ಶಾಸಕ ಬಾಲಚಂದ್ರ ಅಭಿಮಾನಿ ಬಳಗದಿಂದ ಉಚಿತವಾಗಿ ದಿನಸಿ ವಸ್ತುಗಳು, ತರಕಾರಿ, ಮಾಸ್ಕ್ ವಿತರಣೆ ಮಾಡಲಾಯಿತು.

ಹಳ್ಳೂರ : ಕಿಲ್ಲರ್ ಕೊರೊನಾ ವೈರಸ್ ದಿಂದ ದೇಶವೇ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಜನರ ಜೀವನವೇ ಅವ್ಯವಸ್ಥೆಗೊಂಡಿದ್ದು ಇಂತಹ ಸಂದರ್ಭದಲ್ಲಿ ಸರಿಯಾಗಿ ಅಡುಗೆ ದಿನಸಿ ವಸ್ತುಗಳು ಹಾಗೂ ತರಕಾರಿ ಸಿಗದೇ ಪರದಾಡುವಂತಾಗಿದೆ.
ಹೀಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗದಿಂದ ಗ್ರಾಮದ ಹರಿಜನ ಕೇರಿ ಜನರಿಗೆ ಉಚಿತವಾಗಿ ಅಡುಗೆ ದಿನಸಿ ವಸ್ತುಗಳು, ತರಕಾರಿ ಹಾಗು ಮಾಸ್ಕ್ ಹಂಚುವ ಕೆಲಸ ಮಾಡುತ್ತಿರುವ ಯುವ ಪಡೆಗೆ ಸಲಾಂ !
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಆತಂಕ ಹೆಚ್ಚುತ್ತಲೇ ಇದೆ. ಸೋಂಕಿತರ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಲೇ ಇದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ 3 ಕೊರೊನಾ ಪ್ರಕರಣ ಬಂದಿರುವುದರಿAದ ಜಿಲ್ಲೆಯಾದ್ಯಂತ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಿರುವಾಗ ಮೂಡಲಗಿ ತಾಲೂಕಾ ದಂಡಾಧಿಕಾರಿಗಳು ೩ ದಿನಗಳ ಕಾಲ ಸಂಪೂರ್ಣ ಮೂಡಲಗಿ ತಾಲೂಕಿನಾದ್ಯಂತ ನಿಷೇಧ ವಿಧಿಸಿದ್ದಾರೆ. ಬೆಳಗ್ಗೆ 9 ರಿಂದ ೮ರ ವರೆಗೆ ಹಾಲು ಮಾರಾಟ ಹಾಗೂ ಆಸ್ಪತ್ರೆಗೆ ಅಷ್ಟೇ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಹೀಗಿರುವಾಗ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಯುವ ಪಡೆ ಕೊರೊನಾ ವೈರಸ್ ಹರಡದಂತೆ ಜಾಗೃತರಾಗಿರಲು ಜನರಲ್ಲಿ ಜಾಗೃತಿ ಮೂಡಿಸುವ ನೀಟ್ಟಿನಲ್ಲಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಉಚಿತವಾಗಿ ಅಡುಗೆ ದಿನಸಿ ವಸ್ತುಗಳು, ತರಕಾರಿ ಹಾಗೂ ಮಾಸ್ಕ್ ನೀಡಿ ಜನರಲ್ಲಿ ಇರುವ ಕೊರೊನಾ ಭಯವನ್ನು ಹೊಗಲಾಡಿಸುವ ಕೆಲಸ ಮಾಡುತ್ತಿದ್ದಾರೆ.
ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿಯ ಸದಸ್ಯ ಭೀಮಶಿ ಮಗದುಮ್ಮ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ನಮ್ಮ ಗ್ರಾಮದ ಜನರು ಹೆಚ್ಚಿನ ಮುಂಜಾಗೃತೆ ವಹಿಸಬೇಕಾಗಿದೆ. ಕೊರೊನಾ ಸೊಂಕಿನ ಸೃಷ್ಠಿಯಾಗಿರುವ ಅಂಧಕಾರದಿAದ ದೇಶವನ್ನು ಬೆಳಕಿನಡೆಗೆ ಒಯುತ್ತಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಅಭಿಯಾನದಂತೆ ಇಂದು ರಾತ್ರಿ ೯ ಗಂಟೆಗೆ ನಡೆಯುವ ದೀಪ ಬೆಳಗುವ ಸಂಕಲ್ಪವನ್ನು ಯಶಸ್ವಿಗೊಳಿಸೋಣಾ ಎಂದು ಹೇಳಿದರು.
ನಮ್ಮ ಗ್ರಾಮದ ಜನರ ರಕ್ಷಣೆ ಮಾಡಲು ಪೋಲಿಸ್ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ಸೈನಿಕ ಯುವ ಪಡೆ ಇವರ ಶ್ರಮದಿಂದಾ ಇವತ್ತು ನಮ್ಮ ಗ್ರಾಮವು ಸ್ತಬ್ದ ವಾತವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಗ್ರಾಮದ ಮುಖಂಡ ಬಸಪ್ಪ ಸಂತಿ ಮಾತನಾಡಿ, ಜನರು ಯಾರು ಮನೆ ಬಿಟ್ಟು ಹೊರಗಡೆ ಬರಬಾರದು ಇಂದು ನಮ್ಮ ಯುವ ಪಡೆಯಿಂದ ಮನೆ ಮನೆ ಬಾಗಿಲಿಗೆ ದಿನಸಿ ವಸ್ತು, ತರಕಾರಿ, ಮಾಸ್ಕ್ ನೀಡುತ್ತಿರವ ಉದ್ದೇಶ ನಮ್ಮ ಗ್ರಾಮದಲ್ಲಿ ಯಾವುದೇ ಒಂದು ಕೊರೊನಾ ವೈರಸ್ ಹರಡದೆಂತೆ ತಡೆಗಟ್ಟಿವುದು ಹಾಗೂ ಬಡ ಜನರಿಗೆ ತೊಂದರೆ ಆಗಬಾರದೆಂದು ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್ ವೈ ತಾಳಿಕೋಟಿ, ಗ್ರಾಪಂ ಉಪಾಧ್ಯಕ್ಷ ಉಮೇಶ ಸಂತಿ, ಸದಸ್ಯರಾದ ಲಕ್ಷ್ಮಣ ಕತ್ತಿ, ಬಾಹುಬಲಿ ಸಪ್ತಸಾಗರ, ಮಲ್ಲಪ್ಪ ಹೊಸಟ್ಟಿ, ಈರಪ್ಪ ಪಾಲಬಾಂವಿ, ಭರಮಪ್ಪ ಸಪ್ತಸಾಗರ, ದೊಡ್ಡ ಬಸಪ್ಪ ಸಂತಿ, ಗಜು ಮಿರ್ಜಿ, ಚನ್ನಪ್ಪ ಬೆಳಗಲಿ, ಲಕ್ಷ್ಮಣ ಛಬ್ಬಿ, ನಾರಾಯಣ ಪೂಜೇರಿ, ಬಸು ಹೊಸಮನಿ, ಸಚೀನ ಕೋಹಳ್ಳಿ, ಚರಣ ನಾಶಿ, ವಿಠ್ಠಲ್ ತೊಟಗಿ, ಸಂತೋಷ ಮುತ್ನಾಳ, ಸಿದ್ದು ತೇರದಾಳ, ಗಂಗಪ್ಪ ಡಬ್ಬನ್ನವರ, ಈಶ್ವರ ವೆಂಕಟಾಪೂರ ಮಾರುತಿ ದೊಡಮನಿ ಇದ್ದರು.
Share
WhatsApp
Follow by Email