ಕೊರೋನಾ ವೈರಸ್ ಹಿನ್ನೆಲೆ ಪಟ್ಟಣ ಹಾಗೂ ಪೋಲಿಸ್ ಠಾಣೆಯಲ್ಲಿ ಪೂರಕ ಆಹಾರ ವ್ಯವಸ್ಥೆ

ಮೂಡಲಗಿ: ದೇಶಾದ್ಯಂತ ಹರಡುತ್ತಿರುವ ಮಹಾ ಮಾರಿ ಕರೋನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೋಲಿಸ್, ಆರೋಗ್ಯ, ಆಶಾ ಕಾರ್ಯಕರ್ತೆಯರು, ವರದಿಗಾರರಿಗೆ ಅಲ್ಪೋಪಹಾರ, ಊಟದ ವ್ಯವಸ್ಥೆ, ಮಜ್ಜಿಗೆ ಅಂಬಲಿ, ಹಣ್ಣುಗಳನ್ನು ನೀಡುವ ಮೂಲಕ ಮೂಡಲಗಿ ಪಟ್ಟಣದ ಜನತೆ ಮಾನವಿಯತೆ ತೋರಿದ್ದಾರೆ.
ಪಟ್ಟಣದಲ್ಲಿ ಶನಿವಾರ ನಾಗಲಿಂಗೇಶ್ವರ ಅರ್ಬನ್ ಬ್ಯಾಂಕವತಿಯಿಂದ ಅಲ್ಪೋಪಹಾರ, ಆಕಾಶ ಇಲೇಕ್ಟ್ರಾಣಿಕ್ಸ್‍ನ ಮೀರೂ ಮುಲ್ಲಾ ಊಟದ ವ್ಯವಸ್ಥೆ, ಶಿಕ್ಷಕ ಗಜಾನನ ಪತ್ತಾರ, ಅಮೃತ ಹಾಲಿನ ಡೈರಿಯವರಿಂದ ಮಜ್ಜಿಗೆ ಪಾನಕಗಳನ್ನು ವಿತರಿಸುವ ಮೂಲಕ ಮಾನವಿಯ ಮೌಲ್ಯಗಳನ್ನು ಎತ್ತಿತೋರಿಸುವಂತಿತ್ತು. ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯಿಂದ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಪುರಸಭೆ ಸದಸ್ಯ ಸಂತೋಷ ಸೋನವಾಲಕರ, ಶಿವಬಸು ಹಂದಿಗುಂದ, ಚನ್ನಪ್ಪ ಅಥಣಿ ಹಾಗೂ ತಹಶಿಲ್ದಾರ ಕಛೇರಿ, ಪುರಸಭೆ, ಪೋಲಿಸ್ ಮತ್ತು ಸ್ಥಳೀಯ ಪತ್ರಕರ್ತರು ಹಾಜರಿದ್ದರು.
ವರದಿ: ಕೆ.ವಾಯ್ ಮೀಶಿ
Share
WhatsApp
Follow by Email