ಕೋರೊನ ವೈರಸ್ ಹರಡದಂತೆ ಮುಂಜಾಗ್ರತೆ: ರಾಸಾಯನಿಕ ಕೀಟನಾಶಕ ಔಷಧಿ ಸಿಂಪಡಣೆ.

ಮುಗಳಖೋಡ ; ಕೊರೊನಾ ರೋಗದ ಕುರಿತು ಜನರಲ್ಲಿರುವ ತಪ್ಪು ತಿಳಿವಳಿಕೆ ಹೊಗಲಾಡಿಸಿ ರೋಗ ಹರಡದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು, ಪಟ್ಟಣದಲ್ಲಿ ಸ್ವಚ್ಛೆತೆಗೆ ಜನರು ಸಹಕರಿಸಬೇಕೆಂದು ಪುರಸಭೆ ಸದಸ್ಯ ರಮೇಶ ಖೇತಗೌಡರ ಹೇಳಿದರು.
ದೇಶದಲ್ಲಿ ಮಾರಕ ಕೋರೊನ ವೈರಸ್ ರೋಗ ಹರಡದಂತೆ ಮುಂಜಾಗ್ರತ ಕ್ರಮವಾಗಿ ಪ್ರದಾನಿ ಮೋದಿಯವರ ಸೂಚನೆಯಂತೆ ಎಪ್ರೀಲ್ 14 ರ ವರೆಗೆ ದೇಶಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ಹಿನ್ನೆಲೆಯಲ್ಲಿ ಮುಗಳಖೋಡ ಪಟ್ಟಣದ ಪುರಸಭೆ ಕಾರ್ಯಾಲಯದ ಸಮ್ಮುಖದಲ್ಲಿ ಹಾಗೂ ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಈ ಕೋರೊನ ವೈರಾಣು ಬರಬಾರದೆಂದು ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತ್ತೆ ಮುಂಜಾಗೃತ ಕ್ರಮವಾಗಿ ಪಟ್ಟಣದ ಬಸ್ಟಾö್ಯಂಡ, ಬಜಾರ, ವಿವೇಕಾನಂದ ಸರ್ಕಲ್, ಭಜಂತ್ರಿ ಓಣಿ, ಹನುಮಾನ ಗುಡಿಯಿಂದ ಎಸ್ಸಿ ಓಣಿ ಸೇರಿದಂತ್ತೆ ವಿವಿದ ಕಡೆ ಈ ರಾಸಾಯನಿಕ ಕೀಟನಾಶಕ ಔಷಧಿಯನ್ನು ಸಿಂಪಡಿಸಲಾಯಿತು.
ಪುರಸಭೆ ಪೌರಕಾರ್ಮಿಕರಿಗೆ ಮುಖ್ಯಾಧಿಕಾರಿ ಜಿ.ಬಿ. ಡಂಬಳ ಮಾಸ್ಕ, ಹ್ಯಾಂಡ ಗ್ಲೋಜ್ ವಿತರಿಸಿದರು. ಡಾ.ಎಸ್.ಎಂ.ಪಾಟೀಲ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿದರು. ಇದೇ ವೇಳೆ ಅನ್ನಪೂರ್ಣಾ ಸಿದ್ರಾಮ್ ಯರಡತ್ತಿ ದಂಪತಿಗಳಿoದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ, ಅಗ್ನಿಶಾಮಕ ಠಾಣೆ ಸಿಬ್ಬಂದಿ, ಆರಕ್ಷಕರಿಗೆ ಹಾಗೂ ಪೌರ ಕಾರ್ಮಿಕರಿಗೆ ತಂಪುಪಾನಿಯ ಮತ್ತು 200 ಮಾಸ್ಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರಾಯಬಾಗ ಅಗ್ನಿಶಾಮಕ ಠಾಣಾಧಿಕಾರಿ ಆರ್.ಕೆ.ಸಂಬೋಜಿ, ಮುಖ್ಯಾಧಿಕಾರಿ ಜಿ.ಬಿ.ಡಂಬಳ, ವೈದ್ಯಾಧಿಕಾರಿ ಡಾ.ಎಸ್. ಎಮ್. ಪಾಟೀಲ, ಪುರಸಭೆ ಸದಸ್ಯ ಕರೆಪ್ಪ ಮಂಟೂರ, ಅನ್ನಪೂರ್ಣಾ ಯರಡತ್ತಿ, ಮಹಾವೀರ ಕುರಾಡೆ, ಗ್ರಾಮಲೆಕ್ಕಾಧಿಕಾರಿ ಎಸ್.ಎಸ್.ಹತ್ತರಕಿ, ಮಹಾಂತೇಶ ಯರಡೆತ್ತಿ, ಕುಮಾರ ಬಾಬಣ್ಣವರ, ಗೋಪಾಲ ಯಡವನ್ನವರ, ಚಂದು.ಗೌಲತ್ತಿನವರ, ಮುಂತಾದವರು ಇದ್ದರು
Share
WhatsApp
Follow by Email