ಕೊರೊನಾ : ಜನರ ರಕ್ಷಣೆ ಮಾಡುತ್ತಿರುವ ಪೋಲಿಸರಿಗೆ ರಕ್ಷಣೆ ಕೊಡದ ಸರಕಾರ

ವರದಿ : ಮಲ್ಲು ಬೋಳನವರ
ವಿಶ್ವದಲ್ಲೆಡೆ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಹಿನ್ನೆಲೆ ರಾತ್ರಿ ಹಗಲು ಬಿಸಿಲು ಅನ್ನದೆ ತಮ್ಮ ಮನೆ ಬಿಟ್ಟು ದಿನಾಲು ಜನರನ್ನು ರಕ್ಷಣೆ ಮಾಡುತ್ತಿರುವ ಪೋಲಿಸರಿಗೆ ಅಧಿಕಾರಿಗಳಿಗೆ ಯಾವದೆ ರಕ್ಷಣೆ ಕೂಡಾ ಸರಕಾರ ನೀಡಿಲ್ಲಾ.
ಹೌದು ಕೊರೊನಾ ವೈರಸ್ ಬರಿ ಸಾರ್ವಜನಿಕರಿಗೆ ಮಾತ್ರ ಬರುತ್ತಾ ಜನರ ರಕ್ಷಣೆ ಮಾಡುವ ಅಧಿಕಾರಿಗಳಿಗೆ ಬರೋದಿಲ್ವ ಅವರು ಮನುಷ್ಯರು ಅಲ್ವಾ, ಪೊಲೀಸ್ ಅಧಿಕಾರಿಗಳಿಗೂ ಹೆಂಡತಿ ಮಕ್ಕಳು ತಂದೆ ತಾಯಿ ಒಂದು ಕುಟುಂಬ ಅಂತ ಇವೆ.
ಅವರಿಗೂ ಏನಾದರೂ ಆದರೆ ಆ ಕುಟುಂಬದ ಗತಿಯೇನು ಎಂಬುವುದು ಸರ್ಕಾರ ಕೂಡ ಯೋಚನೆ ಮಾಡಿಲ್ಲ.
ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಉಪಹಾರದ ವ್ಯವಸ್ಥೆ ಕೂಡ ಮಾಡಿಲ್ಲ, ಅವರು ಕೂಡ ಮನುಷ್ಯರು ತಾನೆ ? ಕರ್ತವ್ಯಕ್ಕೆ ಬಂದರೆ ಕುಡಿಯುವ ನೀರು ಸಿಗುತ್ತಿಲ್ಲ, ಇನ್ನು ಉಪಹಾರ ಎಲ್ಲಿ ಸಿಗಬೇಕು. ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ.
ಆದಷ್ಟು ಬೇಗ ಸರ್ಕಾರ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಉಪಹಾರದ ವ್ಯವಸ್ಥೆ ಹಾಗೂ ಕೊರೊನಾದಿಂದ ರಕ್ಷಣೆ ಸಿಗುವಂತೆ ಕ್ರಮಕೈಗೊಳ್ಳಬೇಕು.
Share
WhatsApp
Follow by Email