ಕೊರೊನಾ ವೈರಸ್ ಜಾಗೃತಿ : ಮನೆಯಿಂದ ಬರಬೇಡಿ ಎಂದು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನವಿ !.

ಕರೋನಾ ವೈರಸ್ ಮುಂಜಾಗ್ರತೆ ಬಗ್ಗೆ ನಿಡಸೋಸಿ ಗ್ರಾಮದಲ್ಲಿ ಶ್ರೀ ದುರದುಂಡೇಶ್ವರ ಮಠದ ಜಗದ್ಗುರು ಶಿವಲಿಂಗೇಶ್ವರ ಮಹಾ ಸ್ವಾಮೀಜಿ ಅವರು ಭಕ್ತರಲ್ಲಿ ಜಾಗೃತಿ ಅಭಿಯಾನ ಇಂದು ಹಮ್ಮಿಕೊಂಡಿದರು.

ಕೊರೊನಾ ವೈರಸ್ ಬಗ್ಗೆ ಜನರು ಜಾಗೃತರಾಗದ ಹಿನ್ನೆಲೆ ಜನರಿಗೆ ಮಾಸ್ಕ್ ತಯಾರಿಸಲು ಕರೆ ನೀಡಿದ್ದ ಶ್ರೀಗಳ ಕರೆಗೆ ಶ್ರೀ ಮಠದಿಂದ ಮಾಸ್ಕ್ ತಯಾರಿಸಲಾಗಿತ್ತು.

ಇದನ್ನು ಗ್ರಾಮದಲ್ಲಿ ಮನೆ ಮನೆಗೆ ಸಂಚರಿಸಿ ಭಕ್ತರಿಗೆ ಸುಮಾರು 2500 ಮಾಸ್ಕ್ ವಿತರಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಲಾಕ್‍ಡೌನ್ ಆದೇಶ
ಉಲ್ಲಂಘಿಸಿ ಮನೆ ಬಿಟ್ಟು ಯಾರು ಕೂಡ ಹೊರಬರ ಬೇಡಿ ಎಂದು ತಿಳಿಹೇಳಿದರು.

ಗುಂಪು ಗುಂಪಾಗಿ ನಿಲ್ಲುವುದು ಮಾಡಬೇಡಿ, ಸಮಾಜಿಕ ಅಂತರ ನಿಯಮ ಪಾಲನೆ ಮಾಡಿ ಪ್ರತಿಯೋಬ್ಬರು ಮಾಸ್ಕ್ ಧರಿಸಬೇಕು ಎಂದರು.

ಅಷ್ಟೇ ಅಲ್ಲದೆ ರಾಜ್ಯ ಮತ್ತು ದೇಶದಲ್ಲಿರುವ ಎಲ್ಲಾ ಸ್ವಾಮೀಜಿ ಅವರಲ್ಲಿ ವಿನಂತಿ ಮಾಡಿಕೊಂಡು ಹೇಳುತ್ತೇನೆ ಒಟ್ಟಾರೆ 14 ದಿನ ವೃತ ಅಂತ ತಿಳಿದು ನಾವೆಲ್ಲರೂ ಕೂಡ ಮನೆಯಲ್ಲಿರೋಣ ಎಂದು ತಿಳಿಸಿದರು.

ಎಲ್ಲರೂ ಕೂಡ ಈ ಸಂದರ್ಭದಲ್ಲಿ ಸ್ಪಂದಿಸಿ ಏಪ್ರಿಲ್ 14ರ ವರೆಗೆ ತಾಳ್ಮೆಯಿಂದ ಮನೆಯಲ್ಲಿ ಇರೊದು ಬಹಳ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಯವರು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಶ್ರೀಮಠದ ಸಿಬ್ಬಂದ್ಧಿ, ಹಾಗೂ ಗ್ರಾಮದ ಮುಖಂಡರು ಇದ್ದರು.

Share
WhatsApp
Follow by Email