ, ಕೆಮ್ಮು, ಎದೆನೂವು ಕಾಣಿಸಿಕೊಂಡರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸನೇ ಮಾಡಿಸಬೇಕು. ಮನೆಯ ಸೂತ್ತಮೂತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮನೆಯಲ್ಲಿ ಎಲ್ಲರು ಕಾಯಿಸಿ ಆರಿಸಿದ ನೀರು ಕುಡಿಯಯುವುದರಿಂದ ವೈರಸ್‌ಗಳು ನಾಶವಾಗುತ್ತವೆ. ಸೀನು ಬಂದಾಗ ಕೈಹಿಡಿದು ಸೀನದೆ ಅರಬ್ಬಿ ಕರಿಚೀಪ್ ಬಳಸಿ ಸೀನಬೇಕು ಅರಬ್ಬಿಯಲ್ಲಿ ವೈರಸ್ ತಡೆಗಟ್ಟುವ ಶಕ್ತಿ ಇದೆ.. ಹೊರಗಡೆಯಿಂದ ಮನೆಗೆ ಬಂದಾಗ ಎಲ್ಲರು ಸಾಬೂನಿನಿಂದ ಕೈ ತೋಳೆದುಕೊಂಡು ಮನೆಯೊಳಗೆ ಹೋಗಬೇಕು ಎಂದರು.
ಗ್ರಾಪಂ ಪಿಡಿಒ ಎ. ಜಿ. ಎಡಕೆ ಮಾತನಾಡಿ, ಕೊರಾನ್ ವೈರಸ್ ಬಗ್ಗೆ ಭಯಬೇಡಾ ಎಲ್ಲರು ಎಚ್ಚರವಹಿಸಿದರೆ ಕರೋನಾ ವೈರಸ್ ತಗುಲುವುದಿಲ್ಲ. ಈಗಾಗಲ್ಲೇ ಗ್ರಾಮ ಪಂಚಾಯತ ವ್ಯಾಪ್ತಿಯ ಮೂರು ಗ್ರಾಮಗಳಿಗೆ ಮುಂಜಾಗೃತ ಕ್ರಮವಾಗಿ ಪಾಗಿಂಗ ಮೂಲಕ ಔಷಧಿ ಸಿಂಪಡಿಸಲಾಗುವುದು. ಬೇರೆಡೆಯಿಂದ ಯಾರಾದರು ಹೊಸಬರು ಗ್ರಾಮಕ್ಕೆ ಬಂದರೆ ತಕ್ಷಣ ಗ್ರಾಪಂ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿ. ತಕ್ಷಣ ನಾವು ಅವರನ್ನು ಭೇಟ್ಟಿಯಾಗಿ ಅವರ ಆರೋಗ್ಯ ತಪಾಸನೆ ಮಾಡಲಾಗುವುದು. ಎಲ್ಲರು ಹೆಚ್ಚು ಸ್ವಚ್ಛತೆಗೆ ಮಹತ್ವ ಕೊಡಿ ಎಂದರು.
ಗ್ರಾಪo ಅಧ್ಯಕ್ಷ ಶಾರಕ್ಕ ಗೌಡಪನ್ನವರ, ಆರೋಗ್ಯ ಇಲಾಖೆ ಸಿಬ್ಬಂದಿ ಮಲ್ಲಿಕಾರ್ಜುನ ಜಂಬಗಿ, ಕಾವೇರಿ ಗಾಣಿಗರ, ಉಪಾದ್ಯಕ್ಷ ಶಿವಾನಂದ ಹೊನಗೌಡ, ಕಾರ್ಯದರ್ಶಿ ಜೀತೇಂದ್ರ ಗದಾಡೆ, ಹಣಮಂತ ಪೂಜಾರಿ, ರಮೇಶ ಜಾಧವ, ಚಂದ್ರಪ್ಪ ನಾಟೀಕರ, ಮಾಳಪ್ಪ ಕಾಂಬಳೆ, ಸಿದ್ದವ್ವ ಪೂಜಾರಿ, ಸುಸಿಲಾ ಜಂಬಗಿ, ಸುನಿತಾ ಡಂಗಿ, ಮುತ್ತವ್ವ ಪೂಜಾರಿ, ಮಾಲಾ ಕಾಂಬಳೆ, ಶಾಂತಾ ಕಟ್ಟಿಮನಿ, ಭುವನೇಶ್ವರಿ ಮರಡಿ, ಅಮೃತಾ ಡಂಗಿ, ಎಮ್ ಪಿ. ಪಾಟೀಲ ಇದ್ದರು.
Share
WhatsApp
Follow by Email