ಅಥಣಿ: ಪ್ರಧಾನಿಯವರ ದೀಪ ಬೆಳಗಿಸುವ ಕರೆಗೆ ಪಟ್ಟಣದಲ್ಲಿ ಸೀಮಿತವಾಗದೆ ಹಳ್ಳಿಗಳಲ್ಲಿ ಕುಡ ಬೆಂಬಲ ಸೂಚಿಸಿ ಜ್ಯೋತಿ ಬೆಳಗಿಸಿದರು


ಅಥಣಿ: ಕೋವಿಡ್೧೯ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ದೀಪ ಬೆಳಗಿಸುವ ಕರಗೆ ಅಥಣಿ ಪಟ್ಟನದಲ್ಲಿ ಬಾರಿ ಬೆಂಬಲ ವ್ಯಕ್ತವಾಗಿದೆ.


ಡಿಸಿಎಂ ಲಕ್ಷ್ಮಣ್ ಸವದಿ ಅಥಣಿಯ ಅವರ ಸ್ವಗೃಹದಲ್ಲಿ ಕುಟುಂಬ ಸಮೇತರಾಗಿ ಮನೆ ಹೊರಗೆ ಒಂಬತ್ತು ನಿಮಿಷ ದೀಪಗಳನ್ನು ಬೆಳಗಿಸಿದರು. ಇದೆ ತೆರನಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕುಟುಂಬ ಸಮೇತರಾಗಿ ದೀಪ ಬೆಳಗಿಸಿದರು
.
ವಿಶೇಷವಾಗಿ ಹಳ್ಳಿಗಳಲ್ಲಿ ಕೂಡ ಮಹಿಳೆಯರು ಇದಕ್ಕೆ ಬೆಂಬಲ ಸೂಚಿಸಿ ದೀಪ ಬೆಳಗಿಸುವ ಮೂಲಕ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಪ್ರದರ್ಶನ ಮಾಡಿದ್ದಾರೆ. ಯಾವುದೇ ಜಾತಿ ಧರ್ಮ ಎನ್ನದೆ ಯಲ್ಲರ ತಮ್ಮ ತಮ್ಮ ಮನೆಮುಂದೆ ಬಾಲ್ಕನಿ ಮೇಲೆ ದೀಪ ಬೆಳಗಿಸಿದ್ದಾರೆ.

ಅತಿ ಉತ್ಸುಕತೆಯಿಂದ ಮಹಿಳೆಯರು ಮಕ್ಕಳು ಸೇರಿದಂತೆ ೯ ನಿಮಿಷದವರೆಗೆ ಜ್ಯೋತಿ ಬೆಳೆಸಿದ್ದಾರೆ, ಅಥಣಿ ಪಟ್ಟಣದಲ್ಲಿ ಹಲವಾರು ಮಠಾಧೀಶರು ಇದರಲ್ಲಿ ಭಾಗಿಯಾಗಿರುವುದು ಕಂಡುಬಂತು
Share
WhatsApp
Follow by Email