ಅಥಣಿ;ಪೋಲಿಸ್ ಸಿಬ್ಬಂದಿಗೆ ಸ್ವಚ್ಚತೆಯ ಪಾಠ ಹೇಳಿದ ಡಿವೈ ಎಸ್ ಪಿ ಎಸ್ ವಿ ಗಿರೀಶ

ಅಥಣಿ ; ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣಕ್ಕೆ ಬಂದೋಬಸ್ತಗಾಗಿ ಆಗಮಿಸಿದ ಕೆ ಎಸ್ ಆರ್ ಪಿ ಸಿಬ್ಬಂದಿ ಮತ್ತು ಅಥಣಿ ಪೋಲಿಸ್ ಠಾಣೆಯ ಸಿಬ್ಬಂದಿಗೆ ಅಥಣಿ ಡಿ ವೈ ಎಸ್ ಪಿ ಎಸ್ ವಿ ಗಿರೀಶ್ ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ಮನವಿ ಮಾಡಿದರಲ್ಲದೆ ತಾವೇ ಸ್ವತಃ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಣೆ ಮಾಡಿ ಶಾಂತಿ ಸುವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಬಂದವರು ಆರೋಗ್ಯವಂತರಾಗಿ ಇದ್ದಾಗ ಮಾತ್ರ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು
ಈ ವೇಳೆ ಅಥಣಿ ಪೋಲಿಸ್ ಠಾಣೆ ಸಿಪಿಐ ಶಂಕರಗೌಡ ಪಾಟೀಲ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಮೂಡಲಗಿ; ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗ ದರ್ಶನದಲ್ಲಿ ಟ್ಯಾಂಕರ್ ಮೂಲಕ : ಔಷಧಿ ಸಿಂಪಡಣೆ

ಮೂಡಲಗಿ ; ಪಟ್ಟಣದಲ್ಲಿ
ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗ ದರ್ಶನದಲ್ಲಿ ಆಪ್ತ ಕಾರ್ಯದರ್ಶಿ
ನಾಗಪ್ಪ ಶೇಖರಗೊಳ, ಸಿ ಪಿ ವೆಂಕಟೇಶ ಮೂರನಾಳ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಕೊರೊನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆಗೆ
ಚಾಲನೆ ನೀಡಿದರು.
ಔಷಧಿ ಸಿಂಪಡಣೆ ಕಾರ್ಯಕ್ಕೆ ಗೋಕಾಕ ಅಗ್ನಿಶಾಮಕ ಠಾಣಾ ಅಧಿಕಾರಿ ಎ ಬಿ ನದಾಪ್, ಪ್ರಮುಖ ಅಗ್ನಿಶಾಮಕ ಚಾಲಕ ಎಮ್ ಎಮ್ ಕನಭಾಂವಿ, ಅಗ್ನಿಶಾಮಕರು ಆರ್ ಎಮ್ ಕಾಪಸಿ, ಎ ಬಿ ಮುಲ್ತಾನಿ, ಎಸ ಸಿ ಗುರಾಯಿ ಆರ್ ಎಸ್ ಹಳ್ಳಿಗೌಡರ. ಸಹಯೋಗದೊಂದಿಗೆ ಪುರಸಭೆ ವ್ಯಾಪ್ತಿಯಲ್ಲಿ ಸ್ಪ್ರೇ ಮಾಡಲು ಪ್ರಾರಂಭ ಮಾಡಲಾಗಿದೆ.
ನಗರದ ಪ್ರಮುಖ ನಗರದ ಎಲ್ಲ ಬಿದಿಗಳಲ್ಲಿ ಔಷಧಿ ಸಿಂಪಡಣೆ ಪ್ರಾರಂಭ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೊಡ , ಹಾಗೂ ಕಿರಿಯ ಆರೋಗ್ಯ ನೀರಿಕ್ಷಕ ಪ್ರೀತಮ್ ಬೋವಿ ನೀರಿನಲ್ಲಿ ಹೈಪೋಕ್ಲೋರೈಡ್ ಸೋಲ್ಯುಶನ್ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ‌. ಕೇವಲ ಕೊರೋನಾ ಅಷ್ಟೇ ಅಲ್ಲಾ, ಬೇರೆ ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸಲು ಈ ಕಾರ್ಯವನ್ನು ಮಾಡಲಾಗಿದೆ, ಇಂದಿನಿಂದ ಈ ಔಷಧವನ್ನು ನಗರದೆಲ್ಲೆಡೆ ಸಿಂಪಡಣೆ ಮಾಡುತ್ತೇವೆ‌ ಎಂದರು.
ಮೂಡಲಗಿಯ ಪುರಸಭೆ ಮಾಜಿ ಸದಸ್ಯರಾದ ಮರೆಪ್ಪ ಮರೆಪ್ಪಗೋಳ ಹಾಗೂ ಹಾಲಿ ಸದಸ್ಯರಗಳಾದ ರಮೇಶ್ ಸಣ್ಣಕ್ಕಿ, ಶಿವು ಚಂಡಕಿ, ರವೀಂದ್ರ ಸಣ್ಣಕ್ಕಿ, ಹಣಮಂತ ಗುಡ್ಲಮನಿ, ಅನ್ವರ್ ನದಾಪ್, ಸಿದ್ದು ಗಡ್ಡೆಕರ, ಬಸು ಝೇಡೆಕುರಬರ, ಪ್ರಕಾಶ ಮುಗಳಖೋಡ, ಹಾಗೂ ಹುಸೇನ್ ಶೇಖ, ಇಬ್ರಾಹಿಂ ಹುಣಶ್ಯಾಳ, ಮತ್ತು ಸ್ಥಳಿಯ ಸಮಾಜ ಸೇವಕ ಈರಪ್ಪ ಡವಳೇಶ್ವರ.
ಮೂಡಲಗಿ ಪುರಸಭೆಯ ಸಂಬಂಧಿಸಿ ಹಾಗೂ ಪೌರ ಕಾರ್ಮಿಕರು ಇದರು.

ಬೆಳಗಾವಿ ರೈಲ್ವೇ ನಿಲ್ದಾಣದಲ್ಲಿ ತಪ್ಪಿದ ದೊಡ್ಡ ಅನಾಹುತ

  ಬೆಳಗಾವಿ ; ಬೆಳ್ಳಂಬೆಳಿಗ್ಗೆ ಬೆಳಗಾವಿಯಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ನಿಂತಿದ್ದ ಗೂಡ್ಸ್ ಟ್ರೇನ್ ಇಂಜಿನ್ ಏಕಾಏಕಿ ಆರಂಭವಾಗಿ ಪಕ್ಕದ ಹಳಿಗೆ ಬಂದು ಒಂದಿಷ್ಟು ಮುಂದೆ ಸಾಗಿ ಬಳಿಕ ಅಲ್ಲಿಯೇ ನಿಂತಿರುವ ಘಟನೆ ನಡೆದಿದೆ. ಒಂದು ವೇಳೆ ಚಲಿಸುವ ಟ್ರೇನ್ ಏನಾದರೂ ಆಗಿದ್ದರೆ ಟ್ರ್ಯಾಕ್ ಪಕ್ಕದ ಮನೆಗಳಿಗೆ ಡಿಕ್ಕಿ ಹೊಡೆದು ದೊಡ್ಡ ಅನಾಹುತ ತಪ್ಪುವ ಸಾಧ್ಯತೆಯಿತ್ತು.ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಶನಿವಾರ ತಡರಾತ್ರಿ ಬೆಳಗಾವಿಯ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. 70588 ನಂಬರ್‍ನ ಆಯಿಲ್ ಟ್ಯಾಂಕರ್‍ನ ಗೂಡ್ಸನ ಟ್ರೇನ್ ಇದಾಗಿದ್ದು. ಏಕಾಏಕಿ ಟ್ರೇನ್ ಸ್ಟಾರ್ಟ್ ಆಗಿ ಪಕ್ಕದ ಹಳಿಗೆ ಬಂದು ನಿಂತಿದೆ. ಘಟನೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ರೈಲ್ವೇ ಇಲಾಖೆಯ ತಾಂತ್ರಿಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದು. ಟ್ರ್ಯಾಕ್‍ನ ದುರಸ್ಥಿ ಕಾರ್ಯ ಆರಂಭವಾಗಿದ್ದು. ಗೂಡ್ಸ್‍ನ ಟ್ರೇನ್‍ನ್ನು ಟ್ರ್ಯಾಕ್‍ನಿಂದ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.

ಅಥಣಿ: ಕರ್ತವ್ಯ ನಿರತ ಸಿಬ್ಬಂದಿಗೆ ಉಚಿತ ಆಹಾರ ವಿತರಣೆ

ಅಥಣಿ : ಪೋಲಿಸ್ ಠಾಣೆಯ ಸಿಬ್ಬಂದಿ,ಆರೋಗ್ಯ ಇಲಾಖೆ ಮತ್ತು ಪುರಸಭೆ ಸಿಬ್ಬಂದಿಗೆ ಅಥಣಿ ಪಟ್ಟಣದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ಎರಡುನೂರಕ್ಕು ಹೆಚ್ಚು ಜನರಿಗೆ ಅಲ್ಪೋಪಹಾರ ಮತ್ತು ಮದ್ಯಾಹ್ನ ಮತ್ತು ಸಂಜೆಯ ಊಟದ ವ್ಯವಸ್ಥೆ ಮಾಡಿದ್ದು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಕ್ಕೆ ತೆರಳಿ ಆಹಾರ ವಿತರಣೆ ಮಾಡುತ್ತಿರುವದು ಕಂಡುಬAತು.
ಸಮಾಜಸೇವಕ ವಿಜಯಕುಮಾರ ನೆಮಗೌಡ ನಮ್ಮ ಕೈಲಾದಷ್ಟು ನಮ್ಮ ಸೇವೆ ಮಾಡುತ್ತಿದ್ದೇವೆ ನಮಗಾಗಿ ದುಡಿಯುವ ನಮ್ಮ ಒಳಿತಿಗಾಗಿ ಶ್ರಮಿಸುವ ವೈದ್ಯಕೀಯ ಸಿಬ್ಬಂದಿ ಪುರಸಭೆ ಹಾಗೂ ಪೋಲಿಸ್ ಸಿಬ್ಬಂದಿಯ ಋಣ ದೊಡ್ಡದು.ಹಾಗೆಯೆ ಅಥಣಿ ಪಟ್ಟಣದಲ್ಲಿ ಇರುವ ತಾಲ್ಲೂಕು ಆಸ್ಪತ್ರೆಗೆ ಹಳ್ಳಿಗಳಿಂದ ಆಗಮಿಸುವ ರೋಗಿಗಳು ಲಾಕ್ ಡೌನನಿಂದ ಆಹಾರ ಸಿಗದೆ ಪರದಾಡುವ ಸ್ಥಿತಿ ಇದ್ದು ಈ ನಿಟ್ಟಿನಲ್ಲಿ ಆಹಾರ ವಿತರಣೆ ಮಾಡಿ ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.
ಈ ವೆಳೆ ಅಥಣಿ ಪಟ್ಟಣದ ಸಮಾಜಸೇವಕರಾದ
ರಾಮನಗೌಡ ಪಾಟೀಲ, ವಿಜಯಕುಮಾರ ನೇಮಗೌಡ,ಸಿದ್ದು ನೇಮಗೌಡರ,ಅಣ್ಣಪ್ಪ ಕಟಾಂವಿ,ವಸೀಮ ಮುಕ್ಕೇರಿ,ಈರನಗೌಡ ಪಾಟೀಲ,ಮಂಜುನಾಥ ಈರಗೌಡ,ಭರತೇಶ ಕಾಸರ,ಸಂಗ್ರಾಮ ವೇಳಾಪೂರೆ

ಕರ್ಪ್ಯು ಉಲ್ಲಂಘಿಸಿ ರಸ್ತೆಗಿಳಿದ್ದರೆ ಬೈಕ್ ಜಪ್ತಿ. ಅಥಣಿ ಡಿವೈ ಎಸ್ಪಿ. ಎಸ್ ವಿ ಗಿರೀಶ

ಅಥಣಿ: ಕೊರೊನಾ ಜಾಗತಿಕ ವ್ಯಾಧಿ ಹೋಗಲಾಡಿಸಲು ಸದ್ಯ ಲಾಕ್ ಡೌನ್ ಮುಂದುವರೆದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೆ ಎಸ್ ಆರ್ ಪಿ ತುಕುಡಿ ತರಿಸಿ ಪೋಲಿಸ್ ಬಂದೋಬಸ್ತ ಹೆಚ್ಚಿಸಲಾಗಿದೆ.
ಅಥಣಿ ಹಾಗೂ ಕಾಗವಾಡ ತಾಲೂಕಿನ ಬಹುತೇಕ ಗ್ರಾಮಗಳು ಮಹಾರಾಷ್ಟ್ರದ ಗಡಿಗಳಿಗೆ ಹೊಂದಿಕೊoಡಿದ್ದು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಕ್ಕೆ ಕೆಲಸ ಅರಸಿ ದುಡಿಯಲು ಹೋದ ಜನರು ಸದ್ಯ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದು ವಾಹನ ಸೌಕರ್ಯ ಇಲ್ಲದೆ ಪರದಾಡುತ್ತಿದ್ದರೆ ಇನ್ನೊಂದು ಕಡೆ ಅನವಶ್ಯಕವಾಗಿ ಬೈಕ್ ಸವಾರಿ ಮಾಡುತ್ತಿದ್ದವರನ್ನು ಇಷ್ಟು ದಿನ ಬೆತ್ತದ ರುಚಿ ತೋರಿಸುವ ಅನಿವಾರ್ಯತೆ ಎದುರಾಗಿದ್ದ ಪೋಲಿಸ್ ಸಿಬ್ಬಂದಿ ನಿನ್ನೆ ಮತ್ತೊಂದು ಕಾರ್ಯತಂತ್ರ ರೂಪಿಸಿದ್ದು ಐವುತ್ತಕ್ಕು ಹೆಚ್ಚು ಬೈಕಗಳನ್ನು ಸೀಜ್ ಮಾಡಿದ್ದು ಪುಂಡ ಪೋಕರಿಗಳ ಅಲೆದಾಟ ಕಡಿಮೆ ಆಗಿದ್ದು ಕಂಡುಬoತು.
ಅದೆಷ್ಟು ಸಮಜಾಯಿಸಿ ಹೇಳಿದರು ಜನ ಕೇಳದೆ ರಸ್ತೆಗೆ ಇಳಿದ ಹಿನ್ನೆಲೆಯಲ್ಲಿ ಲಾಠಿ ಬೀಸಿದ ಪೋಲಿಸ್ ಸಿಬ್ಬಂದಿ ವಿರುದ್ದ ಜನರ ಮೆಚ್ಚುಗೆ ಕೂಡ ವ್ಯಕ್ತವಾಗಿದ್ದು ಪೋಲಿಸರು ನಮ್ಮ ಒಳಿತಿಗಾಗಿ ಶ್ರಮಿಸುತ್ತಿದ್ದು ಅವರ ಕ್ರಮ ಸರಿ ಇದೆ. ಸದ್ಯದ ಮಟ್ಟಿಗೆ ತೊಂದರೆ ಆದರೂ ಕೂಡ ಸಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯ ಇದ್ದು ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಮತ್ತು ಸರ್ಕಾರದ ಹಾಗೂ ಅಧಿಕಾರಿಗಳ ಮನವಿಗೆ ಜನರು ಸ್ಪಂದಿಸಿ ಮನೆಯಲ್ಲಿ ಇರಬೇಕು ಎಂದು ಸಮಾಜಸೇವಕ ರಾಮನಗೌಡ ಪಾಟೀಲ ಹೇಳಿದರು.

ಬೇರೆ ರಾಜ್ಯ ದಲ್ಲಿ ಕೆಲಸ ಮಾಡುತ್ತಿರುವ 87 ಯುವಕರು ಸ್ವಗ್ರಾಮಕ್ಕೆ ಆಗಮನ

ಕಾಗವಾಡ : ಉತ್ತರ ಕರ್ನಾಟಕ ರಾಜ್ಯದ 87 ಯುವಕರು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಲಾಕ್ ಉನ್ನತ ಶಿಕ್ಷಣ ಪಡೆದ 87 ಯುವಕರು ಉದ್ಯೊಗಕಾಗಿ ನೆರೆಯ ಮಹಾರಾಷ್ಟ್ರ ರಾಜ್ಯದ ಬೇರೆ-ಬೇರೆ ಕಂಪನಿಗಳಲ್ಲಿ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ನೆರೆಯ ಸಾಂಗಲಿ ಜಿಲ್ಲೆಯ ಎಂ.ಐ.ಡಿ.ಸಿ. ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಅಲ್ಲಿಯ ಕಂಪನಿಗಳು ಮಾಲಿಕರು ಇವರನ್ನು ಸಾಂಗ್ಲಿಯಿಂದ ಹೊರ ಹಾಕಿದ್ದರಿಂದ ಕಾಲು ನಡುಗೆಯಿಂದ ಕಾಗವಾಡ ವರೆಗೆ ಬಂದರು.
ಕಾಗವಾಡ ತಹಸೀಲ್ದಾರ ಶ್ರೀಮತಿ ಪ್ರಮೀಳಾ ದೇಶಪಾಂಡೆ ಮತ್ತು ಪೊಲೀಸ್ ಅಧಿಕಾರಿಗಳು ಅವರನ್ನು ಆರೋಗ್ಯ ತಪಾಸಣೆ ಮಾಡುವದೊಂದಿಗೆ ಊಟ, ತಿಂಡಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ರಂದು ಕಾಗವಾಡ ಬಸ್ ನಿಲ್ದಾಣದಲ್ಲಿ ಏಕ ಕಾಲಕ್ಕೆ ಈ ಯುವಕರನ್ನು ಕಂಡ ಸ್ಥಳೀಯರು ಬೆಚ್ಚಿಬಿದಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಸದಾಶಿವ ಚೌಗುಲೆ ಇವರು ಕೂಡಲೆ ತಹಸೀಲ್ದಾರ ಶ್ರೀಮತಿ ಪ್ರಮೀಳಾ ದೇಶಪಾಂಡೆ, ಪೊಲೀಸ್ ಅಧಿಕಾರಿ ಹಾಗೂ ಎಲ್ಲಾ ಮೇಲಾಧಿಕಾರಿಗಳ ಗಮನಕ್ಕೆ ತಂದರು

WhatsApp
Follow by Email