ಊಟಕ್ಕೆ ಮುಗಿಬಿದ್ದ ಸಂತ್ರಸ್ಥರು.ಹಸಿದ ಮಗುವಿನ ಆರ್ತನಾದಕ್ಕೆ ಕಣ್ಣಿರಿಟ್ಟ ದಾನಿಗಳು

ಅಥಣಿ: ಪಟ್ಟಣದಲ್ಲಿ ಕೂಲಿಕಾರ್ಮಿಕರಿಗೆ ನಿರ್ಗತಿಕರಿಗೆ ಮತ್ತು ಬಡವರಿಗೆ ದಾನಿಗಳು ಊಟಕೊಡಲು ಹೋದಾಗ ಮಗುವೊಂದು ಹಸಿವು ತಾಳದೆ ಓಡೋಡಿ ಬಂದು ಊಟ ತೆಗೆದುಕೊಂಡಾಗ ದಾನಿಗಳು ಕಣ್ಣಿರಿಟ್ಟ ಮನಕಲಕುವ ಘಟನೆ ನಡೆದಿದೆ.
ಅಥಣಿ ಪಟ್ಟಣದ ಅಗ್ನಿಶಾಮಕ ಠಾಣೆಗೆ ಹೊಂದಿಕೊAಡಿರುವ ಗುಡಿಸಲುಗಳಲ್ಲಿ ಹಾವುಗಾರರು. ಮತ್ತು ವಡ್ಡರ ಸಮುದಾಯದ ಅಲೆಮಾರಿ ಜನರು ವಾಸಿಸುತ್ತಿದ್ದು ದಾನಿಗಳು ಊಟ ತಂದಾಗ ಅನ್ನ ಕಂಡು ಮುಗಿಬಿದ್ದು ಸ್ವೀಕರಿಸಿದ ಮನಕಲಕುವ ಘಟನೆ ನಡೆದಿದೆ. ಅಥಣಿ ಪಟ್ಟಣದ ಹೂವು ಮತ್ತು ತರಕಾರಿ ವ್ಯಾಪಾರಸ್ಥರು ಕಳೆದ ಒಂದು ವಾರದಿಂದಲೂ ಹಸಿದವರ ಹೊಟ್ಟೆತುಂಬಿಸಲು ತಾವೇ ಸ್ವತಃ ಅಡುಗೆ ತಯಾರಿಸಿ ಹಸಿದವರಿಗೆ ಮತ್ತು ಊಟದ ಅವಶ್ಯಕತೆ ಇರುವ ಜನರಿಗೆ ತಲುಪಿಸುತ್ತಿದ್ದಾರೆ.
ಅಥಣಿ ತಾಲ್ಲೂಕು ಆಸ್ಪತ್ರೆ ಯಲ್ಲಿ ರಾತ್ರಿ ಹೊತ್ತು ರೋಗಿಗಳು. ಬಾಣಂತಿಯರು ಮತ್ತು ಅವರ ಪೋಷಕರಿಗೆ ಊಟ ತಲುಪಿಸುವ ಶಾಂತಾಬಾಯಿ ಯಕ್ಕುಂಡಿ ಮತ್ತು ಕುಟುಂಬ ಸದಸ್ಯರು ನಿತ್ಯವೂ ಎರಡು ನೂರಕ್ಕು ಹೆಚ್ಚು ಜನರಿಗೆ ಮದ್ಯಾಹ್ನ ಮತ್ತು ರಾತ್ರಿ ವೇಳೆ ಉಚಿತವಾಗಿ ಊಟ ಕೊಡುತ್ತಿದ್ದು ಅಥಣಿ ಪಟ್ಟಣದಲ್ಲಿ ಹಸಿದವರ ಹಸಿವು ನೀಗಿಸುತ್ತಿದ್ದಾರೆ.ತರಕಾರಿ ಹಾಗೂ ಹೂವು ವ್ಯಾಪಾರಿಗಳಾದ ಮಂಜುನಾಥ ಯಕ್ಕುಂಡಿ. ಸೋಮು ಮಡಿವಾಳ. ಮುರಿಗೆಪ್ಪ ಯಕ್ಕುಂಡಿ.
ಮoಜು ಮಾಳಿ. ಬಸವರಾಜ ಮಾಳಿ. ಪರಶುರಾಮ ಮಾಳಿ. ಮಹೇಶ ಪಾಟೀಲ್. ಸಿದ್ದು ಪಾಟೀಲ ಹಾಗೂ ಸಮಾಜ ಸೇವಕ ದೀಪಕ ಶಿಂಧೇ ಈ ಕೆಲಸಕ್ಕೆ ಸಾಥ ನೀಡಿದ್ದು ಯಕ್ಕುಂಡಿ ಕುಟುಂಬದ ಅನ್ನದಾನ ಕಾರ್ಯಕ್ಕೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ
Share
WhatsApp
Follow by Email