ಸರಕಾರಿ ಆಸ್ಪತ್ರೆಗೆ ಶಾಸಕರ ಭೇಟಿ, ಅಸಮಾಧಾನ.

ಮಹಾಲಿಂಗಪುರ : ಆಪತ್ತು-ವಿಪತ್ತು ತೋರಿದಾಗ ವೈದ್ಯನೇ ನಾರಾಯಣ ಅಂತಾರೆ. ಕೊರೊನಾ ಮಹಾ ಮಾರಿ ವಿರುದ್ಧ ವೈದ್ಯಲೋಕವೇ ಜೀವ ಪಣಕ್ಕಿಟ್ಟು ಸೆಣಸುತ್ತಿರುವಾಗ ಕೆಲ ವೈದ್ಯರು ಕೊರೊನಾ ಭಯಕ್ಕೆ ಕರ್ತವ್ಯದಿಂದ ವಿಮುಖರಾಗುತ್ತಿರುವುದು ವಿಷಾದಕರ ಸಂಗತಿ ಎಂದು ಶಾಸಕ ಸಿದ್ದು ಸವದಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಸಂಜೆ ಸಾರ್ವಜನಿಕರ ದೂರಿನನ್ವಯ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಕಿಡಿ ಕಾರಿದರು. ಅವರು ಭೇಟಿ ನೀಡಿದಾಗ ಆಸ್ಪತ್ರೆಯ ಕೌಂಟರ್‌ನಲ್ಲಿ ಅವತ್ತಿನ ಡ್ಯೂಟಿ ಡಾಕ್ರ‍್ಸ್ ಮತ್ತು ಸಿಬ್ಬಂದಿ ಹೆಸರು ಸರಿಯಾಗಿ ನಮೂದಿಸಿರಲಿಲ್ಲ, ಫಲಕದಲ್ಲಿ ದಿನಾಂಕ ಕೂಡ ಬದಲಿಸಿರಲಿಲ್ಲ, ಗುತ್ತಿಗೆ ಆಧಾರದ ಇಬ್ಬರು ವೈದ್ಯರು ಗೈರು ಹಾಜರಾಗಿದ್ದುದಕ್ಕೆ ಸರಿಯಾದ ಸ್ಪಷ್ಟೀಕರಣವಿರಲಿಲ್ಲ.. ಕಾರಣ ಕೇಳಿದರೆ ಕೊರೊನಾ ಹಾವಳಿಯಾದಾಗಿನಿಂದ ರಿಸ್ಕ್ ಬೇಡಾ ಅಂತ ಇಬ್ಬರೂ ವೈದ್ಯರು ಬಿಟ್ಟಿದ್ದಾರೆ ಅಂತ ವೈದ್ಯಾಧಿಕಾರಿ ಹೇಳಿದರು. ಮೇಲು ವೈದ್ಯಾಧಿಕಾರಿಗೆ ಕರೆ ಮಾಡಿ ವಿಷಯ ಕೇಳಿದಾಗ ಆ ಇಬ್ಬರೂ ವೈದ್ಯರಿಗೆ ನೋಟೀಸ್ ನೀಡುವಂತೆ ಸ್ಥಳೀಯ ವೈದ್ಯಾಧಿಕಾರಿಗೆ ತಿಳಿಸಿದ್ದೇನೆ ಎಂದು ಸಮಜಾಯಿಷಿ ಹೇಳಿ ಜಾರಿಕೊಂಡರು.
ಕೊರೊನಾ ಹಾವಳಿ ಮುಂಚಿನಿoದಲೂ ಸರಕಾರಿ ಆಸ್ಪತ್ರೆಯಲ್ಲಿ ಡಾ.ವಿಶ್ವನಾಥ ಗುಂಡಾ, ಡಾ.ಬಿ.ಎಸ್.ಅಂಬಿ ಹಾಗೂ ಡಾ.ಸಂಜು ಮುರಗೋಡ ಗುತ್ತಿಗೆಯಾಧಾರದ ಮೇಲೆ ಸೇವೆಯಲ್ಲಿದ್ದರು. ಆ ಪೈಕಿ ಡಾ.ಗುಂಡಾ ಮಾತ್ರ ಸೇವೆ ಮುಂದುವರೆಸಿದ್ದು ಉಳಿದ ಇಬ್ಬರು ವೈದ್ಯರು ಸೇವೆಯಿಂದ ವಿಮುಖರಾಗಿದ್ದಾರೆ ಎಂಬುದನ್ನು ತಿಳಿದ ಶಾಸಕರು ಈ ತುರ್ತು ಪರಿಸ್ಥಿತಿಯಲ್ಲೇ ವೈದ್ಯರು ಕೈ ಕೊಡುವುದು ಸರಿಯಲ್ಲ. ವೈರಸ್ ಭಯಕ್ಕೆ ವೈದ್ಯರೇ ಪಲಾಯನಗೊಂಡರೆ ಹೇಗೆ? ತಕ್ಷಣವೇ ಅವರಿಬ್ಬರ ಬದಲು ಬೇರೆ ಇಬ್ಬರು ವೈದ್ಯರನ್ನು ನೇಮಕ ಮಾಡಿ ಆಸ್ಪತ್ರೆಯ ತುರ್ತು ಸೇವೆಗೆ ಅನುಕೂಲ ಮಾಡುವಂತೆ ಡಿಎಚ್‌ಒ ಗೆ ದೂರವಾಣಿ ಮೂಲಕ ಆದೇಶಿಸಿದರು. ನಂತರ ಆಸ್ಪತ್ರೆಯ ಗೇಟ್, ಕಟ್ಟಡಕ್ಕೆ ಬಣ್ಣ, ಟೈಲ್ಸ್, ಕಿಟಕಿ, ಬಾಗಿಲು, ರೆಫ್ರಿಜರೇಟರ್ ಖರೀದಿ ಸೇರಿದಂತೆ ನಾನಾ ಅನುದಾನದ ಖರ್ಚು ವೆಚ್ಚ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಮಾಡಿದರು.
ವೈದ್ಯಾಧಿಕಾರಿ ಡಾ. ಕಗಲಗೊಂಬ, ಡಾ.ವಿಶ್ವನಾಥ ಗುಂಡಾ, ಎಸ್.ಎಂ.ಶಿರಗುಪ್ಪಿ, ಶಂಕರ ಪೂಜಾರಿ, ಕೆ.ಪಿ.ವಿಭೂತಿ, ಎಸ್.ಜಿ.ಚಿತ್ತರಗಿ, ಎ.ವೈ.ಜಲ್ಲೆನ್ನವರ ಇದ್ದರು.
3 ಎಂಎಲ್‌ಪಿ 3
ಮಹಾಲಿಂಗಪುರದ ಸರಕಾರಿ ಆಸ್ಪತ್ರೆಗೆ ಭೇಠಿ ನೀಡಿದ ಶಾಸಕ ಸಿದ್ದು ಸವದಿ ಸಿಬ್ಬಂದಿಯ ಕರ್ತವ್ಯದ ಬಗ್ಗೆ ವಿಚಾರಣೆ ನಡೆಸಿದರು
Share
WhatsApp
Follow by Email