ಸಮಾಜದಲ್ಲಿ ಕೈಗೊಳ್ಳುವ ಸ್ವಾರ್ಥರಹಿತ ಜನಪರ ಸೇವೆ ಮುಖ್ಯ : ವಿರಕ್ತಮಠದ ಪೀಠಾಧಿಪತಿ ಪಂಚಾಕ್ಷರಿ ಸ್ವಾಮಿಜಿ

ಬೈಲಹೊಂಗಲ : ಮನುಷ್ಯ ಎಷ್ಟು ವರ್ಷ ಬದುಕುತ್ತಾನೆ ಎಂಬುವದು ಮುಖ್ಯವಲ್ಲ ಬದುಕಿನುದ್ದಕ್ಕೂ ಸಮಾಜದಲ್ಲಿ ಕೈಗೊಳ್ಳುವ ಸ್ವಾರ್ಥರಹಿತ ಜನಪರ ಸೇವೆ ಮುಖ್ಯ ಎಂದು ವಿರಕ್ತಮಠದ ಪೀಠಾಧಿಪತಿ ಪಂಚಾಕ್ಷರಿ ಸ್ವಾಮಿಜಿ ಹೇಳಿದರು.
ಸಮೀಪದ ಯಕ್ಕುಂಡಿ ಗ್ರಾಮದ ವಿರಕ್ತಮಠದಲ್ಲಿ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಅನಾಥ ಮಕ್ಕಳ ಜೋತೆ ಆಚರಿಸಿಕೊಂಡ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಕೇವಲ ಸ್ವಾರ್ಥ ಮನೋಭಾವನೆಯಿಂದ ತಮ್ಮ ಉದ್ದಾರಕ್ಕಾಗಿಯೆ ಶ್ರಮಿಸುವ ಜನರನ್ನೆ ಬಹುಸಂಖ್ಯೆಯಲ್ಲಿ ಕಾಣುವಾಗ ಸಾಮಾಜಿಕ ಜೀವನದಲ್ಲಿ ಜನಪರ ಕಾಳಜಿ ಜನಸಾಮಾನ್ಯರ ಅಳಲಿಗೆ ತಮ್ಮನ್ನ ತಾವು ಸಮರ್ಪಿಸಿಕೊಂಡ, ಅನ್ಯಾಯದ ವಿರುದ್ದ ಸತತ ರೈತಪರ ಹೋರಾಟಗಳಲ್ಲಿ ಭಾಗಿಯಾಗಿ ನ್ಯಾಯಕೊಡಿಸುವ ಕೆಲವೇ ವ್ಯಕ್ತಿಗಳಲ್ಲಿ ನಮ್ಮ ನಾಡಿನ ಎಫ್.ಎಸ್.ಸಿದ್ದನಗೌಡರ ಕೂಡಾ ಒಬ್ಬರು ನಮಗೆ ಹೆಮ್ಮೆ ಎಂದರು. ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯರಂತೆ ಮೋಜು ಮಸ್ತಿ ಡ್ಯಾನ್ಸ್ ಮಾಡಿ ಜನ್ಮದಿನ ಆಚರಿಸುವ ಈ ದಿನಮಾನಗಳಲ್ಲಿ ಮಠದ ಅನಾಥ ಮಕ್ಕಳ ಜೋತೆ ಯಾವದೆ ಆಡಂಭರ ಇಲ್ಲದೆ ಸಿಹಿ ಹಂಚಿ ಸರಳ ರೀತಿಯಲ್ಲಿ ದೀನದಲಿತರ ಸಹಾಯಕ್ಕಾಗಿ ಮಾಡಿಕೊಳ್ಳುವ ಜನ್ಮ ಆಚರಣೆ ನಿಜವಾಗಲು ಶ್ಲಾಘನೀಯ ಎಂದರು. ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ತಂದೆ, ತಾಯಿ ಮತ್ತು ಪಾಲಕರ ಅವಕೃಪಗೆ ತುತ್ತಾದ ಮಕ್ಕಳನ್ನು ಕಳೆದ ೨೫ವರ್ಷಗಳಿಂದ ಹುಡುಕಿ ಕರೆತಂದು ಅವರಿಗೆ ಮಾತೃ ವಾತ್ಸಲ್ಯ ನೀಡುತ್ತಿರುವ ಪೂಜ್ಯರ ಕಾರ್ಯ ನಾಡಿಗೆ ಆದರ್ಶಪ್ರಾಯವಾಗಿದೆ. ಅವರ ಮಾಡುವ ಕಾರ್ಯದಲ್ಲಿ ಪ್ರತಿ ವರ್ಷ ನಮ್ಮ ಅಳಿಲು ಸೇವೆಯಂಬAತೆ ನನ್ನ ಜನ್ಮ ದಿನಾಚರಣೆಯನ್ನು ಆ ಅನಾಥ ಮಕ್ಕಳ ಜನ್ಮದಿನಾಚರಣೆಯಾಗಿ ಆಚರಿಸುತ್ತಿರುವದ ನನ್ನ ಜೀವನ ಸಾರ್ಥಕವಾಗಿದೆ ಎಂದರು. ನಮ್ಮ ಜೀವನ ಪ್ರಕೃತಿಯಲ್ಲಿ ಎಲ್ಲವನ್ನು ಉಚಿತವಾಗಿ ಪಡೆದುಕೊಂಡು ಬೆಳೆಯುತ್ತೆವೆ. ಆದರೆ ಸಮಾಜದ ಸ್ವಸ್ಥ್ಯಹಾಳುಮಾಡಿ ಹಣ ಗಳಿಸುವತ್ತ ವಾಲುತ್ತೆವೆ. ಇದನ್ನು ಬಿಟ್ಟು ಸಮಾಜದಲ್ಲಿ ನೊಂದವರ ಕಣ್ಣಿರು ಒರೆಸುವ ಕಾರ್ಯದಲ್ಲಿ ಕೈಜೋಡಿಸಬೇಕು. ತುಳಿತಕ್ಕೆ, ಅನ್ಯಾಯಕ್ಕೆ ಒಳಗಾದ ಜನರ ಸೇವೆಯಲ್ಲಿ ಸಿವುವ ಆನಂದ ಮತ್ತೆಲ್ಲಿ ಸಿಗಲಾರದು ಮಕ್ಕಳು ತಮ್ಮಬಗ್ಗೆ ಅಸಡ್ಡೆ ತೋರದೆ ಜಗತ್ತಿನ ಸಾಧಕರ ಚರಿತ್ರೆಯಂತೆ ಇತಿಹಾಸ ಸೃಷ್ಟಿಸುವ ಸಾಧನೆ ಮಾಡಬೇಕೆಂದರು. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಕಾಸಯ್ಯ ಮಠದ, ಶಂಕರ ಪಾಶ್ಚಾಪೂರ, ಮುಕ್ತಾರ ಮುಲ್ಲಾ, ಗಂಗಪ್ಪ ಪೂಜೇರ, ಮಕ್ತುಂಮಸಾಬ ಭಡೆಖಾನ್ ವೇದಿಕೆ ಮೆಲಿದ್ದರು. ಪ್ರಕಾಶ ಕಮ್ಮಾರ, ಬಸವರಾಜ ಬೆನಕಟ್ಟಿ, ಮಾಹಾಬೂಬಸುಬಾನಿ ಸರವನ್ನವರ, ದಿಲಾವರಸಾಬ ನಾದಾಫ ಮಠದ ಅನಾಥ ಮಕ್ಕಳು ಶಿಕ್ಷಕ ವೃಂದ ಇದ್ದರು. ಶಿಕ್ಷಕರಾದ ಆರ್.ಆರ್.ಅಂಗಡಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಎಮ್.ಎಸ್.ವಿಭೂತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Share
WhatsApp
Follow by Email