ಬ್ರೇಕಿಂಗ್ ನ್ಯೂಸ್ ಹಳ್ಳೂರ : ಕೊರೊನಾ ಭೀತಿ ಹಿನ್ನೆಲೆ ಪಿಡಿಓ ಎಚ್ ವೈ ತಾಳಿಕೋಟಿ ತಂಡ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಗೆ ಗ್ರಾಮಸ್ಥರು ಮೆಚ್ಚುಗೆ 26/03/202026/03/2020 admin ಕೊರೊನಾ ಹಿನ್ನೆಲೆ ಇಡೀ ಭಾರತ ದೇಶವೇ ಲಾಕ್ ಡೌನ್ ಆಗಿದೆ. ನಡುವೆ ಗ್ರಾಮ ಪಂಚಾಯತಿಲ್ಲಿ ಕಾರ್ಯನಿರ್ವಹಿಸುವ ಪಿಡಿಓಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಪೊಲೀಸ್ ಸಿಂಬ್ಬದಿ ತಮ್ಮದೇ ಆದ ರೀತಿಯಲ್ಲಿ ಜನರ ಆತಂಕವನ್ನು ದೂರ ಮಾಡುವುದರಲ್ಲಿ ತೊಡಗಿದ್ದಾರೆ. ಕೊರೊನಾ ಆತಂಕದ ನಡುವೆಯೂ ಜನರಿಗೆ ಸೇವೆ ನೀಡುತ್ತಿರುವ ವೈದ್ಯರು, ನರ್ಸ್ ಗಳು, ಪೊಲೀಸರು, ಮಾಧ್ಯಮದವರು, ಪೌರಕಾರ್ಮಿಕರು ಮೊದಲಾದವರಿಗೆ ಗೌರವ ಸಲ್ಲಿಸುತ್ತ ೫ ನಿಮಿಷಗಳ ಚಪ್ಪಾಳೆ ತಟ್ಟವಂತೆ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಒಳ್ಳೆಯ ಸ್ಪಂದನೆಯೂ ದೊರೆಯಿತು. ಆದರೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಸುಮಾರು 15000 ಜನಸಂಖ್ಯೆ ಇರುವ ಹಳ್ಳೂರ ಗ್ರಾಮದ ಪಿಡಿಓ ಎಚ್ ವೈ ತಾಳಿಕೋಟಿ, ಗ್ರಾಮ ಲೆಕ್ಕಾಧಿಕಾರಿ ಸಂಜು ಅಗ್ನೆಪ್ಪಗೋಳ, ಪ್ರಾಥಮಿಕ ಆರೋಗ್ಯ ಕೇಂದ್ರದ ಮಹೇಶ್ ಕಂಕನವಾಡಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಎನ್ ಎಸ್ ಒಡೆಯರ್ ಅವರು ಕೊರೊನಾ ಸೋಂಕು ಗ್ರಾಮ ಪ್ರವೇಶಿಸದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೇಳಿದರೆ ನಿಮಗೂ ಒಮ್ಮೆ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಬೇಕು ಅನಿಸದೆ ಇರಲ್ಲ. ಕಳೆದ ಎರಡ್ಮೂರು ದಿನಗಳಿಂದ ಗ್ರಾಮಕ್ಕೆ ಸಾಂಗ್ಲಿ ಕೊಲ್ಲಾಪುರ ಮತ್ತು ಬೆಂಗಳೂರದಿಂದ ಕೆಲವು ಜನ ಯಾರಿಗೂ ಗೊತ್ತಿಲ್ಲದಂತೆ ಗ್ರಾಮಕ್ಕೆ ವಾಪಸಾಗಿದ್ದರು. ಈ ಕುರಿತು ಮಾಹಿತಿ ಬರುತ್ತಲೇ, ಮನೆಮನೆಯ ಸರ್ವೇ ನಡೆಸಿ, ಹಾಗೆ ಬಂದ ಜನರ ಪಟ್ಟಿ ಮಾಡಿಸಿದ್ದಾರೆ. ಸರ್ವೇ ನಡೆಸಿದಾಗ ಹಾಗೆ ಒಟ್ಟು 10 ಮಂದಿ ಹೊರಗಿನಿಂದ ಗ್ರಾಮಕ್ಕೆ ಬಂದಿರುವ ಮಾಹಿತಿ ಸಂಗ್ರಹವಾಗಿದೆ. ಇದು ಗಮನಕ್ಕೆ ಬರುತ್ತಲೇ ಅವರನ್ನು ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗಿದೆ. ಬಳಿಕ ಅವರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಅವರು ಮನೆಯಿಂದ ಹೊರಗೆ ಬರಲಾರದಂತೆ ನಿಗಾ ಇಡುವ ಜವಾಬ್ದಾರಿಯನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ವಹಿಸಲಾಗಿದೆ. ಇದಾದ ಬಳಿಕ ಕ್ರಿಮಿನಾಶಕ ಬಳಸಿ ಗ್ರಾಮದ ದೇವಸ್ಥಾನಗಳು, ಶಾಲೆಗಳು, ಸಾರ್ವಜನಿಕ ಸ್ಥಳಗಳು ಸೇರಿದಂತೆ ಗ್ರಾಮದ ತುಂಬ ಸ್ಪ್ರೇ ಮಾಡಿಸಿ ಶುಚಿಗೊಳಿಸಲಾಗಿದೆ. ನಿನ್ನೆಯಿಂದ ಗ್ರಾಮದ ಪ್ರವೇಶವನ್ನು ನಾಕಾಬಂದಿ ಮಾಡಲಾಗಿದೆ. ಹಾಗೊಂದು ವೇಳೆ ಯಾರಾದರೂ ಒಳಗೆ ಬರುತ್ತಿದ್ದರೆ, ಗ್ರಾಮದ ಹೊರಗಡೆ ಅವರನ್ನು ಪರಿಶೀಲನೆ ಮಾಡಿಸಿ ಬಳಿಕ ಒಳಗೆ ಪ್ರವೇಶ ನೀಡಲಾಗುತ್ತಿದೆ. ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿ, ವೈದ್ಯಾಧಿಕಾರಿ, ಪೊಲೀಸ್ ಸಿಬ್ಬಂದಿ, ಅವರು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೆ ತೊಂದರೆಯಾಗದಂತೆ ಪ್ರತಿದಿನ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ದಿನಸಿ ಅಂಗಡಿ ಗಳಿಗೆ ಆಕಾಶ ನೀಡಿದ್ದು. ಮತ್ತು ತರಕಾರಿ ವ್ಯಾಪಾರಸ್ಥರಿಗೆ ಗ್ರಾಮದ ಕೆಲವೆಡೆ ವ್ಯಾಪಾರ ಮಾಡಲು ಸುಸಜ್ಜಿತವಾಗಿ ಸ್ಥಳಗಳನ್ನು ಗುರುತಿಸಿ ಆ ವ್ಯಾಪಾರಸ್ಥರಿಗೆ ಗುರುತಿನ ಚೀಟಿಯನ್ನು ನೀಡಿದ್ದಾರೆ. ಕೊರೊನಾ ವೈರಸ್ ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ಗ್ರಾಮಸ್ಥರಲ್ಲಿನ ಆತಂಕ ಕಡಿಮೆ ಮಾಡುವುದು ನಮ್ಮ ಮೊದಲ ಕರ್ತವ್ಯ ಎಂದು ಎಚ್ ವೈ ತಾಳಿಕೋಟಿ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ತಾಳಿಕೋಟಿ ತಂಡ ಪರಿಸ್ಥಿತಿಗೆ ತತಕ್ಷಣ ಸ್ಪಂದಿಸುವ ಮೂಲಕ ಸೋಂಕು ಹರಡುವಿಕೆ ತಡೆಯಲು ಕೈಗೊಂಡ ಕ್ರಮಗಳಿಗೆ, ಮತ್ತು ಗ್ರಾಮಸ್ಥರಲ್ಲಿನ ಆತಂಕವನ್ನು ದೂರ ಮಾಡಲು ಮಾಡಿದ ಪ್ರಯತ್ನಗಳಿಗೆ ಒಂದು ಮೆಚ್ಚುಗೆ ಸೂಚಿಸಲೇ ಬೇಕು. ಆದರೂ ಕೆಲವು ಗ್ರಾಮಸ್ಥರು ವಿನಾಕಾರಣವಾಗಿ ತಿರುಗಾಡುವುದು ಅಂಗಡಿಗಳನ್ನು ತೆಗೆಯುವುದು ಮಾಡುತ್ತಿದ್ದಾರೆ. ಇನ್ನು ಮುಂದೆ ಗ್ರಾಮಸ್ಥರು ಹೀಗೆ ಮಾಡಿದರೆ ಕ್ರಮಕೈಗೊಳ್ಳಲಾಗುವುದೆಂದು ಎಂದು ಎಚ್ ವೈ ತಾಳಿಕೋಟಿ ತಂಡ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. Share