ಲಾಕ್‌ಡೌನ್‌ಗೆ ಮೂಡಲಗಿ ಪಟ್ಟಣ ಸಂಪೂರ್ಣ ಸ್ತಬ್ಧ

ಮೂಡಲಗಿ : ಕೊರೊನಾ ವೈರಸ್ ಭೀತಿ ಹಿನ್ನಲೆ ಇಡೀ ರಾಜ್ಯಾಧ್ಯಂತ ಲಾಕ್‌ಡೌನ್ ಆದೇಶ ಹಿನ್ನಲೆ ಮೂಡಲಗಿ ಪಟ್ಟಣವೂ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಜನಜೀವನ ಸಂಚಾರ ಸ್ಥಗಿತವಾಗಿದೆ.
ಹೌದು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಹೀಗಾಗಿ ಮೂಡಲಗಿ ಪಟ್ಟಣವು ಮಂಗಳವಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಯುಗಾದಿ ಇದ್ದರೂ ಮಾರುಕಟ್ಟೆ ಖಾಲಿ ಖಾಲಿಯಾಗಿವೆ.
ಪಟ್ಟಣದ ಮಾರುಕಟ್ಟೆಯ ಪ್ರಮುಖ ಬೀದಿಗಳು ಶಾಂತವಾಗಿವೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯುತ್ತಿದ್ದಾರೆ.
Share
WhatsApp
Follow by Email