ಮುದ್ದೇಬಿಹಾಳ: ಕಿರಾಣಿ ವರ್ತಕರ ಸಭೆ

ಮುದ್ದೇಬಿಹಾಳ: ಕೊರೊನಾ ಹಿನ್ನೇಲೆಯಲ್ಲಿ ಇಡೀ ದೇಶಾದ್ಯಂತ ಲಾಕ್ ಡೌನ ಆದೇಶವಿದ್ದು ಈ ವೇಳೆ ಕಿರಾಣಿ ವ್ಯಾಪಾರಸ್ತರು ಜನಸಾಮಾನ್ಯರ ಅಗತ್ಯ ಜೀವನಾಂಶಕ ವಸ್ತುಗಳ ನಿಗದಿತ ದರವನ್ನು ಹೊರತು ಪಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡಬoದಲ್ಲಿ ಅಂತಹ ಮೇಲೆ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಒದಗಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಗುರು ತಾರನಾಳ ತಾಕಿತು ಮಾಡಿದರು.
ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಪಟ್ಟಣದ ಬಹುತೇಕ ಕಿರಾಣಿ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ದೇಶದೆಲ್ಲೆಡೆ ಕೊರೊನಾ ವೈರಾಣು ಸೊಂಕಿನಿoದ ಬಡವರು ಮದ್ಯಮ ವರ್ಗದವರು ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ.
ಈ ಹಿನ್ನೇಲೆಯಲ್ಲಿ ಈ ವೈರಸ್ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ ಮಾಡುವ ಮೂಲಕ ವ್ಯಾಪಕ ಕಟ್ಟೇಚ್ಚರ ವಹಿಸುತ್ತಿದೆ ಜೊತೆಗೆ ಜನರಿಗೆ ಅಗತ್ಯ ಜೀವನಾಂಶಕ ವಸ್ತುಗಳು ದೊರಕುವಂತೆ ಸಧ್ಯ ಕಿರಾಣಿ ಅಂಗಡಿಗಳನ್ನು ತೆರದು ವ್ಯಾಪಾರ ಮಾಡುವ ಮೂಲಕ ಬಡವರ ರಕ್ಷಣೆ ಮಾಡುವ ಉದ್ದೇಶ ಇದಾಗಿದೆ.
ಆದರೇ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಕಿರಾಣಿ ವರ್ತಕರು ಈ ಮೊದಲಿನ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಸಾಕ್ಷೀ ಸಮೇತ ನೀಡಿದ್ದಾರೆ. ಕಾರಣ ಕಿರಾಣಿ ವ್ಯಾಪಾರಸ್ಥರು ಈ ವೇಳೆ ಮಾನವಿಯ ಮೌಲ್ಯಗಳನ್ನು ಎತ್ತಿಹಿಡಿಯ ಬೇಕು ವಿನಃ ಸಿಕ್ಕಿದ್ದೇ ಚಾನ್ಸು ಎಂದು ತಿಳಿದು ನಿತ್ಯ ಅಗತ್ಯವಿರುವ ಜೀವನಾಂಶಕ ವಸ್ತುಗಳ ಬೆಲೆಯನ್ನು ಒಂದಕ್ಕಿoತ ಮೂರು ಪಟ್ಟು ಬೆಲೆಗೆ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು
ಒಂದು ವೇಳೆ ಕಿರಾಣಿ ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬoದಲ್ಲಿ ತಕ್ಷಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ ಎಂದರು.ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಎಸ್ ಎಚ್ ಅವಟಿ, ರವಿ ನಾಯಕ, ಕಿರಾಣಿ ವರ್ತಕರಾದ ಅಶೋಕ ಚಟ್ಟೇರ, ವಿ ಕೆ ದೇಶಪಾಂಡೆ, ಅಪ್ಪ ದೇಗಿನಾಳ, ಜಗದೀಶ ಕಂಠಿ, ಬಿ ಜೆ ಬಿಂಜಲಭಾವಿ ಸೇರಿದಂತೆ ಮತ್ತಿತರರು ಇದ್ದರು
Share
WhatsApp
Follow by Email