
ಅವರು ಗುರುವಾರ ಸಮೀಪದ ಹಾಲಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತ ವತಿಯಿಂದ ಕರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು ಕಾಣಿಸಿಕೊಂಡರೆ ಆಲಕ್ಷ ಮಾಡದೆ ಆರೋಗ್ಯ ಕೇಂದ್ರಕ್ಕೆ ಹೋಗಿ ವೈದ್ಯರನ್ನು ಭೇಟ್ಟಿಯಾಗಬೇಕು. ಕರೋನಾ ವೈರಸ್ ಬಗ್ಗೆ ಸಾರ್ವಜನಿಕರು ಅಂಜುವ ಅವಶ್ಯಕತೆಯಿಲ್ಲ. ಎಲ್ಲರು ಎಚ್ಚರವಹಿಸಿದರೆ ವೈರಸ್ ಭಯವಿಲ್ಲ. ಗ್ರಾಮ ಪಂಚಾಯತ ವ್ಯಾಪ್ತಿಯ ಮೂರು ಗ್ರಾಮಗಳಿಗೆ ಮುಂಜಾಗೃತ ಕ್ರಮವಾಗಿ ಪಾಗಿಂಗ ಮೂಲಕ ಔಷಧಿ ಸಿಂಪಡಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಅವರು ಪ್ರತಿ ಕ್ಷಣ ಗ್ರಾಮದ ಮೇಲೆ ನಿಗಾ ಇಟ್ಟು, ಕರೋನಾ ವೈರಸ್ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವರು. ಆದಷ್ಟು ಎಲ್ಲರು ಗುಂಪು, ಗುಂಪಾಗಿ ನಿಲುವುದು. ಕಟ್ಟೆಗಳ ಮೇಲೆ ಕುಳಿತುಕೊಳ್ಳವುದು ಮಾಡಬಾರದು. ಒಬ್ಬರಿಂದ ಒಬ್ಬರು ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಕೈತೊಳೆದುಕೊಂಡು ಮನೆಯೊಳಗೆ ಹೋಗಬೇಕು ಎಂದರು.
ಕಾರ್ಯದರ್ಶಿ ಜೀತೇಂದ್ರ ಗದಾಡೆ, ಗ್ರಾಪಂ ಉಪಾಧ್ಯಕ್ಷ ಶಿವಾನಂದ ಹೊನಗೌಡ, ಸದಸ್ಯರಾದ ಸಿದ್ದು ಅಥಣಿ, ಚಂದ್ರಪ್ಪ ನಾಟೀಕರ, ರಾಯಪ್ಪ ಗೌಡಪನ್ನವರ, ಶಿವಲಿಂಗ ಬೇವನೂರ, ರಾವಸಾಬ ಬಿರಾದಾರ, ಅಣ್ಣಪ್ಪ ಬೇಡರಟ್ಟಿ, ಅಂಗವಿಕಲರ ಸಂಘದ ತಾಲೂಕಾ ಅಧ್ಯಕ್ಷ ಡಾ ಬಸವರಾಜ ಕೆಂಚಗೊoಡ, ಚನ್ನಬಸು ಬಿರಾದಾರ, ಸದಾನಂದ ನಾವಿ, ಸದಾನಂದ ಮಾಡಗ್ಯಾಳ, ಎಮ್. ಪಿ. ಪಾಟೀಲ, ಮಹಾದೇವ ಮಾದರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯ ಕಾರ್ಯಕ್ರಮದಲ್ಲಿ ಇದ್ದರು.