ಉಂಬಳೇಬೈಲು ಗ್ರಾಮಸ್ಥರಿಂದ ನೀರಿಗಾಗಿ ಪ್ರತಿಭಟನೆ

ಪ್ರತಿ ವರ್ಷ ಕೂಡ ಇದೇ ರೀತಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಊರಿನ ಗ್ರಾಮಸ್ಥರು ಗ್ರಾಮ ಪಂಚಾಯತಿ ಪ್ರತಿನಿಧಿಗಳಿಗೆ ಎಷ್ಟು ತಿಳಿಸಿದರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಕೋರೋಣ ವೈರಸ್ ಬಂದಿದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಪ್ರತಿ 20 ನಿಮಿಷಕ್ಕೆ ಒಂದು ಸಲ ಕೈ ತೊಳೆಯಿರಿ ಅಂತ ಹೇಳುತ್ತಾರೆ ಆದರೆ ನಮ್ಮ ಗ್ರಾಮದಲ್ಲಿ ಕುಡಿಲಿಕ್ಕೆ ನೀರಿಲ್ಲ ಇನ್ನ ಹೇಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು 10 ದಿನ ಆಯ್ತು ಗ್ರಾಮದಲ್ಲಿ ಕುಡಿಯ ನೀರಿಲ್ಲದೆ ಜನ ತತ್ತರಿಸುತ್ತಿದ್ದಾರೆ ತುಂಗಭದ್ರ ದಿಂದ 1 ಕೋಟಿ ಖರ್ಚು ಮಾಡಿ ಪೈಪ್ ಲೈನ್ ಮುಖಾಂತರ ಗ್ರಾಮಕ್ಕೆ ನೀರು ತಂದಿದ್ದು ಆ ನೀರು ಕೂಡ ಕುಡಿಯಲಿಕ್ಕೆ ಬರೋದಿಲ್ಲ ಯಾಕೆಂದರೆ ಫಿಲ್ಟರ್ ಮಾಡಿಲ್ಲ ಕೆಂಪು ನೀರು ಕಸಕಡ್ಡಿಗಳು ಬರುತ್ತವೆ ಆ ನೀರು ಹತ್ತು ದಿನದಿಂದ ಬರ್ತಾ ಇಲ್ಲ ಗ್ರಾಮ ಪಂಚಾಯತಿ ಅವರಿಗೆ ಕೇಳಿದರೆ ಪೈಪು ಒಡೆದುಹೋಗಿದೆ ಮೋಟರ್ ಸರಿಯಿಲ್ಲ ಸುಳ್ಳು ಹೇಳುತ್ತಿದ್ದಾರೆ ಈ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದೆ ಅಂತ ಹೇಳಿ ಗ್ರಾಮಸ್ಥರು ಶಿವಮೊಗ್ಗ ಜಿಲ್ಲಾ ಅಧಿಕಾರಿ ಗಮನಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಹರಿಸುತ್ತಿಲ್ಲ, ಜನರಲ್ಲಿ ಅನುಮಾನ ಉಂಟಾಗಿದೆ ಯಾಕೆಂದರೆ ಈ ಕಾಮಗಾರಿಯನ್ನು ರಾಜಕೀಯ ಮುಖಂಡರು ನಡೆಸಿದ್ದು ಜಿಲ್ಲಾಧಿಕಾರಿಗಳ ಮೇಲೆ ರಾಜಕೀಯ ಮುಖಂಡರು ಒತ್ತಡವನ್ನು ತಂದಿದ್ದು ಆದ್ದರಿಂದ ಈ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಜನರಲ್ಲಿ ಅನುಮಾನ ಮೂಡಿದೆ, ಈ ಕಾಮಗಾರಿಯ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಗ್ರಾಮಸ್ಥರಿಗೆ ತಕ್ಷಣ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಮಹಿಳೆಯರು ಉಪಸ್ಥಿತರಿದ್ದರು
Share
WhatsApp
Follow by Email