ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ರಾಜ್ಯದ 50 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಸರ್ಕಾರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಏಪ್ರಿಲ್ 4ರ ವರೆಗೆ 50 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ರಜೆಯನ್ನು ಘೋಷಿಸಿದೆ. ಈ ಕುರಿತಂತೆ ಆದೇಶ ಹೊರಡಿಸಿರುವ ಸರ್ಕಾರದ ಉಪ ಕಾರ್ಯದರ್ಶಿ ಚಂದ್ರಹಾಸ ಗಂ ತಾಳೂಕರ, ಇತ್ತೀಚೆ ಕೋವಿಡ್-19 ವೈರಾಣು ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ. ಈ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೇ ಮಾದರಿಯ ಕ್ರಮವನ್ನು ಅನುಸರಿಸುವಂತೆ ಭಾರತ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಿಗಳಿಗೆ ಸೂಚನೆ ನೀಡಿರುತ್ತದೆ. ಹೀಗಾಗಿ ಕೋವಿಡ್-19 ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಕ್ರಮವಾಗಿ 50 ವರ್ಷ ಮೀರಿದ ಹಾಗೂ ಮಧುಮೇಹ, ಉಸಿರಾಟದ ತೊಂದರೆಗಳು, ಮೂತ್ರಪಿಂಡ ಖಾಲಿಯೆ, ಸೇರಿದಂತೆ ಇತರೆ ಮಾರಣಾಂತಿಕ ಖಾಯಿಲೆಗಳಿಂದ ಬಳಲುತ್ತಿರುವ ಸರ್ಕಾರಿ ನೌಕರರು ಸ್ವಸುರಕ್ಷಿತ ವಲಯದಲ್ಲಿ ಇರಲು ಇಚ್ಚಿಸಿದಲ್ಲಿ, ದಿನಾಂಕ 04-04-2020ರ ವರೆಗೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರು ಪಡಿಸದೇ, ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
ಮೂಡಲಗಿ : ತಾಲೂಕಿನ ಮೂನ್ಯಾಳ ಗ್ರಾಮದ ಹಳ್ಳದ ದಂಡೆಯ ಮೇಲೆ ಇರುವ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿರುವ ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಎಮ್.ಎನ್ ಸಿಂಧೂರ, ಸಿಬ್ಬಂಧಿಗಳಾದ ಆರ್. ಎಸ್ ಪೂಜೇರಿ, ಐ.ಎ ಸೌದಾಗರ, ಎಲ್.ಪಿ ಹಂಪಿಹೋಳಿ, ಡಿ.ಜಿ ಕೋಣ್ಣೂರ, ಬಿ.ಆರ್ ಪಾಟೀಲ್, ಜಿ.ಎನ್ ಕಾಗವಾಡ, ಎಸ್.ಜಿ ಮಜ್ಜಿನಕೋಪ ಆಧಿಕಾರಿಗಳು ದಾಳಿ ನಡೆಸಿ ರಾಯಬಾಗ ತಾಲೂಕಿನ ಮೂಗಳಖೋಡ ಗ್ರಾಮದ ಗೋಪಾಲ ನಾಮದೇವ ಕದಮ(50), ಮಚ್ಚೇಂದ್ರ ದತ್ತು ಕದಮ(55), ಪಾಲಭಾಂವಿ ಗ್ರಾಮದ ರಫೀಕ್ ಅಪ್ಪಾಸಾಬ ನಾಯಿಕವಾಡಿ(35) ಎನ್ನಲಾದ ಮೂರು ಆರೋಪಿಗಳನ್ನು ಬಂದಿಸಿದ್ದಾರೆ ಇವರು 3.38.355 ರೂ ಕಿಮ್ಮತ್ತಿನ 112 ಕೆಜಿ ತೂಕದ ಶ್ರೀಗಂಧ ಮರದ ತುಕ್ಕಡಿಗಳನ್ನು ಹಾಗೂ ಸಾಗಾಟ ಮಾಡಲು ಬಳಸುತ್ತಿದ್ದ ಮೋಟರ್ ಸೈಕಲ್ ಮತ್ತು ಮರವನ್ನು ಕಡಿಯಲು ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಡಲಗಿ ಪೋಲಿಸ್ ಠಾಣೆಯ ಅಪರಾಧ ಸಂಖ್ಯೆ 44/2020 ಕಲಂ : 379 ಐಪಿಸಿ, 86 87 ಕರ್ನಟಕ ಅರಣ್ಯ ಕಾಯ್ದೆ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿ ಮೂರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟಪ್ರಭಾ : ಜಗತ್ತಿನಾದ್ಯಾಂತ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೋನಾ ರೋಗ ನಿಯಂತ್ರಣ ನಮ್ಮೆಲ್ಲ ಜವಾಬ್ದಾರಿ, ಮನುಕುಲದ ಉಳಿವಿಗಾಗಿ ಸರ್ಕಾರದ ಆದೇಶದ ಮೇರೆಗೆ ಮಾರ್ಚ 31ರ ವರೆಗೂ ಅನಗತ್ಯವಾಗಿ ಯಾರು ಮನೆಯಿಂದ ಹೊರಗಡೆ ಬರಬಾರದು. ಈ ಕಾಯಿಲೆ ಸಾಂಕ್ರಾಮಿಕ ರೋಗವಾಗಿದ್ದೂ ಯಾರು ಭಯಪಡುವ ಅವಶ್ಯಕತೆಯಿಲ್ಲ. ಆದರೇ ಮುನ್ನೇಚ್ಚಿಕೆ ಅತ್ಯಂತ ಅವಶ್ಯಕ ಎಂದು ರಾಜಾಪೂರ ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿ ಉದಯಕುಮಾರ ಬೆಳ್ಳುಂಡಗಿ ಜನರಿಗೆ ಕರೆ ನೀಡಿದರು. ಗ್ರಾಮದಲ್ಲಿ ಇಂದು ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಯುಗಾದಿ ಹಬ್ಬದ ನಿಮಿತ್ಯವಾಗಿ ಪ್ರತಿವರ್ಷ ನಡೆಯುತ್ತಿದ್ದ ಶ್ರೀ ಚೂನಮ್ಮಾದೇವಿಯ ದೀಡ್ ನಮಸ್ಕಾರ, ಪಲ್ಲಕ್ಕಿ ಸೇವೆ ಹಾಗೂ ಇನ್ನಿತರೇ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಅದರೊಂದಿಗೆ ಕಂದಾಯ ಇಲಾಖೆಯ ಎಲ್ಲ ಕೆಲಸಗಳನ್ನು ಮಾರ್ಚ 31ರ ವರೆಗೆ ಗ್ರಾಮದಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರಾಜಾಪೂರ ಗ್ರಾಮ ಸಂಪೂರ್ಣ ಲಾಕ್-ಡೌನ್ ಆಗುತ್ತದೆ ಆದ ಕಾರಣ ದಯಮಾಡಿ ಎಲ್ಲ ಸಾರ್ವಜನಿಕರು ಸಕರಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ತುಂಬೆಲ್ಲ ಕೋರೋನಾ ರೋಗವನ್ನು ಹೇಗೆ ತಡೆಗಟ್ಟಬೇಕು? ಬರದಂತೆ ಮುಂಜಾಗೃತೆಯನ್ನು ಹೇಗೆ ತೆಗೆದುಕೊಳ್ಳಬೇಕು? ಎಂಬುದರ ಕುರಿತು ಕಾರ್ಯದರ್ಶಿ ನಾಗೇಶ ಹಾಸಲ್ಕರ್, ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು, ತಾಲೂಕಾ ಪಂಚಾಯತಿ ಸದಸ್ಯರು, ಜಿಲ್ಲಾ ಪಂಚಾಯತಿ ಸದಸ್ಯರು ಸೇರಿದಂತೆ ಗ್ರಾಮದ ಹಿರಿಯರು, ಆಶಾ ಕಾರ್ಯಕರ್ತೆಯರೂ, ಅಂಗನವಾಡಿ ಕಾರ್ಯಕರ್ತೆಯರೂ, ಯುವಕರು ಸೇರಿ ದ್ವನಿ ವರ್ಧಕ ಬಳಕೆ ಮಾಡಿ ಹೆಮ್ಮಾರಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಪ್ರತಿವಾರ ನಡೆಯುವ ಬುಧವಾರದ ಸಂತೆಯನ್ನು (ಬಜಾರ್) ಬಂದ್ ಮಾಡಲಾಗಿದೆ. ಅತೀ ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿ, ಹಾಲಿನ ಡೇರಿ ಹೊರತುಪಡಿಸಿ ಗ್ರಾಮದ ಇನ್ನೂಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಸಾರ್ವಜನಿಕ ಪ್ರಕಟೆಣೆಯಲ್ಲಿ ರಾಜಾಪೂರ ಗ್ರಾಮ ಪಂಚಾಯತಿ ಅಭಿವೃಧಿ ಅಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ಬೆಳಗಾವಿ ಜಿಲ್ಲೆಯಾದ್ಯಂತ 144 ಕಲಂ ಮೇರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು ಅಥವಾ ಒಟ್ಟಾಗಿ ಸಂಚರಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಒಂದು ವೇಳೆ 144 ಕಲಂ ಆದೇಶ ಉಲ್ಲಂಘಿಸುವುದು ಕಂಡುಬoದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಆದರೆ ಜಿಲ್ಲಾಧಿಕಾರಿ ಆದೇಶವನ್ನು ಗಾಳಿಗೆ ತೂರಿದ ಮೂಡಲಗಿ ತಾಲೂಕು ಆಡಳಿತ ಹಾಗೂ ನಾಗರಿಕರು. ಕೊರೊನಾ ವೈರಸ್ ಹಿನ್ನೆಲೆ ಜಿಲ್ಲೆಯ ಸಂತೆ ಮಾರುಕಟ್ಟೆ ರದ್ದುಗೊಳಿಸಲಾಗಿದೆ, ರಾಜ್ಯ ಸರ್ಕಾರ ಕೊರೊನಾ ಭೀತಿಯಿಂದ ಬೆಳಗಾವಿಗೂ ಲಾಕ್ ಡೌನ್ ಎಲ್ಲವನ್ನೂ ಸಂಪೂರ್ಣವಾಗಿ ಉಲ್ಲಂಘಿಸಿ ಇಂದು ಸಂಜೆ ಮೂಡಲಗಿಯ ಸಂತೆಯಲ್ಲಿ ಜನಜಾತ್ರೆ ನಡೆಯಿತು. ಆದರೆ ಮೂಡಲಗಿ ತಾಲೂಕ ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕರು ಮಾತ್ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ನೀಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ರಾಜಾರೋಷವಾಗಿ ಸಂತೆ ನಡೆಸಲಾಗುತ್ತಿದೆ. ನಿರ್ಬಂಧ ವಿಧಿಸಲು ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
ಶ್ರೀಶೈಲ : ಶ್ರೀಶೈಲ ಕ್ಷೇತ್ರಕ್ಕೆ ಸಮಾನವಾದ ಕ್ಷೇತ್ರ ಇನ್ನೊಂದಿಲ್ಲ. ಹಿಂದೂ ಧರ್ಮಭೂಮಿಯ ನಾಬಿಯ ಸ್ಥಳವಿದು ಹಾಗೂ ದೇಹದ ಮಧ್ಯ ಭಾಗವಿದ್ದಂತೆ. ಪುಣ್ಯ ಕ್ಷೇತ್ರಕ್ಕೆ ಪ್ರಾಚಿನ ಕಾಲದಿಂದಲು ಮಲ್ಲಿಕಾರ್ಜುನ ಹಾಗೂ ಬ್ರಹ್ಮರಾಂಬಾ ದೇವಿಯ ದರ್ಶನಕ್ಕೆ ಬರುವುದು ಆಚರಣೆಯಲ್ಲಿ ಸಾಗಿ ಬಂದಿದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ, ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. ಅವರು ಶ್ರೀಶೈಲದ ಅಡಕೇಶ್ವರದಲ್ಲಿ ಬಂಡಿಗಣಿಯ ದಾನೇಶ್ವರ ಶ್ರೀಗಳ 8 ದಿನಗಳ ಕಾಲ ನಿರಂತರ ದಾಸೋಹ ನಡೆದ ಸ್ಥಳಕ್ಕೆ ಭೇಟಿ ನೀಡಿ ಭಕ್ತರು ಮತ್ತು ದಾಸೋಹವನ್ನು ಉದ್ದೇಶಿಸಿ ಮಾತನಾಡುತ್ತಾ ವರ್ಷದಿಂದ ವರ್ಷಕ್ಕೆ ಶ್ರೀಶೈಲಕ್ಕೆ ಭಕ್ತರು ಹೆಚ್ಚಾಗುತ್ತಿದ್ದಾರೆ, ಭಕ್ತಿಯಿಂದ ಬಂದವರಿಗೆ ದೇವರು ಒಲುಮೆಯಾಗುವದು ಆದರೆ ಈ ವರ್ಷ ಕರೋನಾ ವೈರಸ್ ಬಯಾನಕ ರೋಗದಿಂದ ಭಕ್ತರಿಗೆ ಅಸ್ತವ್ಯಸ್ಥವಾಗಿದೆ. ಆದರೆ ಆರೋಗ್ಯದ ದೃಷ್ಠಿಯಿಂದ ಸರಕಾರದ ಆದೇಶವನ್ನು ಪಾಲಿಸುವುದು ಅನಿವಾರ್ಯವಾಗಿದೆ. “ಕರೋಣ” ರೋಗವು ಎಲ್ಲರೂ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿಕೊಳ್ಳಬೇಕು. ಪ್ರತಿ ವರ್ಷ ದಾಸೋಹ ರಾಜೋಪಚಾರ ಇಷ್ಟಾರ್ಥ ಭೋಜನ ಮಾಡಿಸಿ ದಿನಾಲು ಲಕ್ಷಾಂತರ ಭಕ್ತರಿಗೆ ದಾಸೋಹ ನಡೆಸುವ ದಾನೇಶ್ವರ ಶ್ರೀಗಳ ಕಾರ್ಯದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು ಹಾಗೂ ಈ ದಾಸೋಹ ಸೇವೆ ಉತ್ತರೋತ್ತರವಾಗಿ ಬೆಳೆದು ಜಗತ್ತಿನ ತುಂಬ ಶ್ರೀಗಳ ಕೀರ್ತಿ ಹಬ್ಬಲಿ ಎಂದು ಹಾರೈಸಿ “ದಾಸೋಹ ಸಾಮ್ರಾಟ್” ಅನ್ನುವುದರಲ್ಲಿ ಸಂಶಯವಿಲ್ಲ, ಮಲ್ಲಿಕಾರ್ಜುನೆ ದಾನೇಶ್ವರ ಶ್ರೀಗಳಲ್ಲಿ ಅಡಗಿ ವರ್ಷದ 365 ದಿನಗಳಲ್ಲಿ ದಾಸೋಹದಲ್ಲಿ ನಡೆಸುತ್ತಿದಾರೆ.ಇಂತಹ ಬೃಹತ್ ಪ್ರಮಾಣ ದಾಸೋಹ ಇದು ಒಂದು ಪವಾಡವೇ ಸರಿ.. ದಾಸೋಹಗಳಲ್ಲಿ ಮುಖ್ಯವಾಗಿ ಶ್ರೀಶೈಲ ಪಂಡರಪೂರ, ತುಳಜಾಪೂರ, ಯಲ್ಲಮ್ಮನಗುಡ್ಡ ಹಾಗೂ ಯಡೂರ ಸೇರಿದಂತೆ ವರ್ಷದಲ್ಲಿ 282 ಪುಣ್ಯ ಕ್ಷೇತ್ರಗಳಲ್ಲಿ ದಾಸೋಹ ನಡೆಸುವದು , ದಾಸೋಹ ಸೇವೆಯಲ್ಲಿ ಬಾಗಿಯಾಗಿರುವ ಸದ್ಭಕ್ತರೆಲ್ಲರಿಗೂ ಮಲ್ಲಿಕಾರ್ಜುನ ದೇವರ ಆಶಿರ್ವಾದ ಇರಲಿ ಎಂದು ಹಾರೈಸಿದರು, ದಾಸೋಹ ಸ್ಥಳಕ್ಕೆ ಪಿ.ಆರ್.ಒ ಮತ್ತು ಸಿ.ಎಸ್.ಒ ಅಧಿಕಾರಗಳಾದ ಟಿ.ಶ್ರೀನಿವಾಸ ರಾವ್. ಬಿ.ತಿರುಮಲಯ ಬೇಟಿ ನೀಡಿ ಹರುಷ ವ್ಯಕ್ತಪಡಿಸಿದರು ಇದೆ ಸಂದರ್ಭದಲ್ಲಿ ಅಂಬಿಕಾ ನಗರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಡಿಗಣಿಯ ದಾನೇಶ್ವರ ಶ್ರೀಗಳು ,ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮಂಡಳಿಯವರು, ಪೊಲೀಸ ಅಧಿಕಾರಿಗಳು , ಸುಮಂಗಲಾ ತಾಯಿ ಪಾಟೀಲ, ರಾಮಣ್ಣಾ ಮೇಟಿ, ವೀಣಾ ಹೂಗಾರ(ವಕೀಲರು), ಚಿಕ್ಕು ಬಂಗಿ, ಸಂಗಪ್ಪಾ ಹಂದಿಗುoದ, ಗಂಗಪ್ಪ ರಾಜಾಪೂರ, ಶ್ರೀಶೈಲ ಕಾಂತಿ, ಚನ್ನಮಲ್ಲಪ್ಪ ಕಂಪು, ಅಲ್ಲಪ್ಪ ಗಣೇಶವಾಡಿ, ಶಿವು ಹಿರೇಮಠ ಸೇರಿದಂತೆ ಸಹಸ್ರಾರು ಭಕ್ತರು ಪಾದಯಾತ್ರಿಕರು ಉಪಸ್ಥಿತರಿದ್ದರು
ಬೆಳಗಾವಿ: ಕೋವಿಡ್-19 ನಿಯಂತ್ರಣಕ್ಕೆ ಸಂಬoಧಿಸಿದoತೆ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಕರೋನಾ ಸೈನಿಕ(ಸ್ವಯಂಸೇವಕ) ಡಿ.ಎನ್.ಮಿಸಾಳೆ ಅವರ ನೇತೃತ್ವದಲ್ಲಿ ನಗರದ ವಿವಿಧ ಪ್ರದೇಶಗಳು ಮತ್ತು ಪೊಲೀಸ್ ಠಾಣೆಗೆ ತೆರಳಿ ಜಾಗೃತಿ ಮೂಡಿಸಿದರು. ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ ವಿಭಾಗ ಬೆಳಗಾವಿ ಕಚೇರಿ ಹಾಗೂ ಕ್ಯಾಂಪ್ ಪೊಲೀಸ್ ಠಾಣೆಗೆ ತೆರಳಿ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ವಿಧಾನ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎನ್.ಮಿಸಾಳೆ ಅವರು, ಎಲ್ಲ ನಾಗರಿಕರು ಸಹಕರಿಸಿದರೆ ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್-19 ವೈರಸ್ ಹರಡುವಿಕೆ ತಡೆಗಟ್ಟುವುದು ಸುಲಭ ಸಾಧ್ಯ. ಆದ್ದರಿಂದ ಜನರು ಭಯಭೀತರಾಗದೇ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಹೇಳಿದರು. ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಚಂದ್ರಪ್ಪ, ಕ್ಯಾಂಪ್ ಠಾಣೆಯ ಸಿಪಿಐ ಡಿ.ಸಂತೋಷಕುಮಾರ್‌ಅ ವರನ್ನು ಭೇಟಿ ಮಾಡಿ ಕರೋನಾ ಕುರಿತು ಮಾಹಿತಿಯನ್ನು ನೀಡಿ, ಠಾಣೆಯ ಸಿಬ್ಬಂದಿಗೆ ಜಾಗೃತಿ ಕರಪತ್ರಗಳನ್ನು ವಿತರಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಎಲ್.ವಿ.ಶ್ರೀನಿವಾಸನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ 19 ಗೆ ಸಂಬoಧಿಸಿದoತೆ ಒಟ್ಟು ಐದು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅದರಲ್ಲಿ ಒಂದು ವರದಿ ನೆಗೆಟಿವ್ ಬಂದಿರುತ್ತದೆ. ಒಂದು ವರದಿ ತಿರಸ್ಕತಗೊಂಡಿರುವುದರಿoದ ಅದನ್ನು ಕೂಡ ನೆಗೆಟಿವ್ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಯೋಗಾಲಯಕ್ಕೆ ಕಳಿಸಲಾದ ವರದಿಗಳ ಪೈಕಿ ಒಂದು ಮಾದರಿಯನ್ನು ಪರೀಕ್ಷೆಗೆ ಪರಿಗಣಿಸಿರುವುದಿಲ್ಲ; ಒಂದು ನೆಗೆಟಿವ್ ಬಂದಿರುತ್ತದೆ. ಆದ್ದರಿಂದ ಐದು ಮಾದರಿಗಳ ಪೈಕಿ ಎರಡು ಮಾದರಿಗಳು ನೆಗೆಟಿವ್ ಎಂದು ಅಧಿಕೃತ ಪ್ರಕಟಿಸಲಾಗಿದೆ. ಇನ್ನುಳಿದ ಮೂರು ಮಾದರಿಗಳ ವರದಿ ನಿರೀಕ್ಷಿಸಲಾಗಿದೆ. ಹೊಸದಾಗಿ ಮತ್ತೊಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು. ಬೈಲಹೊಂಗಲ-ಸುಳ್ಳುಸುದ್ದಿ; ಜಿಲ್ಲಾಧಿಕಾರಿ ಸ್ಪಷ್ಟನೆ: ಬೈಲಹೊಂಗಲ ಭಾಗದಲ್ಲಿ ಒಂದು ಪ್ರಕರಣ ಪಾಸಿಟಿವ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸ್ಪಷ್ಟ ಪಡಿಸಿದ್ದಾರೆ. ಆ ಭಾಗದ ವರದಿ ನೆಗೆಟಿವ್ ಬಂದಿರುವುದರಿoದ ಜನರು ಆತಂಕಪಡಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ. 144 ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ- ಜಿಲ್ಲಾಧಿಕಾರಿ ಎಚ್ಚರಿಕೆ: ಈಗಾಗಲೇ 144 ಕಲಂ ಮೇರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು ಅಥವಾ ಒಟ್ಟಾಗಿ ಸಂಚರಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಒಂದು ವೇಳೆ 144 ಕಲಂ ಆದೇಶ ಉಲ್ಲಂಘಿಸುವುದು ಕಂಡುಬoದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ 229 ಜನರು ವಿದೇಶದಿಂದ ಆಗಮಿಸಿರುತ್ತಾರೆ. ಇದರಲ್ಲಿ 194 ಗೃಹ ಕ್ವಾರಂಟೈನ್ ನಲ್ಲಿದ್ದಾರೆ. 34 ಜನರು 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. ಇಬ್ಬರು ಐಸೋಲೇಷನ್ ವಾರ್ಡ ನಲ್ಲಿದ್ದು, ಗಂಟಲು ದ್ರವ ಮಾದರಿ ಕಳಿಸಲಾದ ವ್ಯಕ್ತಿಗಳು ಆರೋಗ್ಯವಾಗಿದ್ದಾರೆ. ಬಿಮ್ಸ್ 80 ಹಾಗು ಕೆ.ಎಲ್.ಇ 60 ಜನರ ಕ್ವಾರಂಟೈನ್ ಗೆ ಅವಕಾಶವಿದೆ. ಇದಲ್ಲದೇ ವಸತಿ ನಿಲಯ ಹಾಗೂ ಖಾಸಗಿ ಹೋಟೆಲ್ ಸೇರಿದಂತೆ ಸುಮಾರು 500 ಹಾಸಿಗೆಗಳನ್ನು ಕ್ವಾರಂಟೈನ್ ಗೆ ಸಿದ್ಧಪಡಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಸರ್ಕಾರ ಹೊಸ ನಿಬಂಧನೆಗಳನ್ನು ಪಾಲಿಸಲು ಕ್ರಮಕೈಗೊಳ್ಳಲಾಗಿದೆ. ಅತ್ಯಾವಶ್ಯಕ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಜನರ ಸಂಚಾರಕ್ಕೆ ನಿರ್ಬಂಧವಿಲ್ಲ. ಆದರೆ ಐದಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರಲು ನಿರ್ಬಂಧವಿದೆ. ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮತ್ತಷ್ಟು ಬಿಗಿಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಂತರ್ ಜಿಲ್ಲಾ ಗಡಿಯಲ್ಲೂ ತಪಾಸಣೆ: ಜಿಲ್ಲೆಯ ನೆರೆಹೊರೆಯ ಗಡಿಯಲ್ಲಿ ಕೂಡ ಆರೋಗ್ಯ ಇಲಾಖೆಯ ತಂಡಗಳನ್ನು ನಿಯೋಜಿಸಿ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ನೆರೆಯ ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ವಿವರಿಸಿದರು. ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಂಬoಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಗಡಿಯಲ್ಲಿ ಪ್ರವೇಶಿಸುವ ಸಣ್ಣ ಪ್ರಯಾಣಿಕರ ವಾಹನಗಳಲ್ಲಿರುವ ಜನರ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು
ಅರಟಾಳ ; ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ೨೦೧೭-೧೮ನೇ ಸಾಲಿನ ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಾಣವಾಗಿರುವ ಗಟಾರ, ಸಿಸಿ ರಸ್ತೆ, ಸಮುಧಾಯ ಭವನ ಕಾಮಗಾರಿ ಕೆಲಸ ಪ್ರಾರಂಭವಾಗಿ ಎರಡು ವರ್ಷ ಕಳೆದರು ಇನ್ನು ಪೂರ್ಣವಾಗಿಲ್ಲ. ನಿರ್ಮೀಸಿರುವ ಗಟಾರದಲ್ಲಿ ಅಲ್ಲಲ್ಲಿ ನೀರು ನಿಂತು ಗಬ್ಬು ನಾರುತ್ತಿದೆ. ಸಮಸ್ಯೆ ಕುರಿತು ಸಂಬoಧಿಸಿದ ಅಧಿಕಾರಿಗಳಿಗೆ ತಿಳಿಸಿದರು ಪ್ರಯೋನವಾಗಿಲ್ಲವೆಂದು ಸಾರ್ವಜನಿಕರ ಆರೋಪಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯಾದ ಟಿಪ್ಪು ಸುಲ್ತಾನ ಸರ್ಕಲ್‌ದಿಂದ ಗಣಪತಿ ಸರ್ಕಲ್‌ವರೆಗೆ ಹಾಕಿರುವ ಗಟಾರ, ಗ್ರಾಮ ಪಂಚಾಯತಿಯಿoದ ದುರ್ಗಾದೇವಿ ದೇವಸ್ಥಾನದವರೆಗೆ ಹಾಕಿರುವ ಗಟಾರ ಸರಿಯಾಗಿಲ್ಲ. ಗಟಾರದಲ್ಲಿ ಅಲ್ಲಲ್ಲಿ ನೀರು ನಿಂತು ಗಬ್ಬು ನಾರುತ್ತಿದೆ. ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಜಿಪಂ ಇಂಜಿನೇಯರ ಹಾಗೂ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರು ಸಮಸ್ಯ ಬಗ್ಗೆ ಹರಿದಿಲ್ಲ. ಆದರೆ ಸೊಳ್ಳೆಗಳ ಕಾಟ ಮಾತ್ರ ಹೆಚ್ಚಾಗಿವೆ. ಸರ್ಕಾರದ ಕೆಲಸ ದೇವರ ಕೆಲಸವೆನ್ನುವ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡುವುದಕ್ಕೆ ಹಿಂದೆಟ್ಟು ಹಾಕುತ್ತಿರುವುದು ಯಾಕೆ ಎನ್ನುತ್ತಾರೆ ಗ್ರಾಪಂ ಸದಸ್ಯ ಮಾಳಪ್ಪ ಕಾಂಬಳೆ. ಆದರೆ ನಿರ್ಮಿಸಿರುವ ಗಟಾರ ಕಾಮಗಾರಿ ಸರಿಯಾಗಿಲ್ಲವೆಂದು ಗ್ರಾಮ ಪಂಚಾಯತ ಸದಸ್ಯರು ಸಭೆಯಲ್ಲಿ ಚರ್ಚಿಸಿ ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರು ಇದುವರೆಗೆ ಯಾವುದೇ ಪ್ರಯೋಜವಾಗಿಲ್ಲ. ಅರಟಾಳ ಗ್ರಾಮದಲ್ಲಿ ಗಟಾರ ನಿರ್ಮಿಸಲು ಅಷ್ಟೋಂದು ತೊಂದರೆ ಇಲ್ಲ. ಇಳಿಜಾರಿನಿಂದ ಕೂಡಿದ ಗ್ರಾಮದಲ್ಲಿ ಗಟಾರ ನಿರ್ಮಿಸುವುದು ಅತಿ ಸುಲಭ. ಆದರೆ ಹೆಸರಿಗೆ ಮಾತ್ರ ಗಟಾರ ಎನ್ನುವಂತಾಗಿದೆ. ಗಟಾರ ಸಮಸ್ಯ ಪರಿಹರಿಸುವ ಕೆಲಸಕ್ಕೆ ಗುತ್ತಿಗೆದಾರರು ಮುಂದಾಗದಿರುವುದು ಏಕೆ? ಎನ್ನುವ ಆರೋಪ ಸಾರ್ವಜನಿಕರದಾಗಿದೆ. ಕೊರೋನಾ ವೈರಸ್ ಹಾವಳಿ ಬಗ್ಗೆ ಪ್ರತಿದಿನ ದೂರದರ್ಶನ, ಪತ್ರಿಕೆಗಳಲ್ಲಿಂದ ತಿಳಿದುಕೊಳ್ಳುತ್ತೆವೆ. ಆದರೆ ನಮ್ಮೂರಿನಲ್ಲಿ ಹಾಕಿರುವ ಗಟಾರದಲ್ಲಿ ನೀರು ನಿಂತು ಕೆಟ್ಟ ವಾಸನೆಯಿಂದ ಹರಡುತ್ತಿದೆ. ಅಧಿಕಾರಿಗಳು ಮಾತ್ರ ನೋಡಿ ನೋಡದಂತ್ತಿರುವುದು ಯಾಕೆ? ಬಾಕ್ಸ ; ಗಟಾರ ಸಮಸ್ಯ ಕುರಿತು ಇಂಜೀನೆಯರ ಗಮನಕ್ಕೆ ತರಲಾಗಿದೆ ಹಾಗೂ ಗುತ್ತಿಗೆದಾರರಿಗೆ ಗಟಾರದಲ್ಲಿ ಅಲ್ಲಲ್ಲಿ ನೀರು ನಿಂತುಕೊAಡು ಕೆಟ್ಟ ವಾಸನೆ ಬಿರುತ್ತಿದೆ ಎಂದು ತಿಳಿಸಿದ್ದೇವೆ. ಇಲಾಖಾ ಅಧಿಕಾರಿಗಳ ಜೋತೆಗೆ ಮಾತನಾಡುತ್ತೆನೆ. -ಎ. ಜಿ. ಏಡಕೆ ಪಿಡಿಓ ಅರಟಾಳ. ಬಾಕ್ಸ ; ಕೆಲಸ ವಿಳಂಬವಾಗಿರುವುದಕ್ಕೆ ಗುತ್ತಿಗೆದಾರರಿಗೆ ಇಗಾಗಲ್ಲೆ ನಾಲ್ಕು ಬಾರಿ ನೋಟಿಸ್ ಕೊಟ್ಟಿದ್ದೆವೆ. ಗಟಾರ ಸಮಸ್ಯಯನ್ನು ಬಗ್ಗೆ ಹರಿಸಲಾಗುವುದು ಎಂದು ತಿಳಿಸಿದ್ದಾರೆ. ಮತ್ತೊಮ್ಮೆ ಮಾತನಾಡುತ್ತೆನೆ. – ಎಸ್. ಎ. ಕಟ್ಟಿಮನಿ ಇಂಜಿನೇಯರ
ಬೆಳಗಾವಿ : ಕೊರೋನಾ ಕಂಪನಕ್ಕೆ ಜಿಲ್ಲೆಯ ಬಹುತೇಕ ಸಂತೆ ಮಾರುಕಟ್ಟೆ ರದ್ದುಗೊಳಿಸಿಲಾಗಿದೆ, ರಾಜ್ಯದ ಸರಕಾರ ಕೊರೋನಾ ಭೀತಿಯಿಂದ ಬೆಳಗಾವಿಗೂ ಲಾಕ್ ಡೌನ್ ಎಲ್ಲವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕೊಣ್ಣೂರನ ಸಂತೆಯಲ್ಲಿ ಜನಜಾತ್ರೆ ಹಬ್ಬಿಕೊಂಡಿದೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಮಣ್ಣಿಯದ ನಾಗರಿಕರು ಕೊರೋನಾ ಭಯವಿಲ್ಲದೆ ಬೃಹತ್ತಾಗಿ ಸಂತೆ ಖರೀದಿಯಲ್ಲಿ ವ್ಯಾಪಾರಿ, ಗ್ರಾಹಕರು ಮಗ್ನರಾಗಿದ್ದಾರೆ ಆಶ್ಚರ್ಯಕರ ಸಂಗತಿ ಉದ್ಭವಾಗಿದೆ. ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಸರಕಾರದ ಆದೇಶ ಅಲ್ಲಗೆಳಲಾಗಿದೆ. ಈ ಮಾರುಕಟ್ಟೆ ಜನಸಂದಣಿಯಿಂದ ವ್ಯಾಪಕ ಚರ್ಚೆಯಾಗಿದ್ದು ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗುವಂತೆ ಸ್ಥಳೀಯ ನಾಗರೀಕರು ದೂರಿದ್ದಾರೆ. ಬೆಳಗಾವಿಗೂ ಲಾಕ್ ಡೌನ್ ಹೇರಿರುವ ಸಿಎಂ ಅವರ ಮಾತಿಗೆ ಇಲ್ಲಿನ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮಲ್ಲವಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ದಿಂದ ರಾಜಾರೋಷವಾಗಿ ಸಂತೆ ನಡೆಸಲಾಗುತ್ತಿದ್ದು ನಿರ್ಬಂಧ ವಿಧಿಸಲು ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಸಾವಳಗಿ, ಘಟಪ್ರಭಾ, ಗೋಕಾಕ ರೊಡ, ಮರಡಿಮಠ, ಶಿವಾಪೂರ, ಘೊಡಗೇರಿಗೆ ಸಂಪರ್ಕ ಕೊಂಡಿಯಾಗಿರುವ ಕೊಣ್ಣೂರ ಸಂತೆಗೆ ಸಾವಿರಾರು ರೈತರು, ಕಾಳ ಸಂತೆ ಜನರು ಹಾಗೂ ಸಾರ್ವಜನಿಕರಿಂದ ಆತಂಕ ಎದುರಾಗಿದೆ. ಇಷ್ಟೆಲ್ಲ ಕಾರ್ಯ ಚಟುವಟಿಕೆ ನಡೆದರೂ ಇಲ್ಲಿನ ಪೊಲೀಸರು ಮತ್ತು ಸ್ಥಳಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ಬೆಂಗಳೂರ : ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 144 ಸೆಕ್ಷನ್ ಮುಂದುವರಿಯಲಿದೆ. ರಾಜ್ಯಾದ್ಯಂತ ಲಾಕ್‌ಡೌನ್ ಸೇರಿದಂತೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ವಿಪಕ್ಷಗಳೊಂದಿಗೆ ಚರ್ಚಿಸಿ ಇಂದು ಸಂಜೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸಭೆಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ದಿನವಿಡೀ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಬಡವರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಹೋಂ ಕ್ವಾರಂಟೈನ್‌ನಲ್ಲಿಡುವುದು ಸವಾಲಿನ ಕೆಲಸವಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದು, ರಾಜ್ಯದಲ್ಲಿ 30 ಫೀವರ್ ಕ್ಲಿನಿಕ್ ಆರಂಭಿಸಲಾಗುವುದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1000 ಬೆಡ್‌ಗಳನ್ನು ಕೊರೋನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಅನಿರ್ದಿಷ್ಟಾವಧಿಯವರೆಗೆ ನಿರ್ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.