ಕರ್ತವ್ಯನಿರತ ಸಿಬ್ಬಂದಿಗಳಿಗೆ ಪ್ರತಿನಿತ್ಯ ಉಪಹಾರ ನೀಡುತ್ತಿರುವ ಸಮಾಜಸೇವಕರು

ಅಥಣಿ: ದೇಶದ ಜನರಲ್ಲಿ ಆತಂಕ   ಮೂಡಿಸಿದ ಕರೋನ ವೈರಸ್ ಮುಂಜಾಗ್ರತ ಕ್ರಮವಾಗಿ ಭಾರತಸರ್ಕಾರ ಲಾಕ್ ಡೌನ್ ಘೋಷಿಸಿದ್ದು ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರತಿದಿನ ಬೆಳಗಿನ ಉಪಹಾರವನ್ನು ಪೂರೈಸುತ್ತಿರುವ ಸಾಮಾಜಿಕ ಕಳಕಳಿಯುಳ್ಳ ಶ್ರೀ ರಾಮನಗೌಡ ಪಾಟೀಲ ( ಶಿವನೂರ ಗೌಡರ್) ಹಾಗೂ ವಿಜಯ ನೆಮಗೌಡರ್ (ಚಾಕಲೇಟ್ ಗೌಡರ) ರವರು ಪ್ರತಿದಿನ ಬೆಳಗಿನ ಉಪಹಾರವನ್ನು ಪೂರೈಸುತ್ತಿದ್ದು ಸದರಿ ಇಬ್ಬರಿಗೂ ಎಲ್ಲ ಪೌರಕಾರ್ಮಿಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ .

ಅಥಣಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಹಾಗೂ ಪುರಸಭೆ ಮತ್ತು ಸಂಕಷ್ಟದಲ್ಲಿರುವ ಕಾರ್ಮಿಕರು ಭಿಕ್ಷುಕರಿಗೆ ಕೂಡ ಊಟ ನೀಡಿ ಮಾನವೀಯತೆ ಮೆರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ತಮ್ಮ ಜೀವದ ಹಂಗು ತೊರೆದು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಜೀವಿಗಳಿಗೆ ಮಿಡಿಯುತ್ತಿರುವ ಮನಸ್ಸುಗಳನ್ನು ನೋಡಿದರೆ ನಿಜಕ್ಕೂ ಅನುಕರಣೀಯ ಆದರ್ಶ ವೆನಿಸುತ್ತದೆ. ಹೌದು ಎಲ್ಲರೂ ಕೂಡ ಹೀಗೆ ಇಂತಹ ಸಂಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಹಸ್ತ ನೀಡಿದರೆ ಸುಂದರ ಸಮಾಜ ರಚನೆ ಸಾಧ್ಯ ಎನ್ನುವಂತಾಗಿದೆ.

Share
WhatsApp
Follow by Email