ಮುದ್ದೇಬಿಹಾಳ : ಸಿಂದಗಿ ಪುರಸಭೆ ಸದಸ್ಯನಿಂದ ಮಾರಾಣಾಂತಿ ಹಲ್ಯೆ ನಡೆಸಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಮುದ್ದೇಬಿಹಾಳ: ವಿಜಯಪುರ ಜಿಲ್ಲೇ ಸಿಂದಗಿ ಪಟ್ಟಣದ ಕರ್ತವ್ಯನಿರತ ಪುರಸಭೆ ಮುಖ್ಯಾಧಿಕಾರಿ ಮೇಲೆ ಸಿಂದಗಿ ಪುರಸಭೆ ಸದಸ್ಯನಿಂದ ಮಾರಾಣಾಂತಿ ಹಲ್ಯೆ ನಡೆಸಿದ್ದನ್ನು ಖಂಡಿಸಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಎಚ್ ಕಾಸೆ ನೇತ್ರತ್ವದಲ್ಲಿ ಪೌರ ನೌಕರರು ಹಾಗೂ ಕಾರ್ಮೀಕರು ರವಿವಾರ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶಿಲ್ದಾರ ಜಿ ಎಸ್ ಮಳಗಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಧ್ಯ ದೇಶದೆಲ್ಲಡೆ ಕೋರೋನಾ ವೈರಾಣು ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಮುನ್ನೇಚ್ಚರಿಕೆ ಕ್ರಮವಾಗಿ ಇಡೀ ದೇಶದ್ಯಾಂತ ಲಾಕ್ ಡೌನ ಆದೇಶ ಹೇರಿದೆ. ಈ ಹಿನ್ನೇಲೆ ಪ್ರಸ್ತುತ ರಾಜ್ಯ ಸರಕಾರ ಬಡವರಿಗೆ ಮತ್ತು ಸಾಮಾನ್ಯ ವರ್ಗದವರಿಗೇ ನಿತ್ಯ ಅಗತ್ಯ ಜೀವನಾಂಶಕ ವಸ್ತುಗಳ ವಿತರಣೆ ಮತ್ತು ಖರಿದಸಲು ಅವಕಾಶ ನೀಡಿದೇ ಯಾದರೂ ಲಾಕ್ ಡೌನ ಅವಧಿ ಸಂಪೂರ್ಣ ಮುಗಿಯುವವರೆಗೂ ಬಡ ಜನರಿಗೆ ಸರಕಾರ ಉಚಿತ ಹಾಲು ವಿತರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೇಯ ಸಿಂದಗಿ ತಾಲೂಕಿನ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳು ಬಡವರಿಗೆ ಹಾಲು ಹಂಚಿಕೆ ವೇಳೆ ಗಲಾಟೆ ನಡೆಸಿದ್ದು ಮಾತ್ರವಲ್ಲದೇ ಪುರಸಭೆ ಮುಖ್ಯಾಧಿಕಾರಿ ಅವರ ಮೇಲೆ ಮಾರಣಾಂತಿಕ ಹಲ್ಯೆ ನಡೆಸಿದ್ದು ಪೌರ ನೌಕರರಿಗೆ ಯಾವೂದೇ ಭದ್ರತೆ ಇಲ್ಲದೇ ಯಾವೂದೇ ಪುರಸಭೆ ಅಧಿಕಾರಿಗಳ ಮೇಲೆ ಭಯವಿಲ್ಲದೇ ಮೇಲೇಧಿಕಾರಿಗಳು ಎನ್ನುವುದನ್ನು ಗಮನಿಸದೇ ಎಳೆದಾಡಿ ಮಾರಣಾಂತಿಕ ಹಲ್ಯೆ ನಡೆಸಿದ್ದು ಮಹಾ ಅಪರಾದ ವಾಗಿದೆ.
ಪುರಸಭೆ ನೌಕರರ ಮೇಲೆ ಕೂಲಿ ಕಾರ್ಮೀಕರ ಮೇಲೇ ಈ ರೀತಿಯ ಧೌರ್ಜನ್ಯ ನಡೆಯುತ್ತಿರುವುದು ಹೊಸದೇನೆಲ್ಲ ಪ್ರತಿ ನಿತ್ಯ ಕಚೇರಿ ನಿಮಿತ್ಯ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಸಾಕಷ್ಟು ಜನ ಸದಸ್ಯರಿಗೆ ಯಾವ ಗೌರವ ನೀಡದೇ ಅಪಮಾನಗೊಳಿಸುತ್ತಲೇ ಇರುವ ಘಟನೆಗಳಿಗೇನು ಕಡಿಮೆ ಇಲ್ಲ.
ಆದೃ ಸದ್ಯ ಇಂತಹ ಸಂದರ್ಭದಲ್ಲಿ ಮಾರಣಾಂತಿ ಹಲ್ಯೆ ನಡೆಸುತ್ತಿರುವುದು ಯಾವ ನ್ಯಾಯ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿರುವ ಕೊಳಚೆಯನ್ನು ಸ್ವಚ್ಚಗೊಳಿಸುವುದರಿಂದ ಹಿಡಿದು ಆಡಳಿತಾತ್ಮಕವಾಗಿ ಸಾಮಾಜಿಕ ಸೇವೆ ಮಾಡುತ್ತಲೇ ಬಂದಿದ್ದೇವೆ. ಆದರೇ ಸಧ್ಯ ಕಚೇರಿಗಳಲ್ಲಿ ಸಾರ್ವಜನಿಕರ ಸೇವೆ ಮಾಡುವಲ್ಲಿ ಕರ್ತವ್ಯ ನಿರ್ವಹಿಸುವಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ ಈ ರೀತಿ ಪೌರ ನೌಕರರರ ಮೇಲೆ ಹಲ್ಯೆ ನಡೆಸಿದ ಸಾಕಷ್ಟು ಘಟನೆಗಳು ನಡೆದುಹೋಗಿವೆ ಆದರೂ ಸಹಿತ ನಮ್ಮ ಪೌರ ನೌಕರರರ ಹಾಗೂ ಕಾರ್ಮೀಕರ ಹಿತರಕ್ಷಣೆಗೆ ಮಾತ್ರ ಸರಕಾರ ಹಿಂದೇಟು ಹಾಕುತ್ತಿದೆ.
ಸಮ್ಮ ಕುಟುಂಭ ಅಮ್ಮ ಸಂಸಾರವನ್ನು ಬದಿಗೊತ್ತಿ ಸಾರ್ವಜನಿಕ ಸೇವೆ ಮಾಡುತ್ತಲೇ ಇದ್ದೇವೆ ಕಾರಣ ನಮಗೂ ಸರಕಾರ ಸೂಕ್ತ ರಕ್ಷಣೆ ಒದಗಿಸಬೇಕು ಇಲ್ಲದಿದ್ದರೇ ಪೌರ ನೌಕರರು ಯಾವೂದೇ ಕಾರಣಕ್ಕೂ ಕಚೇರಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವಲ್ಲಿ ತೊಂದರೆಯಾಗಬಹುದಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಈಗಾಗಲೇ ಸಿಂದಗಿ ಪುರಸಭಾ ಮುಖ್ಯಾಧಿಕಾರಿ ಮೇಲೆ ಮಾರಣಾಂತಿಕ ಹಲ್ಯೆ ನಡೆಸಿ ತಲೆ ಮರೆಸಿಕೊಂಡಿರುವ ಪುರಸಭೆ ಸದಸ್ಯನನ್ನು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ
Share
WhatsApp
Follow by Email