144 ಕಲಂ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು ಮೂಡಲಗಿಯ ಸಂತೆಯಲ್ಲಿ ಜನಜಾತ್ರೆ

ಈಗಾಗಲೇ ಬೆಳಗಾವಿ ಜಿಲ್ಲೆಯಾದ್ಯಂತ 144 ಕಲಂ ಮೇರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು ಅಥವಾ ಒಟ್ಟಾಗಿ ಸಂಚರಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಒಂದು ವೇಳೆ 144 ಕಲಂ ಆದೇಶ ಉಲ್ಲಂಘಿಸುವುದು ಕಂಡುಬoದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.
ಆದರೆ ಜಿಲ್ಲಾಧಿಕಾರಿ ಆದೇಶವನ್ನು ಗಾಳಿಗೆ ತೂರಿದ ಮೂಡಲಗಿ ತಾಲೂಕು ಆಡಳಿತ ಹಾಗೂ ನಾಗರಿಕರು.
ಕೊರೊನಾ ವೈರಸ್ ಹಿನ್ನೆಲೆ ಜಿಲ್ಲೆಯ ಸಂತೆ ಮಾರುಕಟ್ಟೆ ರದ್ದುಗೊಳಿಸಲಾಗಿದೆ, ರಾಜ್ಯ ಸರ್ಕಾರ ಕೊರೊನಾ ಭೀತಿಯಿಂದ ಬೆಳಗಾವಿಗೂ ಲಾಕ್ ಡೌನ್ ಎಲ್ಲವನ್ನೂ ಸಂಪೂರ್ಣವಾಗಿ ಉಲ್ಲಂಘಿಸಿ ಇಂದು ಸಂಜೆ ಮೂಡಲಗಿಯ ಸಂತೆಯಲ್ಲಿ ಜನಜಾತ್ರೆ ನಡೆಯಿತು.
ಆದರೆ ಮೂಡಲಗಿ ತಾಲೂಕ ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕರು ಮಾತ್ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ನೀಡುತ್ತಿಲ್ಲ.
ಅಧಿಕಾರಿಗಳ ನಿರ್ಲಕ್ಷದಿಂದ ರಾಜಾರೋಷವಾಗಿ ಸಂತೆ ನಡೆಸಲಾಗುತ್ತಿದೆ. ನಿರ್ಬಂಧ ವಿಧಿಸಲು ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
Share
WhatsApp
Follow by Email