
ಭಾನುವಾರ ಮಧ್ಯಾಹ್ನ ಈ ಚೆಕ್ ಪೋಷ್ಟ್ ಬಳಿ ಭಾರಿ ಗಾತ್ರದ ನಾಗರ ಹಾವೊಂದು ಕಾಣಿಸಿಕೊಂಡು ಕರ್ತವ್ಯ ನಿರತ ಪೋಲಿಸರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಪಂ ಸಿಬ್ಬಂದಿಯವರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಮಧ್ಯಾಹ್ನದ ರಣ ಬಿಸಿಲಿನಲ್ಲಿ ರಸ್ತೆಯ ಒಂದು ಬದಿಯ ಹೊಲದಿಂದ ಸಾಗಿ ಮತ್ತೊಂದು ಕಡೆಯಿದ್ದ ಜೋಳದ ಕಣಕಿ ಬಣವೆಯಲ್ಲಿ ಹಾವು ಅವಿತು ಕುಳಿತುಕೊಂಡಿತ್ತು. ರಾತ್ರಿ ಪಾಳಿಯಲ್ಲಿಯೂ ಕೂಡ ಇಲ್ಲಿ ಕೆಲಸ ಮಾಡಬೇಕಾದ್ದರಿಂದ ಕರ್ತವ್ಯ ನಿರತರಲ್ಲಿ ಹಾವು ಮತ್ತಷ್ಟು ಭಯ ತಂದಿಟ್ಟಿತ್ತು. ಬಳಿಕ ಚೆಕ್ ಪೋಷ್ಟ ಬಳಿಯ ಮನೆಯ ನಿವಾಸಿ ಶಿವಾನಂದ ಬೆಳವಡಿ ಗ್ರಾಮದ ಉರಗ ತಜ್ಞ ಶಿವಾಜಿ ಗಂಡಗುದರಿಯವರನ್ನು ಕರೆಸಿ ಭಾರಿ ಗಾತ್ರದ ನಾಗರ ಹಾವನ್ನು ಹಿಡಿಸಿ ಉಪ್ಪಿನ ಬೆಟಗೇರಿ ಸಮೀಪದ ಗುಡ್ಡದ ಕಡೆ ಬಿಟ್ಟು ಬಂದ ನಂತರ ಚೆಕ್ ಪೋಷ್ಟ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಯಿತು.