ಉಪಮುಖ್ಯಮಂತ್ರಿ ಮೆಚ್ಚಿದ ನೆಲ ಬರಹ ಜನರಲ್ಲಿ ಜಾಗೃತಿ ಮೂಡಿಸಿದ ಬರಹ ! ಶಿಕ್ಷಕರ ಕಾರ್ಯ ಸ್ಲ್ಯಾಘಿಸಿದ ಪೊಲೀಸ್ ಇಲಾಖೆ.

ಮಹಾಲಿಂಗಪುರ : ಮುಧೋಳ ಪಟ್ಟಣದ ನಾಲ್ಕು ದಿಕ್ಕಿಗೆ ರಾಜ್ಯ ಹೆದ್ದಾರಿಯಲ್ಲಿ “ಬೀದಿಗೆ ಬಂದರೆ ನೀವು, ನಿಮ್ಮ ಮನೆಗೆ ಬರುವೆ ನಾನು”. ಕೊರೋನಾ ವೈರಸ್ ಎಂದು ದಾರಿಹೋಕರ ಕಣ್ಣಿಗೆ ರಾಚಿ, ಎದೆಗೆ ನಾಟಿ, ಕಲ್ಲೆದೆಯೂ ಕರಗುವಂತೆ ದೊಡ್ಡ ಅಕ್ಷರದಲ್ಲಿ ಬರೆದು ಜಾಗೃತಿ ಮೂಡಿಸಿದ್ದಾರೆ.
ಸಮೀಪದ ರನ್ನ ಬೆಳಗಲಿಯ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಬಿ.ಪಿ.ಚೋಪಡೆಯವರ ನೇತೃತ್ವದಲ್ಲಿ ಆರ್. ಎಂ.ಜಿಯ ಚಿತ್ರಕಲಾ ಶಿಕ್ಷಕ ಶ್ರೀಕಾಂತ ಶಿಂಧೆ, ಪ್ರಗತಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಶಂಕರ ಭೂತನಾಳ, ಹಂಪಿ ವಿವಿಯ ಚಿತ್ರಕಲಾ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಶಿವಾನಂದ ನೀಲನ್ನವರ, ಮಾಯಪ್ಪ ಲೋಕ್ಯಾಗೋಳ ಇವರು ಪೋಲೀಸ್ ಇಲಾಖೆಯ ಸಹಯೋಗದಲ್ಲಿ ಹೆದ್ದಾರಿ ಮೇಲೆ ದೊಡ್ಡ ದೊಡ್ಡ ಅಕ್ಷರಗಳ ಮುಖಾಂತರ ಕೋರೋಣ ವೈರಸ್ ಬಗೆಗೆ ಜನರಲ್ಲಿ ಅರಿವು ಮೂಡಿಸಿದ್ದಾರೆ.
ಪ್ರತಿ ಅಕ್ಷರವೂ ನಾಲ್ಕು ಅಡಿ ವ್ಯಾಸದಲ್ಲಿ ಬರೆದ ಈ ವಾಕ್ಯ ರಸ್ತೆ ಹೋಕರ ಗಮನ ಸೆಳೆದು, ಮನೆಯಿಂದ ಹೊರಗೆ ಬಂದರೆ ಕೊರೋನಾ ಬೆನ್ನತ್ತಿ ಬರುತ್ತದೆ ಎಂಬ ಜಾಗೃತಿ ಮೂಡಿಸುತ್ತಿದೆ. ಈ ಬರಹವನ್ನು ನೋಡಿ ಉಪಮಖ್ಯಮಂತ್ರಿ ಗೋವಿಂದ ಕಾರಜೋಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ದಿನಗಳ ಕಾಲ ಬಿರು ಬಿಸಿಲಿನಲ್ಲಿ ಬೇಸರಿಸದೇ ಉಚಿತವಾಗಿ ಬರೆದುಕೊಟ್ಟ ಕಲಾ ಬಳಗವನ್ನು ಸಿಪಿಐ ಎಚ್. ಆರ್ ಪಾಟೀಲ, ಡಿವೈಎಸ್ಪಿ ಆರ್. ಆರ್. ಪಾಟೀಲ ಮತ್ತು ಸಿಬ್ಬಂದಿ ಈ ಕಾರ್ಯವನ್ನು ಸ್ಲ್ಯಾಘಿಸಿದ್ದಾರೆ.
Share
WhatsApp
Follow by Email