ಅಬಕಾರಿ ದಾಳಿ : ಒಬ್ಬನ ಬಂದನ

ಅಥಣಿ : ಕೊರೊನಾ ಲಾಕ್ ಡೌನ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವೆಡೆ ಮಹಾರಾಷ್ಟ್ರ ರಾಜ್ಯದ ಸರಾಯಿ ಅಕ್ರಮ ಸಾಗಾಟ ಮತ್ತು ಮಾರಾಟದ ಆರೋಪಗಳು ಕೇಳಿ ಬಂದಿದ್ದವು.
ಸರಾಯಿ ನಿತ್ಯದ ದರಕ್ಕಿಂತ ಎರಡು ಮೂರುಪಟ್ಟು ಹೆಚ್ಚಿನ ದರದಲ್ಲಿ ಬ್ಲಾಕ್ ನಲ್ಲಿ ಮಾರಾಟವಾಗುತ್ತಿದ್ದು ಸದ್ಯ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಓರ್ವ ನನ್ನು ಮಟ್ಟ ಹಾಕುವಲ್ಲಿ ಅಥಣಿ ಅಬಕಾರಿ ಇಲಾಖೆಯ ಅಧಿಕಾರಿಗಳು ಯಶಸ್ವಿ ಆಗಿದ್ದಾರೆ.
ಮಹಾರಾಷ್ಟ್ರದ ದೇಶಿ ಸರಾಯಿ ಸಂತ್ರಾ ಸಾಗಾಟ ಮಾಡುವಾಗ ಕಾಗವಾಡ ತಾಲೂಕಿನ ಅನಂತಪುರ ಆಜೂರ ರಸ್ತೆಯಲ್ಲಿ ಅಬಕಾರಿ ಪೋಲಿಸರು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಬಸಪ್ಪ ಪೀರಪ್ಪ ನಾಯಕ ಎಂಬುವನನ್ನು ಬೈಕ್ ಮತ್ತು ಸಂತ್ರಾ ಸಮೇತ ವಶಕ್ಕೆ ಪಡೆದಿದ್ದಾರೆ.
ಒಟ್ಟು 17.28 ಲೀಟರ್ ಮಹಾರಾಷ್ಟ್ರ ಮದ್ಯ ಇದಾಗಿದ್ದು 52,700 ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ.
ಅಬಕಾರಿ ಉಪನಿರೀಕ್ಷಕರು ಚಿಕ್ಕೋಡಿ ಉಪವಿಭಾಗದ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಮಹೇಶ ಧೂಳಪ್ಪನ್ನವರ,ಬಸವರಾಜ ಮುಡಸಿ,ಸಂಜಯಕುಮಾರ ಅಸ್ಕಿ, ಮತ್ತು ಸಿಬ್ಬಂದಿಗಳಾದ
ಮೋಹನ ಕಾಂಬ್ಳೆ,ಶಾಮ ತಳವಾರ,ರಂಜಾನ್ ದಿಗ್ಗೇವಾಡಿ ,ಬಾಹುಬಲಿ ಸವದಿ,ಮತ್ತು ಶ್ರೀಕಾಂತ ಬಂಡಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share
WhatsApp
Follow by Email