ಅಥಣಿ :ಕೋವಿಡ್-19 ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ ಸಂಸದ ಅಣ್ಣಾಸಾಹೇಬ ಜೋಲೆ.

ಅಥಣಿ: ನಮ್ಮ ಜಿಲ್ಲೆಯಲ್ಲಿ ಕೋವಿಡ್-19 ಬಂದಿಲ್ಲ ಎಂಬ ಉದಾಸೀನ ಯಾವುದೇ ಕಾರಣಕ್ಕೂ ಮಾಡದಿರಿ, ರಾಜ್ಯದಲ್ಲಿ ಕೋರೋನಾ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಅಧಿಕಾರಿಗಳು ಜನರಲ್ಲಿ ಜಾಗ್ರತಿ ಮೂಡಿಸುವದರ ಜೊತೆಗೆ ಅಗತ್ಯ ಸಿದ್ದತಾ ಕ್ರಮಗಳನ್ನು ಕೂಡಲೇ ಮಾಡಿಕೊಳ್ಳಬೇಕು ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.
ಅವರು ಶನಿವಾರ ಸಂಜೆ ಇಲ್ಲಿನ ತಾ.ಪಂ ಸಭಾ ಭವನದಲ್ಲಿ ತಾಲೂಕಾಡಳಿತದೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಕೋವಿಡ್-19 ಅಥವಾ ಕೋರೋನಾ ವೈರಸ್ ವ್ಯಾಪಕವಾಗಿ ಹರಡದಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಲಾಕಡೌನ್ ಘೋಷಿಸಿದೆ. ಅಲ್ಲದೇ ಚಿಕಿತ್ಸೆಗೆ ಬೇಕಾಗುವ ಅಗತ್ಯ ಸವಲತ್ತು ಮತ್ತು ಹಣಕಾಸಿನ ನೆರವು ನೀಡುತ್ತಿವೆ. ಈ ವೈರಾಣು ನಮ್ಮ ಜನರಿಗೆ ಹರಡದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸುವದು ಅಗತ್ಯವಿದೆ.ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಮೂಲಕ ಜನಜಾಗ್ರತಿ ಮೂಡಿಸಬೇಕು. ಜನರು ಮನೆಯಿಂದ ಹೊರಗೆ ಬರದಂತೆ ತಿಳುವಳಿಕೆ ನೀಡಿ, ಅವರಿಗೆ ಬೇಕಾಗುವ ಅಗತ್ಯ ವಸ್ತುಗಳ ಪುರೈಕೆಗೆ ವ್ಯವಸ್ಥೆ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಪಾಸಿಟಿವ್ ಪ್ರಕರಣಗಳು ವರಿಯಾಗದೇ ಇರುವದು ಅತ್ಯಂತ ಸಮಾದಾನಕರ ಸಂಗತಿಯಾಗಿದೆ.ಆದರೆ ಉದಾಸೀನತೆ ಬೇಡ,ನೇರೆಯ ಮಹಾರಾಷ್ಟ್ರದಲ್ಲಿ ಸೊಂಕಿತರ ಸಂಕ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೊರಗಿನಿಂದ ಬಂದವರ ಮೇಲೆ ನಿಗಾ ಇಡುವದು ಅಗತ್ಯವಿದೆ ಎಂದು ಹೇಳಿದರು.
2 ತಿಂಗಳ ಪಡಿತರ ಒಮ್ಮೆಲೆ ನೀಡಿ:
ಜನರು ಮನೆಯಿಂದ ಹೊರಗೆ ಬರದೇ ಇರುವದರಿಂದ ದಿನಸಿ ವಸ್ತುಗಳ ಮತ್ತು ಪಡಿತರ ವ್ಯವಸ್ಥೆ ಒದಗಿಸುವದು ಅಗತ್ಯವಿದೆ. ಪಡಿತರದರರಿಗೆ ತೊಂದರೆಯಾಗದoತೆ ಬೈಯೋಮೇಟ್ರಕ್ ಪದ್ದತಿ ಇಲ್ಲದೇ ರಜಿಸ್ಟರ್‍ದಲ್ಲಿ ಹೆಸರು ನಮೂದಿಸಿಕೊಂಡು ಎಪ್ರೀಲ್ ಮತ್ತು ಮೇ ತಿಂಗಳಿಗೆ ಆಗುವಷ್ಟು ಪಡಿತರ ದಾನ್ಯಗಳನ್ನು ನೀಡುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ ಪಟ್ಟಣದಲ್ಲಿ ಪುರಸಭೆಯವರು, ಗ್ರಾಮೀಣ ಪ್ರಧೇಶಗಳಲ್ಲಿ ಗ್ರಾ.ಪಂ ಅಧಿಕಾರಿಗಳು ಪ್ರತಿದಿನ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಕೊರೋನಾ ವೈರಸ್ ಬಗ್ಗೆ ಜಾಗ್ರತಿ ಮೂಡಿಸಬೇಕು. ಅನಾವಶ್ಯಕವಾಗಿ ಓಡಾಡುವ ಜನರನ್ನು ಪೋಲಿಸರು ನಿಯಂತ್ರಣ ಮಾಡಬೇಕು. ಹೊರಗಿನಿಂದ ಬಂದು ಗ್ರಾಮಗಳಲ್ಲಿ ವಾಸ ಮಾಡಿರುವ ಜನರ ಆರೋಗ್ಯದ ಮೇಲೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಬೇಕು.
ಖಾಸಗಿ ದವಾಖಾನೆಯವರಿಗೆ ಮತ್ತು ಔಷಧಿ ಅಂಗಡಿಯವರಿಗೆ ಕಡ್ಡಾಯವಾಗಿ ಆಸ್ಪತ್ರೆ ಆರಂಭಿಸುವoತೆ ಒತ್ತಾಯ ಮಾಡಬೇಡಿ, ಅವರಲ್ಲಿ ಕೆಲವರಿಗೆ ಸಿಬ್ಬಂದಿಗಳ ಕೊರತೆ, ಅಗತ್ಯ ಸೌಲಭ್ಯಗಳ ಕೊರತೆ, ಮತ್ತು ಸುರಕ್ಷತಾ ಕಿಟ್‍ಗಳ ಕೊರತೆಯಿಂದ ಕೆಲವು ಸ್ವಯಂ ಪ್ರೇರಿತವಾಗಿ ತಮ್ಮ ಆಸ್ಪತ್ರೆಯ ಮೂಲಕವೇ ವೈರಾಣು ಹರಡಬಾರದು ಎಂದು ಕ್ಲಿನಿಕ್ ಬಂದ್ ಮಾಡಿದ್ದಾರೆ. ಅವರಿಗೆ ಒತ್ತಾಯ ಮಾಡಬೇಡಿ ಎಂದು ಅಧಿಕಾರಿಗಳು ಸೂಚನೆ ನೀಡಿದರು.
ಜನರಿಗೆ ಅಗತ್ಯವಿರುವ ದಿನಸಿ ವಸ್ತುಗಳನ್ನು ಅಂಗಡಿಕಾರರು ದುಬಾರಿ ಬೆಲೆಗೆ ಮಾರುತ್ತಿರುವ ದೂರುಗಳು ಬಂದಿವೆ. ಅಧಿಕಾರಿಗಳು ಎಲ್ಲ ಅಂಗಡಿಕಾರರಿಗೆ ಈ ಬಗ್ಗೆ ಸೂಚನೆ ನೀಡಬೇಕು. ದೂರುಗಳು ಬಂದಲ್ಲಿ ಕೇಸ್ ಹಾಕಿ ಅಂಗಡಿ ಸೀಜ್ ಮಾಡಬೇಕು.
ಹೆಸ್ಕಾಂ ಅಧಿಕಾರಿಗಳು ರೈತರಿಗೆ ಟಿ.ಸಿ ಕೊಡಲು ಹಣಕ್ಕಾಗಿ ಸತಾಯಿಸುತ್ತಿರುವ ದೂರುಗಳು ಬಂದಿವೆ, ಈಗ ಬೇಸಿಗೆ ಕಾಲ ಆರಂಭವಾಗಿದ್ದು, ವಿದ್ಯುತ್ ತೊಂದರೆಯಾದoತೆ ಅಗತ್ಯ ಸ್ಥಳಗಳಲ್ಲಿ ಟ್ರಾನ್ಸಪಾರ್ಮ ಒದಗಿಸಬೇಕು ಎಂದು ಶಾಖಾಧಿಕಾರಿ ಮಲಕಪ್ಪನ ಅವರಿಗೆ ಖಡಕ ಎಚ್ಚರಿಕೆ ನೀಡಿದರು.
ಕೃಷಿ ಚಟುವಟಿಕೆಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿ:
ಅಥಣಿ ತಾಲೂಕಿನಲ್ಲಿ ರೈತರು ಈಗ ಬೆಳೆದ ಬೆಳೆಗಳ ರಾಶಿಯಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ ಬೆಳೆದಿರುವ, ದ್ರಾಕ್ಷಿ, ಮುಸಿಕಿನ ಜೋಳ, ರೇಷ್ಮೆ ಬೆಳೆಗಳಿಗೆ ಸಂಬoದಪಟ್ಟ ಅಧಿಕಾರಿಗಳು ಪ್ರತ್ಯೇಕ ಸಭೆ
ನಡೆಸಿ ರೈತರ ದಾಸ್ತಾನುಗಳ ಮಾರಾಟಕ್ಕೆ ಅಗತ್ಯ ಕ್ರಮ ಕೈಕೊಳ್ಳುವಂತೆ ಶಾಸಕ ಮಹೇಶ ಕುಮಠಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಿಲಿಂಗನವರ ಮಾತನಾಡಿ ಕೊವಿಡ್-19 ಸೊಂಕು ಹರಡದಂತೆ ತಾಲೂಕಿನ ಎಲ್ಲ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿ ಗ್ರಾ.ಪಂ ಮಟ್ಟದಲ್ಲಿ ಮತ್ತು ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.
ಈ ವೇಳೆ ತಾ.ಪಂ ಅಧ್ಯಕ್ಷೆ ಕವಿತಾ ನಾಯಿಕ, ಯುವ ಧುರೀಣ ಚಿದಾನಂದ ಸವದಿ, ತಹಶೀಲ್ದಾರ ದುಂಡಪ್ಪ ಕೋಮಾರ, ತಾ.ಪಂ.ಅಧಿಕಾರಿ ರವಿಂದ್ರ ಬಂಗಾರೆಪ್ಪನವರ, ಡಿವೈಎಸ್ಪಿ ಎಸ್.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ. ಆರೋಗ್ಯ ಅಧಿಕಾರಿ ಡಾ.ಕೊಪ್ಪದ, ಡಾ.ಚನ್ನಗೌಡ ಪಾಟೀಲ,ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ.ರಾಜೆದ್ರ ಬುರ್ಲಿ. ಬಸವರಾಜ ಯಾದವಾಡ. ಇನ್ನೀತರರು ಉಪಸ್ಥಿತರಿದ್ದರು.
ಹೆಸ್ಕಾಂ ಅಧಿಕಾರಿಗೆ ಶಾಸಕರಿಂದ ತರಾಟೆ:
ಅಥಣಿ ಇಲ್ಲಿನ ಹೆಸ್ಕಾಂ ಶಾಖಾಧಿಕಾರಿ ಮಲಕಪ್ಪನವರ ಯಾವುದೇ ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದ ಕಾರಣ ಶಾಸಕ ಮಹೇಶ ಕುಮಠಳ್ಳಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ರೈತರ ಟಿ.ಸಿ.ಗಳನ್ನು 24 ಗಂಟೆಯಲ್ಲಿ ಕೊಡಬೇಕು ಎಂಬ ನಿಯಮ ಇದ್ದರೂ ಹಣದಾಸೆ 15 ದಿನ ಕಳೆದರೂ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಕೆಟ್ಟ ಚಾಚಿಯನ್ನು ಬಿಟ್ಟು ರೈತ ವಿಷಯದಲ್ಲಿ ಸೇವಾಭಾವನೆ ಕಲಿಯಿರಿ, ಈಗ ಬೇಸಿಗೆ ಬಂದಿದೆ, ಕುಡಿಯುವ ನೀರಿನ ಸಮಸ್ಯೆ ತಲೆದೊರದಂತೆ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು

ಅಥಣಿ : ಕೃಷ್ಣಾ ನದಿ ದಾಟುತ್ತಿರುವಾಗ ದೋಣಿ ಬುಡಮೇಲಾಗಿ ಮಹಿಳೆ ಸಾವು

ಅಥಣಿ: ತಾಲೂಕಿನ ಘಟನಟ್ಟಿ ಗ್ರಾಮದ ಮೂರು ಜನ ಪುರುಷರು ಒಬ್ಬ ಮಹಿಳೆ ಜಮಖಂಡಿ ತಾಲೂಕಿನ ಹಿಪ್ಪರಗಿಗೆ ಬೀಗರಿಗೆ ಭೇಟಿಯಾಗುವ ಸಲುವಾಗಿ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಹಿಪ್ಪರಗಿ ಡ್ಯಾಮ್ ಮೇಲೆ ರಸ್ತೆ ಬಂದ್ ಆಗಿದ್ದರಿಂದ ಚಿಕ್ಕ ಬುಟ್ಟಿಯ ನಾವಿನಲ್ಲಿ ಡ್ಯಾಮ್ ಒಳಗಡೆಯ ಕೃಷ್ಣಾ ನದಿಯ ನೀರಿನಲ್ಲಿ ನದಿ ದಾಟುತ್ತಿರುವಾಗ ದೋಣಿ ಬುಡಮೇಲಾಗಿ ಮೂರು ಜನ ಪುರುಷರು ಈಜಿ ಪಾರಾಗಿದ್ದು ಒಬ್ಬ ಮಹಿಳೆ ನೀರುಪಾಲಾಗಿ ಮರಣವನ್ನಪ್ಪಿದ ಘಟನೆ ಕೃಷ್ಣಾ ನದಿಯಲ್ಲಿ ಜರುಗಿದೆ. ಕೃಷ್ಣಾ ನದಿಯಲ್ಲಿ ಮಹಿಳೆಯ ಶವಕ್ಕಾಗಿ ಹುಡುಕಾಟ ನಡೆದಿದೆ

ಹುಚ್ಚುನಾಯಿ ದಾಳಿ: ನಾಯಿಮರಿಗಳಿಗೆ ಚಿಕಿತ್ಸೆ

ಬೈಲಹೊಂಗಲ : ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ ಗಾಯಗೊಂಡಿದ್ದ ಬೀದಿನಾಯಿ ಹಾಗೂ ಎಂಟು ನಾಯಿ ಮರಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಪಶು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ಕಾಜಗಾರ ಗಲ್ಲಿಯ ಬೀದಿನಾಯಿ ಹಾಗೂ ಎಂಟು ನಾಯಮರಿ ಮೇಲೆ ಹುಚ್ಚುನಾಯಿ ದಾಳಿ ಮಾಡಿತ್ತು. ನಾಯಿ ಹಾಗೂ ನಾಯಿಮರಿಗಳು ತೀವ್ರ ಗಾಯಗೊಂಡಿದ್ದವು. ಇದನ್ನು ಕಂಡ ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿದರು. ಕೊರೊನಾ ಲಾಕ್‌ಡೌನ್ ನಡುವೆಯೂ ತಕ್ಷಣ ಸ್ಪಂದಿಸಿ ಹಿರಿಯ ಪರವೀಕ್ಷಕ ಎನ್.ಬಿ.ಮಡಿವಾಳರ, ಮಲ್ಲಿಕಾರ್ಜುನ ಕೊಡ್ಲಿವಾಡ ಆಗಮಿಸಿ ಚಿಕಿತ್ಸೆ ನೀಡಿದರು. ನಾಯಿ ಹಾಗೂ ನಾಯಿಮರಿಗಳು ಚೇತರಿಸಿಕೊಂಡಿವೆ.
ಬಾಕ್ಸ ಐಟಂ :
ಇತ್ತೀಚೆಗೆ ಹುಚ್ಚನಾಯಿ ದಾಳಿ ನಡೆಸಿ ಎಂಟು ಮರಿಗಳಿಗೆ ಜನ್ಮ ನೀಡಿದ ನಾಯಿಯೊಂದು ತೀವ್ರ ನರಳಾಡುತ್ತಿದ್ದದ್ದನ್ನು ಕಂಡು ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವೈದ್ಯಾಧಿಕಾರಿಗಳು ಕಾಳಜಿ ವಹಿಸಿ ಉತ್ತಮ ಉಪಚಾರ ಮಾಡಿದ್ದಾರೆ. ಪಶು ವೈದ್ಯಕೀಯ ಹಿರಿಯ ಪರಿವೀಕ್ಷಕ ಎನ್.ಬಿ.ಮಡಿವಾಳರ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ ಕೊಡ್ಲಿವಾಡ ಚಿಕಿತ್ಸೆ ನೀಡಿದ್ದು, ಅವರ ಕಾರ್ಯ ಶ್ಲಾಘನೀಯ

1401 ಜನರ ಮೇಲೆ ಜನರ ಮೇಲೆ ನಿಗಾ ಭಯ ಪಡುವ ಅವಶ್ಯಕತೆವಿಲ್ಲ : ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ

ಬೈಲಹೊಂಗಲ : ಪಟ್ಟಣದಲ್ಲಿ ವಿದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರಿಗೆ ನಿಗಾವಹಿಸಲಾಗಿದೆ. ಜನರು ವದಂತಿಗಳಿಗೆ ಕಿವಿಗೊಡದೇ ಸರಕಾರದ ಸೂಚನೆ ಮೇರೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆವಹಿಸಬೇಕೆಂದು ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ತಿಳಿಸಿದರು.
ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನಲ್ಲಿ ಒಟ್ಟು 1401 ಜನರ ಮೇಲೆ ನಿಗಾವಹಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಸಂಬoಧಿಸಿದoತೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಮಾದರಿಗಳು ನೆಗೆಟಿವ್ ಬಂದಿವೆoದು ಜಿಲ್ಲಾದಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟನೆ ನೀಡಿದ್ದಾರೆ. ಜನರು ಭಯ ಪಡುವ ಅವಶ್ಯಕತೆವಿಲ್ಲ. ಸುಳ್ಳ ಸುದ್ದಿಗಳಿಗೆ ಮರುಳಾಗಬೇಡಿ. ಸರಕಾರದ ಆದೇಶ ಪಾಲಿಸಿ ಮನೆಯಲ್ಲಿ ಇರಬೇಕೆಂದು ತಿಳಿಸಿದರು. ಅನಾವಶ್ಯಕವಾಗಿ ಹೊರಗಡೆ ತಿರುಗಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಈಗಾಗಲೇ ಎಲ್ಲ ಕಡೆಗಳಲ್ಲಿ ಚೆಕ್ ಪೊಸ್ಟಗಳನ್ನು ನಿರ್ಮಿಸಲಾಗಿದೆ. ರೈತರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಬೆಳಗ್ಗೆ 8 ರಿಂದ 10ರವರೆಗೆ ತರಕಾರಿ, ಹಣ್ಣು ಹಂಪಲ್ಲ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು

ಕೊರೊನಾಗೆ ನಂದಿನಿ ಹಾಲು ಬೇಡಿಕೆ ಕುಸಿತ. ರೈತರ ಹಾಗೂ ಗ್ರಾಹಕರ ಹಿತಾಸಕ್ತಿಗೆ ಸದಾಬದ್ಧ- ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

.
ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೇರಲಾಗಿರುವ ಲಾಕ್‍ಡೌನ್‍ನಿಂದಾಗಿ ನಂದಿನಿ ಹಾಲು ಹಾಗೂ ಮೊಸರಿಗೆ ಬೇಡಿಕೆ ಕುಸಿದಿದೆ. ನಿತ್ಯ 8 ಲಕ್ಷ ಲೀಟರ್ ಹಾಲು ಮಾರಾಟವಾಗದೇ ಉಳಿಯುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೊರೊನಾ ವೈರಸ್ ಹರಡುವಿಕೆ ತಡೆಯಲು ಕೆಎಂಎಫ್ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಹಾಲು ಉತ್ಪಾದಕರ ಸಂಘಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇನ್ನೂ 10 ಲಕ್ಷ ಲೀಟರ್ ಮಾರಾಟವಾಗದೇ ಉಳಿಯುವ ಸಾಧ್ಯತೆಯಿದೆ ಎಂದರು.
ಕೆಎಂಎಫ್ ತನ್ನ 14 ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ನಿತ್ಯ 9 ಲಕ್ಷ ಹೈನುಗಾರ ರೈತರಿಂದ 68 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಈ ಹಾಲಿನ ಸಂಗ್ರಹ 68 ಲಕ್ಷ ದಿಂದ 70 ಲಕ್ಷ ಲೀಟರ್‍ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಸಂಗ್ರಹವಾಗುವ 70 ಲಕ್ಷ ಲೀಟರ್ ಹಾಲಿನ ಪೈಕಿ 40 ಲಕ್ಷ ಲೀಟರ್ ಹಾಲು (ಹಾಲು, ಮೊಸರು, ಟೆಟ್ರಾ, ಫೆಕ್ಸಿ) ಮಾರಾಟವಾಗುತ್ತಿದೆ. 15 ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಲಾಗುತ್ತಿದೆ. ಇದರ ಜೊತೆಗೆ ಹೊರಗಿನ ಪೌಡರ್ ಪ್ಲಾಂಟ್‍ಗಳನ್ನು ಸಂಪರ್ಕಿಸಿ 7 ಲಕ್ಷ ಲೀಟರ್ ಹಾಲನ್ನು ಫೌಡರ್ ಮಾಡಲಾಗುತ್ತಿದೆ ಎಂದರು.
ಹಾಲಿನ ಸಂಸ್ಕರಣೆಗೆ ಅನೇಕ ಬಗೆಯ ಕಚ್ಛಾ ಪದಾರ್ಥಗಳ ಕೊರತೆ ಕಂಡುಬರುತ್ತಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 15000 ಕಾರ್ಮಿಕರ ಪೈಕಿ ಹಾಲಿ 5000 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರೆ. ಮುಂಬರುವ ದಿನಗಳಲ್ಲಿ ಕಾರ್ಮಿಕರ ತೀವ್ರ ಕೊರತೆ ಎದುರಾಗುವ ಸಾಧ್ಯತೆಗಳಿವೆ. ಹಾಲಿನ ಮಾರಾಟಕ್ಕೆ ಕಚ್ಚಾ ಪದಾರ್ಥಗಳ ಸಾರಿಗೆ ಅವಶ್ಯಕತೆಯಿದೆ. ಲಾರಿಗಳು ಮತ್ತು ಡ್ರೈವರ್‍ಗಳ ಕೊರತೆಯಿಂದಾಗಿ ಅಲ್ಲಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.
ರಾಮನಗರದಲ್ಲಿ ಹೊಸದಾಗಿ ಪ್ರತಿ ದಿನ 100 ಮೆಟ್ರಿಕ್ ಟನ್ ಸಾಮಥ್ರ್ಯದ ಹಾಲಿನ ಪುಡಿ ಘಟಕವನ್ನು ಸ್ಥಾಪನೆ ಮಾಡಲಾಗಿದ್ದು, ಕಾರ್ಮಿಕರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಮಾ. 30 ರಿಂದ 3 ಲಕ್ಷ ಲೀಟರ್ ಹಾಲನ್ನು ಪೌಡರ್ ಆಗಿ ಪರಿವರ್ತಿಸಲಾಗುವುದು. ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಸೇರಿ ಚರ್ಚಿಸಿ, ಸಂಸ್ಥೆಯು ಯಾವ ರೀತಿ ಬದುಕಿಸಬೇಕು. ರೈತರಿಗೆ ಯಾವ ರೀತಿ ಅನುಕೂಲ ಮಾಡಿಕೊಡುವ ಬಗ್ಗೆ ಚರ್ಚಿಸಲಾಗುವುದು. ಪರಿಸ್ಥಿತಿ ಹೀಗೆ ಮುಂದುವರೆದರೆ ನಾವು ಕಠಿಣ ತೀರ್ಮಾನ ಕೈಗೊಳ್ಳಲು ಬದ್ಧರಿದ್ದೆವೆ. ರೈತರ ಹಿತಾಸಕ್ತಿ ಕಾಪಾಡುವುದುದರ ಜೊತೆಗೆ ಸಂಸ್ಥೆಯು ಹೆಮ್ಮೆರವಾಗಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರೈತರು ಹಾಗೂ ಗ್ರಾಹಕರು ಕೆಎಂಎಫ್ ಜೊತೆಗೆ ಸಹಕಾರ ನೀಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ. ಎ.ಎನ್. ಹೆಗಡೆ, ಅಭಿಯಂತರರು ಮತ್ತು ಖರೀದಿ ವಿಭಾಗದ ಡಾ. ಸುರೇಶಕುಮಾರ, ಮಾರುಕಟ್ಟೆ ವಿಭಾಗದ ನಿರ್ದೇಶಕ ಡಾ.ಎಂ.ಟಿ.ಕುಲಕರ್ಣಿ, ಮದರ ಡೈರಿ ನಿರ್ದೇಶಕ ಡಾ.ಸತ್ಯನಾರಾಯಣ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಕೆ. ವಾಯ್. ಮೀಶಿ

ಅರಟಾಳ : ರೇಷನ್ ಪಡಿತರದಾರರಿಗೆ ಸೀಮೆ ಎಣ್ಣೆ ವಿತರಣೆ : ಆರು ಅಡಿ ಅಂತರ ಕಾಯ್ದುಕೊಂಡ ಜನ

ಅರಟಾಳ ; ಸಾರ್ವಜನಿಕರು ಸೀಮೆ ಎಣ್ಣೆ ಒಯಲು ಬಂದಾಗ, ಒಬ್ಬರಿಂದ ಒಬ್ಬರಿಗೆ ಆರು ಅಡಿ ಅಂತರವನ್ನು ಕಾಯ್ದುಕೊಂಡು ದಟ್ಟನೆಯಾಗದಂತೆ ನಿಂತು ಸೀಮೆ ಏಣ್ಣೆ ಪಡೆದುಕೊಳ್ಳಬೇಕು ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಪರಮಾನಂದ ಖ್ಯಾಡಿ ಹೇಳಿದರು.
ಶನಿವಾರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ರೇಷನ್ ಪಡಿತರದಾರರಿಗೆ ಸೀಮೆ ಎಣ್ಣೆ ವಿತರಿಸಿ ಮಾತನಾಡಿ, ನೆಲದಮೇಲೆ ಚೌಕ ಆಕಾರ ಬರೆಯಲಾಗಿದೆ ಅದರಲ್ಲಿ ನಿಂತು ಒಬ್ಬರ ನಂತರ ಒಬ್ಬರು ಸೀಮೆ ಏಣ್ಣೆ ಪಡೆದುಕೊಳ್ಳಬೇಕು. ಕರೋನಾ ವೈರಸ್ ಬಗ್ಗೆ ಆದಷ್ಟು ಎಲ್ಲರು ಜಾಗೃತಿವಹಿಬೇಕು. ಗುಂಪು, ಗುಂಪಾಗಿ ನಿಲುವುದು, ಕಟ್ಟೆಗಳ ಮೇಲೆ ಕುಳಿತುಕೊಳ್ಳವುದು ಮಾಡಬಾರದು. ಸರ್ಕಾರ ಹಗಲಿರುಳು ನಮ್ಮಗೊಸ್ಕರ ಕಷ್ಟಪಡುತ್ತಿದೆ. ನಾವು ಅವರು ಹೇಳಿದಂತೆ ನಡೆದರೆ ಸಾಕು ಯಾವ ರೋಗರುಜ್ಜೀನಗಳು ಬರುವುದಿಲ್ಲ ಎಂದರು

ಜನರು ತಮ್ಮ ಮನೆ ಬಿಟ್ಟು ಹೊರಗೆ ಬರಬೇಡಿ : ಶಾಸಕ ಎ ಎಸ್ ಪಾಟೀಲ್

ಮುದ್ದೇಬಿಹಾಳ :ಪಟ್ಟಣದ ತಮ್ಮ ದಾಸೋಹ ಭವನ ನಿವಾಸದಲ್ಲಿ ಶುಕ್ರುವಾರ ವಿವಿಧ ಸರಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಮಾತನಾಡಿದರು.
ಸಾರ್ವಜನಿಕರೆ ತಮ್ಮ ಜೀವದ ಆರೋಗ್ಯದ ಹಿತದೃಷ್ಠಿಯಿಂದ ಸರಕಾರದ ಆದೇಶದಂತೆ ತಾವು ಗಂಜಿ ಕುಡಿದರೂ ಪರವಾಗಿಲ್ಲ ಆದರೇ ಈ ಮಹಾಮಾರಿ ಕೋರೋನಾ ವೈರಸ್ ನಿಂದ ತಪ್ಪಿಸಿಕೊಳ್ಳಲು 21 ದಿನಗಳ ಕಾಲ ತಮ್ಮ ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು.
ಪಟ್ಟಣದ ತಮ್ಮ ದಾಸೋಹ ಭವನ ನಿವಾಸದಲ್ಲಿ ಶುಕ್ರುವಾರ ವಿವಿಧ ಸರಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಇಡೀ ವಿಶ್ವವೇ ಈ ಕೋರೋನಾ ವೈರಸ್ ಗೆ ನಡುಗಿದೆ ಮಾತ್ರವಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜೀವ ಪಡೆದುಕೊಂಡಿದೆ.
ಈ ಹಿನ್ನೇಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೋರೋನಾ ಮುಕ್ತವನ್ನಾಗಿಸಲು ಸಧ್ಯ ಇಡೀ ದೇಶಕ್ಕೆ ಲಾಕ್ ಡಾನ್ ಮಾಡಿದ್ದಾರೆ ಸಾರ್ವಜನಿಕರು ಅರ್ಥೈಸಿಕೊಳ್ಳಬೇಕು.
ಎಲ್ಲೇಂದರಲ್ಲಿ ಗುಂಪು ಗುಂಪಾಗಿ ನಿಲ್ಲುವುದು, ಸಭೇ ಸಮಾರಂಭ, ಮದುವೆ ಸೇರಿದಂತೆ ಇನ್ನಿತರ ಜನಸಂಧಣಿಯಾಗುವ ಕಾರ್ಯಕ್ರಮಗಳಲ್ಲಿ ಜನರು ಬಾಗವಹಿಸುವುದನ್ನು ಸ್ವಯಂ ಪ್ರೇರಣೆಯಿಂದ ನಿಲ್ಲಿಸಬೇಕು. ಇದರಿಂದ ಒಬ್ಬರಿಂದ ಇನ್ನೋಬ್ಬರಿ ಹರಡುವ ಕೋರೋನ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ ಈಗಾಗಲೇ ಪಟ್ಟಣ ಸೇರಿದಂತೆ ಬಹುತೇಕ ತಾಲೂಕಿನ ಎಲ್ಲ ದೇವಸ್ಥಾನ, ಮಸ್ಜಿದಿಗಳ, ಚರ್ಚಗಳ ಮುಚ್ಚಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಈ ಕಾರ್ಯಕ್ಕೆ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಹೋರ ರಾಜ್ಯ ಹಾಗೂ ಅಂತರ ಜಿಲ್ಲೇಗಳಿಂದ ತಾಲೂಕಿಗೆ ಬರುವ ಜನರ ಮೇಲೆ ಹೆಚ್ಚು ನಿಗಾವಹಿಸಿ ಕೋರೋನಾ ಸೊಂಕು ತಗುಲದಂತೆ ನೋಡಿಕೊಳ್ಳುವಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಮೈಯಲ್ಲ ಕಣ್ಣಾಗಿ ತಾಲೂಕಾ ಆರೋಗ್ಯ ಇಲಾಖೆ ಸೇರಿದಂತೆ ಸಂಭoದ ಪಟ್ಟ ಇಲಾಖೆ ಅಧಿಕಾರಿಗಳ ಕರ್ತವ್ಯ ನಿರ್ವಹಿಸಬೇಕು.
ಲಾಕ್ ಡಾನ್ ವೇಳೆ ಸಾರ್ವಜನಿಕರಿಗೆ ಅಗತ್ಯ ಜೀವನಾಂಶಕ ವಸ್ತಗಳನ್ನು ಖರಿದಿಸಲು ಕಿರಾಣಿ, ದಿನಸಿ, ತರಕಾರಿ, ಹಾಲು ಸೇವೆ ನಿಗದಿತ ಸಮಯಕ್ಕೆ ದೊರಕುವಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೇಖೇಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು.
ಜೊತೆಗೆ ಕಿರಾಣಿ, ದಿನಸಿ ಅಂಗಡಿ ವ್ಯಾಪಾರಸ್ಥರು ನಿಗದಿತ ದರಕ್ಕಿಂತ ಹೆಚ್ಚು ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ ಹಾಗಾಗಿ ಅಂತ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ತಹಶಿಲ್ದಾರ ಜಿ ಎಸ್ ಮಳಗಿಯವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ರೈತರಿಗೆ ಕೃಷಿ ಚಟುವಟಿಕೆ ಪ್ರಾರಂಭಿಸಲು ಸರಕಾರ ಸಂಪೂರ್ಣ ಅನುಮತಿ ನೀಡಿದ ಕಾರಣ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯ ಬೀಜ ಗೊಬ್ಬರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲುವಲ್ಲಿ ಪ್ರಯತ್ನಿಸಬೇಕು.
ಅದರಂತೆ ತಾಲೂಕಿನ ಎಲ್ಲ ಗ್ರಾಮಗಳ ಜನರಿಗೆ ರೈತರಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವ ಸಲುವಾಗಿ ಇಗಾಗಲೇ ಸರಕಾರ ಟಾಸ್ ಪೋರ್ಸ್ ಯೋಜನೆ ಮೂಲಕ ವಿಶೇಚ ಅನುದಾನ ನೀಡಿದೇ ಕಾರಣಎಲ್ಲೇಲ್ಲಿ ನೀರಿನ ಸಮಸ್ಯೆ ಇದೇ ಅಲ್ಲಿಗೆ ಹೋಗಿ ಸಮಸ್ಯೆ ಆಲಿಸಿ ನೀರಿನ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು.
ಇತ್ತಿಚಿಗೆ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಕಳ್ಳಬಟ್ಟಿ ದಂಧೆ ಮಿತಿಮಿರಿದೇ ಕಾರಣ ಕಳ್ಳಬಟ್ಟಿ ತಯಾರಿಕೆ ಮಾಡಿ ಮಾರಾಟಮಾಡುವವರ ವಿರುದ್ದ ಕಠೀಣ ಕಾನೂನು ಕ್ರಮ ಜರುಗಿಸಬೇಕು ಅದರಂತೆ ಬಹುತೇಕ ಪಿಡಿಓಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಕ ಅಧಿಕಾರಿ ಶಶಿಕಾಂತ ಶಿವಪುರೆ ಅವರಿಗೆ ಸೂಚಿಸಿದರು.
ಈ ವೇಳೆ ತಹಶಿಲ್ದಾರ ಜಿ ಎಸ್ ಮಳಗಿ, ತಾಳಿಕೋಟಿ ತಹಶಿಲ್ದಾರ ಅನೀಲ ಢವಳಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ, ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ಸಿಪಿಐ ಆನಂದ ವಾಗ್ಮೋರೆ, ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ,ತಾಳಿಕೋಟೆ ಪಿಎಸೈ ಬಂಡೆಗಾರ ಸೇರಿದಂತೆ ಮತ್ತಿತರರು ಇದ್ದರು.

ಮೂಡಲಗಿ : ಗಾರ್ಡನ್ ಅಭಿವೃದ್ದಿ ಸಂಸ್ಥೆಯಿoದ ಮಾಸ್ಕ್ ವಿತರಣೆ

ಮೂಡಲಗಿ: ದೇಶದಲ್ಲಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತೆವಹಿಸ ಬೇಕು. ಸರ್ಕಾರ ಜಾರಿಗೆ ಮಾಡಿರುವ ಕಾನೂನು ಉಲ್ಲಂಘಿಸದೇ ಸಮಾಜದ ಸ್ವಾಸ್ಥ ಕಾಪಡುವಂತೆ ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ತಿಳಿಸಿದರು.

ಅವರು ಪಟ್ಟಣದ ವಿದ್ಯಾನಗರದಲ್ಲಿ ಪುರಸಭೆ ಗುರುತಿಸಿರುವ ತರಕಾರಿ ಮಾರಾಟ ಸ್ಥಳದಲ್ಲಿ ವ್ಯಾಪರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಸಂಸ್ಥೆಯ ವತಿಯಿಂದ ಮಾಸ್ಕ್ ವಿತರಿಸಿ ಆರೋಗ್ಯದ ಬಗ್ಗೆ ಎಚ್ಚರ ಮತ್ತು ಜಾಗೃತಿವಹಿಸಿ ಎಂದರು.

ಮಹಾಮಾರಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತೆವಹಿಸುತ್ತಿರುವ ಪೋಲಿಸ್ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪುರಸಭೆಯ ಪೌರ ಕಾರ್ಮಿಕರು, ಆಶಾಕಾರ್ಯಕರ್ತರಿಗೆ ಸಂಸ್ಥೆಯಿoದ ಮೂರು ದಿನ ತಂಪು ನೀರು, ಮಜ್ಜಿಗೆ, ಹಣ್ಣು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐ ವೆಂಕಟೇಶ ಮುರನಾಳ, ಪುರಸಭೆ ಸದಸ್ಯ ಶಿವಾನಂದ ಸಣ್ಣಕ್ಕಿ, ಸಂಸ್ಥೆಯ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಭಗವಂತ ಉಪ್ಪಾರ, ಭೀಮಶಿ ಸೋರಗಾಂವಿ ಮತ್ತಿತರರು ಇದ್ದರು

ಸಂಕೇಶ್ವರದಲ್ಲಿ ಟ್ಯಾಂಕರ್ ಮೂಲಕ : ಔಷಧಿ ಸಿಂಪಡಣೆ

ಸಂಕೇಶ್ವರ ಪುರಸಭೆಯವರು ಕೊರೋನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದಾರೆ. ಟ್ಯಾಂಕರ್ ಮೂಲಕ ನಗರದಲ್ಲಿ ಔಷಧಿ ಸಿಂಪಡಣೆ‌ ಕಾರ್ಯಾಚರಣೆ ಪ್ರಾರಂಭಿಸಿದಾರೆ.
ಔಷಧಿ ಸಿಂಪಡಣೆ ಕಾರ್ಯಕ್ಕೆ ನಾವು ಅಗ್ನಿ ಶಾಮಕ ದಳದ ಸಹಯೋಗದೊಂದಿಗೆ ಪುರಸಭೆ ವ್ಯಾಪ್ತಿಯಲ್ಲಿ spraying ಮಾಡಲು ಅಗ್ನಿಶಾಮಕ ಇಲಾಖೆಯ ಸಹಾಯ ಕೋರಿದ್ದೇವೆ.
ನಗರದ ಪ್ರಮುಖ ರಸ್ತೆಗಳಾದ ಸುಭಾಷ್ ರೋಡ, ಕಾರ್ಪೊರೇಷನ್ ಬ್ಯಾಂಕ್, ಗಾಂಧಿ ಚೌಕ್ ವರೆಗೆ ಔಷಧಿ ಸಿಂಪಡಣೆ ಕಾರ್ಯ ನಡೆಯಿತು.ಸಂಪೂರ್ಣ ನಗರದಲ್ಲಿ ಔಷಧಿ ಸಿಂಪಡಣೆ ಕಾರ್ಯ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಿರಿಯ ಆರೋಗ್ಯ ನೀರಿಕ್ಷಕ ಪ್ರಕಾಶಗೌಡಾ ಪಾಟೀಲ, ನೀರಿನಲ್ಲಿ ಹೈಪೋಕ್ಲೋರೈಡ್ ಸೋಲ್ಯುಶನ್ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ‌. ಕೇವಲ ಕೊರೋನಾ ಅಷ್ಟೇ ಅಲ್ಲಾ, ಬೇರೆ ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸಲು ಈ ರೀತಿ ಮಾಡಿದ್ದೇವೆ. ಇಂದಿನಿಂದ ಈ ಔಷಧವನ್ನು ನಗರದೆಲ್ಲೆಡೆ ಸಿಂಪಡಣೆ ಮಾಡುತ್ತೇವೆ‌ ಎಂದರು.

ಸಾಂಗ್ಲಿಯಲ್ಲಿ 12 ಕೋರೋನ ಪ್ರಕರಣ :ಮಹಾರಾಷ್ಟ್ರ ಮತ್ತು ಕರ್ನಾಟಕ ಸಂಪರ್ಕಿಸುವ ರಸ್ತೆಯನ್ನು ಬಂದ್

ಅಥಣಿ : ಸಾಂಗ್ಲಿಯಲ್ಲಿ 12 ಕೋರೋನ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ನೆರೆಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ  ರಸ್ತೆಗೆ ಅಡ್ಡಲಾಗಿ ಮಣ್ಣಿನ ಗುಡ್ಡೆ ಮುಳ್ಳುಕಂಠಿ ಹಾಕಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಲಾಯಿತು . 
ಗ್ರಾಮಕ್ಕೆ  ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಜನ ಆಗಮಿಸದಂತೆ ವಾಹನಗಳು ಆಗಮಿಸದಂತೆ ಸಂಪೂರ್ಣ ರಸ್ತೆ ಬಂದ್ ಮಾಡಲಾಗಿದೆ ರಸ್ತೆ ಬಂದ್ ಮಾಡಿ ಬೋರ್ಡ್ ಹಾಕಿ ಹೊರಗಿನ ಜನರು ಒಳಗೆ ಪ್ರವೇಶಿಸದಂತೆ ನಿರ್ಬಂಧ ಮಾಡಿದ್ದಾರೆ .  ಒಟ್ಟಾರೆ ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶದ ಸೀಮೆಯನ್ನು ಮಾಡುವ ಮೂಲಕ ಜನತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ.ಮಹಾಮಾರಿ ಕೊರೊನಾದ ಬಗ್ಗೆ ಜಾಗೃತರಾಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಐಗಳಿ ಪೊಲೀಸ್ ಠಾಣೆಯ ಪಿಎಸ್ಐ ಕೆಎಸ್ ಕೊಚೇರಿ ಹಾಗೂ ಪಿಡಿಓ ಡಾ ಕಾಡೇಶ ಅಡಹಳ್ಳಿ  ಗ್ರಾಮಸ್ಥರಾದ ರಘುನಾಥ ದೊಡ್ಡನಿಂಗಪ್ಪಗೋಳ ಸೇರಿದಂತೆಗ್ರಾಮ ಪಂಚಾಯಿತಿ ಸಿಬ್ಬಂದಿ  ಉಪಸ್ಥಿತರಿದ್ದರು

WhatsApp
Follow by Email