ಬ್ರೇಕಿಂಗ್ ನ್ಯೂಸ್ ಕೊರೊನಾ ವೈರಸ್ ; ಜೀವ ಇದ್ದರೆ ಮುಂದಿನ ಜೀವನ : ಬಸವರಾಜ ಹೆಗ್ಗನಾಯಕ್ 02/04/202002/04/2020 admin ಹಳ್ಳೂರ : ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತದೆ. ಆದರೆ ತಾಳ್ಮೆ ಇರುವದರಿಂದ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ, ಎಂಬ ವಾಕ್ಯದಂತೆ ಸರ್ಕಾರದ ಆದೇಶವನ್ನು ನಾವು ಎಲ್ಲರೂ ಪಾಲಿಸಿದರೆ ಈ ಕೊರೊನಾ ವೈರಸ್ ದಿಂದ ಮುಕ್ತಿ ದೊರೆತು ಒಳ್ಳೆಯ ದಿನಗಳು ಬರುತ್ತವೆ. ಜೀವ ಇದ್ದರೆ ಮುಂದಿನ ಜೀವನ ಮಾಡಲು ಸಾಧ್ಯ, ಆದರಿಂದ ಎಲ್ಲ ನಾಗರಿಕರು ಕೊರೊನಾ ಹರಡದಂತೆ ನೋಡಿಕೊಳ್ಳೋಣಾ ಎಂದು ಮೂಡಲಗಿ/ಗೋಕಾಕ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ನಡೆದ ಕೊರೊನಾ ಮುಂಜಾಗ್ರತಾ ಕಾರ್ಯಕ್ರಮವನ್ನು ಸ್ಯಾನಿಟೈಜರ್‌ದಿಂದ ಕೈ ತೊಳೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಡೀ ವಿಶ್ವದ ತುಂಬೆಲ್ಲಾ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ರೋಗವನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿಯವರು ೨೧ ದಿನಗಳ ಕಾಲ ಲಾಕ್ ಡೌನ್ ಮಾಡಿದ್ದಾರೆ. ಲಾಕ್ ಡೌನ್ ಅಂದರೆ ಅಂಗಡಿ ಮುಗ್ಗಟ್ಟುಗಳು, ಬಸ್ ಸಂಚಾರ ಅಷ್ಟೇ ಬಂದ್ ಅಲ್ಲ. ಮನುಷ್ಯ ತನ್ನ ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ಹಾಕಿಕೊಂಡಾಗ ಮಾತ್ರ ಆದೇಶಕ್ಕೆ ಬೆಲೆ ಕೊಟ್ಟಂತೆ ಆಗುತ್ತದೆ.ಕೊರೊನಾ ರೋಗಕ್ಕೆ ಒಂದೇ ಒಂದು ಔಷಧಿ ಅಂದರೆ ಅದು ನಾವೇಲ್ಲರೂ ಮನೆಯಲ್ಲಿ ಇರುವುದೆ ಆ ರೋಗಕ್ಕೆ ಔಷಧಿ ಆದರಿಂದ ಹಳ್ಳೂರ ಗ್ರಾಮದ ಸಾರ್ವಜನಿಕರು ತಮ್ಮ ಜೀವ ಉಳಿಸಿಕೊಳ್ಳಬೇಕಾದರೆ ತಮ್ಮ ಕೈ ತೊಳೆದುಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು, ತಮ್ಮ ಮನೆ ಬಿಟ್ಟು ಹೊರಗಡೆ ಬಾರದಂತೆ ಇದ್ದರೆ ತಮ್ಮ ಜೀವ ಅಷ್ಟೇ ಅಲ್ಲ ಇಡೀ ಗ್ರಾಮದ ಜನರ ಜೀವ ಉಳಿಸಿದಂತೆ ಎಂದು ಹೇಳಿದರು. ಪೋಲಿಸ್ ಅಧಿಕಾರಿಗಳು ಜನರ ಸೇವೆಗಾಗಿ ತಮ್ಮ ಜೀವನ ಮುಡಿಪ್ಪಾಗಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರು ಸಾರ್ವಜನಿಕರು ತಿಳಿದುಕೊಳ್ಳತ್ತಿಲ್ಲಾ. ಹೊರಗಡೆ ಬರಬೇಡಿ ಎಂದು ಹೇಳಿದರು ಕೇಳುತ್ತಿಲ್ಲ, ಆದಷ್ಟು ಜನರು ಹೊಗಡೆ ಬರದಿಂದರೆ ನಮ್ಮ ದೇಶ ನಮ್ಮ ರಾಜ್ಯದ ಜನರನ್ನು ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.ಗ್ರಾಮದ ಬೀಟ್ ಪೋಲಿಸ್ ಎನ್ ಎಸ್ ಒಡೆಯರ ಮಾತನಾಡಿ, ನಾವು ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವುದು ಜನರ ರಕ್ಷಿಸುವ ಸಲುವಾಗಿ. ಜನರು ನಮ್ಮ ಜೊತೆ ಕೈ ಜೋಡಿಸಿದರೆ ನಮ್ಮ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಬಹುದು ಎಂದು ಹೇಳಿದರು. ಎಚ್ ವೈ ತಾಳಿಕೋಟಿ, ಸಂಜು ಅಗ್ನೆಪ್ಪಗೊಳ, ಮಹಾದೇವ ಕುಲಕರ್ಣಿ, ಎಸ್ ಎಚ್ ವಾಸನ್, ಮುರಿಗೆಪ್ಪ ಮಾಲಗಾರ ಪ್ರಾಸ್ಥಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ತಾಪಂ ಗೋಕಾಕ ಉಪನಿರ್ದೇಶಕ ಎಸ್ ಎಚ್ ದೇಸಾಯಿ, ಗ್ರಾಪಂ ಉಪಾಧ್ಯಕ್ಷ ಉಮೇಶ ಸಂತಿ, ಗ್ರಾಪಂ ಸದಸ್ಯರಾದ ಲಕ್ಷö್ಮಣ ಕತ್ತಿ, ಬಾಹುಬಲಿ ಸಪ್ತಸಾಗರ, ಮಲ್ಲಪ್ಪ ಹೊಸಟ್ಟಿ, ಸಂಗಪ್ಪ ಪಟ್ಟಣಶೆಟ್ಟಿ, ಅಶೋಕ ಬಾಗಡಿ, ಭೀಮಪ್ಪ ಹೊಸಟ್ಟಿ, ಗಂಗಪ್ಪ ಅಟಮಟ್ಟಿ, ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ್ಮ, ಹಾಗೂ ಸುತ್ತಮುತ್ತಲಿನ ಗ್ರಾಪಂ ಪಿಡಿಓ ಅಧಿಕಾರಿಗಳು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಇದ್ದರು. ವೈ ಬಿ ಕಳ್ಳಿಗುದ್ದಿ ನಿರೊಪಿಸಿದರು. Share