ಬ್ರೇಕಿಂಗ್ ನ್ಯೂಸ್ ಎಪಿಎಂಸಿ ಹಮಾಲರ ಹಠಾತ ಸಭೆ ನಮ್ಮ ಬದುಕಿಗೊಂದು ಭರವಸೆ ಹಾಗೂ ಬದುಕಲು ಸರ್ಕಾರ ತುರ್ತು ಯೋಜನೆಯೊಂದನ್ನು ತರಬೇಕು. 04/04/202004/04/20201 min read admin ಮಹಾಲಿಂಗಪುರ : ಸ್ಥಳೀಯ ಎಪಿಎಂಸಿ ಸುಮಾರು 200 ಕುಟುಂಬಗಳ ಹಮಾಲರ ಬದುಕಿಗೆ ದಾರಿಯಾಗಿ ಜೀವನಕ್ಕೆ ಆಸರೆಯಾಗಿದೆ. ಈಗ ಕೊರೋನಾ ರುದ್ರನರ್ತನಕ್ಕೆ ಸಿಕ್ಕು ಅಡತಿ ಅಂಗಡಿಗಳೆಲ್ಲಾ ಬೀಗ ಜಡಿದು ದುಡಿಮೆ ಇಲ್ಲದೆ ಬದುಕು ಅತಂತ್ರವಾಗಿದೆ. ಇದೇ ಸ್ಥಿತಿ ಮುಂದುವರೆದರೆ ಅವರಿಗೆ ಆತ್ಮಹತ್ಯೆಯೊಂದೇ ದಾರಿಯಾಗುತ್ತದೆ.ಆದ್ದರಿಂದ ಸರ್ಕಾರ ಜೀವೋನೋಪಾಯಕ್ಕಾಗಿ ಸೂಕ್ತ ಯೋಜನೆಯನ್ನು ಘೋಷಿಸಿ ಕಷ್ಟಪಡುತ್ತಿರುವ ಶ್ರಮಿಕರ ಸಹಾಯಕ್ಕೆ ಬರಬೇಕೆಂದು ಎಪಿಎಂಸಿ ಹಮಾಲರು ಹಠಾತ ಸಭೆ ಸೇರಿದ ಇವರನ್ನುದ್ದೇಶಿಸಿ ಹಮಾಲರ ಸಂಘದ ಅಧ್ಯಕ್ಷ ಪೈಗಂಬರ್ ಪೆಂಡಾರಿ ಸಂಬoಧಿಸಿದ ಇಲಾಖೆಗೆ ಆಗ್ರಹಿಸಿ ಮಾತನಾಡಿದರು.ಇಡೀ ರಾಜ್ಯಕ್ಕೆ ಬೆಲ್ಲವನ್ನು ನೀಡಿದ ಬೃಹದಾಕಾರದ ಎಪಿಎಂಸಿ ಎಂಬ ಹೆಗ್ಗಳಿಕೆ ಹೊಂದಿ ಇನ್ನೂರಕ್ಕೂ ಹೆಚ್ಚು ಹಮಾಲರು ಇಲ್ಲಿ ಬೆವರು ಸುರಿಸಿ ತಮ್ಮ ಕುಟುಂಬಗಳನ್ನು ಸಲಹುತ್ತಿದ್ದಾರೆ.ಆದರೆ ಕೊರೋನಾ ಮಹಾಮಾರಿ ವಕ್ಕರಿಸಿದ್ದೇ ತಡ ಹಮಾಲರ ಬದುಕಿನಲ್ಲಿ ಕತ್ತಲೆಆವರಿಸಿ ಬದುಕೇ ಬರಡಾಗಿದೆ. ಅಂಗಡಿಯ ದುಡಿಮೆಯನ್ನೇ ನೆಚ್ಚಿಕೊಂಡಿದ್ದ ಇವರಿಗೆದುಡಿಸಿಕ್ಕೊಳ್ಳುತ್ತಿರುವ ಉಳ್ಳವರು, ಇಲಾಖೆಯ ಯಾವೊಬ್ಬ ಅಧಿಕಾರಿ ಇತ್ತ ಇವರ ಕುಂದು ಕೊರತೆಗಳನ್ನು ಆಲಿಸದೆ ಇರುವುದು ವಿಪರ್ಯಾಸಕರ ಸಂಗತಿ.ಈ ರೀತಿಯಾಗಿ ಬಳಸಿ ಎಸೆದ ವಸ್ತುವಿನಂತೆ ಹಮಾಲರ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದು ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ. ಅಸಹಾಯಕರಾದ ಇವರ ಒಡಲಿನ ಕಿಚ್ಚು ಸ್ಫೋಟಗೊಂಡು ಸುಮಾರು ಇನ್ನೂರಕ್ಕೂ ಹೆಚ್ಚಿನ ಹಮಾಲರು ಎಪಿಎಂಸಿ ಆವರಣದಲ್ಲಿ ಸೇರಿ ನಮ್ಮ ಬದುಕಿಗೊಂದು ಭರವಸೆ ಹಾಗೂ ಬದುಕಲು ಸರ್ಕಾರ ಯೋಜನೆಯೊಂದನ್ನು ತರಬೇಕು .ಇಲ್ಲದಿದ್ದರೆ ನಮಗೆ ಉಳಿದಿರುವುದು ಆತ್ಮಹತ್ಯೆಯೊಂದೇ ದಾರಿ ಎಂದು ಒಡಲೊಳಗಿನ ರೋಷವನ್ನು ಹೊರಹಾಕಿದರು.ಆದ್ದರಿಂದ ಸಂಕಷ್ಟಕ್ಕೀಡಾಗಿದ ಹಮಾಲ ಕುಟುಂಬಗಳಿಗೆ ತುರ್ತಾಗಿ ಸಹಾಯಹಸ್ತವನ್ನು ನೀಡಬೇಕು.ತುರ್ತು ಸಹಾಯಕ್ಕೆ ಹಠಾತ್ ಸೇರಿದ ಹಮಾಲರು Share