
ಬಳಿಕ ಸುದ್ದಿಗಾರರೊಂದಿಗೆ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಮಾತನಾಡಿ ಈಗಾಗಲೇ ವಿಶ್ವವ್ಯಾಪಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ಹಿನ್ನೇಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಈ ವೈರಾಣ ಹರಡುವಿಕೆ ತಗ್ಗಿಸಲು ಲಾಕ್ ಡೌನ ಮಾಡುವ ಮೂಲಕ ಬಹಳ ಕಟ್ಟೆಚ್ಚರ ವಹಿಸಿದೆ ಅದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ.
ಲಾಕ್ ಡೌನ ವೇಳೆ ಕೊಳಗೆರಿ ನಿವಾಸಿಗಳ ಕುಟುಂಭದ ಸಣ್ಣ ಮಕ್ಕಳು, ಅನಾರೊಗ್ಯದಿಂದ ಬಳಲುವಂವರು, ಬಾಣಂತಿಯರು ಹಾಲಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಉಚಿತ ಹಾಲು ಪೂರೈಕೆ ಮಾಡುವ ನಿರ್ಧಾರಕ್ಕೆ ಮುದ್ದೇಬಿಹಾಳ ಮತಕ್ಷೇತ್ರ ಜನತೆಯ ಪರವಾಗಿ ಅಭಿನಂಧಿಸುವುದಾಗಿ ಹೇಳಿದರು.
ಸಧ್ಯ ಪಟ್ಟಣದಲ್ಲಿ ಕೋಳಗೆರಿ(ಸ್ಲಂ) ನಿವಾಸಿಗಳ ಪ್ರತಿ ಕುಟುಂಭಕ್ಕೆ ಒಂದು ಲೀಟರ್ ನಂತೆ ಸುಮಾರು ೨ ಸಾವಿರ ಕುಟುಂಭಗಳಿಗೆ ಇದೇ ಏಪ್ರೀಲ್ ೧೪ರವರೆಗೆ ನಿತ್ಯ ನಂದಿನಿ ಹಾಲು ಪೂರೈಕೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸರಕಾರ ಆದೇಶದಂತೆ ಸಾರ್ವಜನಿಕರು ಹಾಲಿಗಾಗಿ ಗುಂಪು ಗುಂಪಾಗಿ ನಿಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆಯಾ ಕುಟುಂಭದವರು ಹಾಲು ಪಡೆದುಕೊಳ್ಳಬೇಕು.
ಈ ವೇಳೆ ಹಾಲು ವಿರಸುವ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವ ಆಶಾ ಕಾರ್ಯಕರ್ತೆಯರು ಹಾಗೂ ಪುರಸಭೆ ಸಿಬ್ಭಂದಿಗಳು ಸಹಿತ ಯಾವ ಕುಟುಂಭದ ಮನೆ ಯೊಳಗೆ ಹೋಗದೆ ಬಾಗಿಲಿನಲ್ಲಿಯೇ ನಿಂತು ಅಂತರ ಕಾಯ್ದುಕೊಂಡು ಆರೋಗ್ಯ ಮಾಹಿತಿ ಪಡೆದುಕೊಳ್ಳಬೇಕು. ಈಗಾಗಲೇ ವಿತರಿಸಿವ ಹಾಲನ್ನು ಜನರು ಮೊದಲು ತಮ್ಮ ಒಂದು ಪಾತ್ರೆಯಲ್ಲಿ ಬಿಸಿ ನೀರು ಕುದಿಸಿ ಅದರಲ್ಲಿ ಹಾಲಿನ ಪ್ಯಾಕೇಟ್ ನ್ನು ಅದರೊಳಗೆ ಹಾಕಿ ತೆಗೆದು ತಮ್ಮ ಕೈಗಳನ್ನು ಸ್ವಚ್ಚಗೊಳಿಸುವ ಮೂಲಕ ಹಾಲು ಉಪಯೋಗಿಸಬೇಕು ಇದರಿಂದ ರೋಗಾಣುವಿನಿಂದ ರಕ್ಷೀಸಿಕೊಳ್ಳಬಹುದಾಗಿದೆ ಎಂದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ಪಿಎಸೈ ಮಲ್ಲಪ್ಪ ಮಡ್ಡಿ, ಪುರಸಭೆ ಸಿಬ್ಬಂದಿಗಳಾದ ವಿನೋಧ ಝಿಂಗಾಡೆ, ಆನಂದ ಮಾಳಜಿ ಸ್ಭೆರಿದಂತೆ ಮತ್ತಿತರರು ಇದ್ದರು