ಬೈಕ್ ಅಪಘಾತ ಇಬ್ಬರ ಸಾವು

ಅರಟಾಳ ; ಶುಕ್ರವಾರ ರಾತ್ರಿ 8 ಗಂ ಸಮೀಪದ ಹಾಲಳ್ಳಿ ಗ್ರಾಮದ ಸಾವಳಗಿ ರಸ್ತೆಯ ಹೊರವಲಯದ ಅವಜೀಕರ ದ್ವಾರಬಾಗಿಲ ಹತ್ತಿರ ಬೈಕ್ ಅಪಘಾತವಾಗಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ದುರ್ದೈವಿಗಳು ಕನ್ನಾಳ ಗ್ರಾಮದ ಅನೀಲ ಅಣ್ಣಪ್ಪ ಹಿರೇಕುರಬರ ವಯಸ್ಸು 30. ವಿಠ್ಠಲ ಸಿದ್ದಪ್ಪ ದಾಶ್ಯಾಳ ವಯಸ್ಸು 28. ಇಬ್ಬರು ದ್ರಾಕ್ಷೀ ಕೆಲಸ ಮುಗಿಸಿ ಕನ್ನಾಳ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಅಪಘಾತವಾಗಿದೆ. ಸ್ಥಳಕ್ಕೆ ಐಗಳಿ ಪಿಎಸ್‌ಐ ಭೇಟ್ಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
Share
WhatsApp
Follow by Email