
ಕಿರಾಣಿ ಅಂಗಡಿಗಳಿಗೆ ಮುಗಿಬಿಳ್ಳುತ್ತಿರುವ ಜನರು:
ಇದಕ್ಕೆ ಅಪವಾದವೆಂಬoತೆ ಪಟ್ಟಣದ ಅಂಗಡಿಗಳ ಮಾಲಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಜನರು ಬೆಳಿಗ್ಗೆ 6 ಗಂಟ್ಟೆಯಿoದ 10 ಗಂಟೆಯವರೆಗೆ ಒಬ್ಬರಮೇಲೊಬ್ಬರು ಮುಗಿಬಿದ್ದು ಕಿರಾಣಿ ದಿನಸಿ ವಸ್ತುಗಳನ್ನು ಪಡೆಯುತ್ತಿರುವುದು ಆತಂಕ ಹಾಗೂ ಭಯಬೀಳುವಂತ್ತಾಗಿದೆ. ಅಲ್ಲದೆ ಕೆಲ ಅಂಗಡಿಗಳಲ್ಲಿ ಯೊಗ್ಯ ಧರದಲ್ಲಿ ನೀಡದೆ ದಿನಸಿವಸ್ತುಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತಿದ್ದಾರೆಂದು ಜನರು ಆರೋಪಗಳು ಕೇಳಿಬರುತ್ತಿವೆ. ಇದರಿಂದ ದಿನದ ಕೂಲಿನಾಲಿ ಮಾಡಿ ಬಧುಕುವ ಬಡಜನರಿಗೆ ತೀವ್ರ ತೊಂದರೆಯಾಗುತ್ತಿದೆ.
ಈ ಕೂಡಲೇ ಅಂಗಡಿ ಮಾಲಿಕರಿಗೆ ಕಟ್ಟುನಿಟ್ಟಾಗಿ ಯೋಗ್ಯ ಧರದಲ್ಲಿ ದಿನಸಿವಸ್ತುಗಳನ್ನು ನೀಡುವಂತೆ ಅಂಗಡಿಯ ಮಾಲೀಕರಿಗೆ ಹೇಳುವ ಕೆಲಸ ಸಂಬoದಪಟ್ಟ ಅಧಿಕಾರಿಗಳು ಮಾಡಬೇಕಿದೆ. ಅಂಗಡಿ ವರ್ತಕರು, ಪೋಲಿಸ್ ಸಿಬ್ಬಂದಿ ಹಾಗೂ ಸ್ಥಳಿಯ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಯವರು ಈ ಕಡೆ ಗಮನಹರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಕಟ್ಟುನಿಟ್ಟಾಗಿ ಸೂಚಿಸುವ ಕೆಲಸ ಮಾಡಬೇಕಿದೆ.
ಈ ಸಂದರ್ಬದಲ್ಲಿ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಪುರಸಭೆ ಸದಸ್ಯ ರಮೇಶ ಖೇತಗೌಡರ, ಕೆಂಚಪ್ಪ ಹಳಿಂಗಳಿ, ಬಸವರಾಜ ಯಡವಣ್ಣವರ, ಲಕ್ಕಪ್ಪ ಪೂಜೇರಿ, ಮಹೇಶ ಚೌಗಲಾ, ಮಹಾದೇವ ಶೇಗುಣಸಿ ಹಾಗೂ ಪುರಸಭೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು