ದೀಪಾ ನರಸನಗೌಡ್ರ ಅವರ ಕುಂಚದಲ್ಲಿ ಅರಳಿದ ಕೊರೋನಾ ಕರ್ಮಕಾಂಡ

ಮಹಾಲಿಂಗಪುರ : ಕ್ಷೇತ್ರ ಸಮನ್ವಯಾಧಿಕಾರಿ ಮಹಾಂತೇಶ ನರಸನಗೌಡ್ರ ಅವರ ಪತ್ನಿ ದೀಪಾ ಅವರು ಕೊರೋನಾ ಕಬಂಧ ಬಾಹುವಿನಲ್ಲಿ ಇಡೀ ಜಗತ್ತು ಮತ್ತದರ ಜೊತೆ ಭಾರತಾಂಬೆ ಬಂಧಿಯಾಗಿ ಜಗತ್ತೇ ಲಾಕ್ ಡೌನ್ ಆಗಿದ್ದು, ಬಡವರ ಬದುಕು ಬೀದಿಗೆ ಬಂದು, ಜನಸಾಮಾನ್ಯರು ಕುಟುಂಬ ಸಮೇತ ಗೃಹ ಬಂಧನದಲ್ಲಿದ್ದು, ಆದರೂ ಕೆಲ ಕಿಡಿಗೇಡಿಗಳು ಅಥವಾ ಪರಿಸ್ಥಿತಿಯ ಅರಿವಿಲ್ಲದವರು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಮುಂತಾದ ಜಾಗೃತ ನಿಯಮಗಳನ್ನು ಗಾಳಿಗೆ ತೂರಿ ಮನ ಬಂದAತೆ ವರ್ತಿಸುತ್ತಿರುವುದು, ಸಕಲ ಸಂಕಷ್ಟಕ್ಕೂ ಎದೆಗೊಟ್ಟು ನಿಂತ ವೈದ್ಯರು, ಜನಸಾಮಾನ್ಯರ ಹಿತಕ್ಕಾಗಿ ಪಣ ತೊಟ್ಟು ದುಡಿಯುತ್ತಿರುವ ಸೈನಿಕರು, ಹಗಲಿರುಳೆನ್ನದೇ ಜನರ ರಕ್ಷಣೆಗಾಗಿ ದುಡಿಯುತ್ತಾ ಕೈಮುಗಿದು ಜನರ ಮನವೊಲಿಸಲೆತ್ನಿಸುತ್ತಿರುವ ಪೋಲೀಸರ ಸಮರ್ಪಣೆ ಇಷ್ಟೆಲ್ಲಾ ಪ್ರಯತ್ನಗಳ ನಡುವೆ ಉರುಳಿ ಬಿದ್ದಿರುವ ಹೆಣಗಳ ರಾಶಿ, ಜಗತ್ತಿನ ವಿಜ್ಞಾನ, ವೈದ್ಯಕೀಯ ಪ್ರಯತ್ನಗಳನ್ನೂ ಮೀರಿ ಲೋಕವನ್ನೇ ಲಾಕ್ ಔಟ್ ಮಾಡಿ ವಿಶ್ವದ ಆಟಾಟೋಪವನ್ನೇ ನುಂಗಿ ನೀರು ಕುಡಿದಿರುವ ಕರಾಳ ಕೊರೋನಾದ ಕಠೋರ ಕರ್ಮಕಾಂಡವನ್ನು ತಮ್ಮ ಕಲಾ ಕುಂಚದಲ್ಲಿ ಅರಳಿಸಿ ಪ್ರಸ್ತುತ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿರುವ ಅಪರೂಪದ ಚಿತ್ರ. ದೀಪಾ ಮೇಡಂ ಅವರ ಅದ್ಭುತ ಕಲ್ಪನಾಶಕ್ತಿ, ಕಲಾಕೌಶಲ್ಯ, ಕಾಳಜಿ, ಅಂತಃಕರಣಕ್ಕೆ ಮೆಚ್ಚುವಂತದ್ದು.
ಫೋಟೋ : 30 mಟಠಿ 1 : ದೀಪಾ ನರಸನಗೌಡ್ರ ಅವರ ಕುಂಚದಲ್ಲಿ ಅರಳಿದ ಕೊರೋನಾ ಕರ್ಮಕಾಂಡ
Share
WhatsApp
Follow by Email