ಬ್ರೇಕಿಂಗ್ ನ್ಯೂಸ್ ಹಿಂದೊಂದು ನಡೆಯದ ಕ್ಷಣಕ್ಕೆ ಸಾಕ್ಷಿಯಾಯ್ತು ಭರತ ಭೂಮಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ದೀಪ ಬೆಳಗಿಸಿ ಮೋದಿ ಅವರ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು 05/04/202005/04/20201 min read admin ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ದೀಪ ಬೆಳಗಿಸಿ ಪ್ರಧಾನಿ ಮೋದಿ ಅವರ ಕೊರೋನಾ ವಿರುದ್ದದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಖಾಸಗಿ ಹೋಟೆಲ್ ನಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಕೋರೊನಾ ವಿರುದ್ದ ಹೋರಾಟಕ್ಕೆ ಬೆಂಬಲ ಸೂಚಿಸಿ ನಾಳಿನ ಭರವಸೆಯ ಬೆಳಕಿಗಾಗಿ ಇಂದು ದೀಪ ಹಚ್ಚಬೇಕು ಎಂದು ತಿಳಿಸಿದ್ದಾರೆ. ಭಾರತದ ನಿವಾಸಿಗಳು ಪ್ರಧಾನಿಯವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಮ್ಮ ಮನೆಯ ಮುಂಭಾಗದ ಅಂಗಳದಲ್ಲಿ ಸ್ವಯಂ ಪ್ರೇರಣೆಯಿಂದ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ, ಮೇಣದ ಬತ್ತಿಯನ್ನು ಹಚ್ಚಿ ಕೊರೊನಾ ತಡೆಗಟ್ಟುವಲ್ಲಿ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಬೆಂಬಲಿಸಿದರಲ್ಲದೇ ಕೊರೊನಾ ಸೊಂಕಿತರ ಆರೈಕೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೋಲೀಸ್ ಸಿಬ್ಬಂದಿಗಳ ಶ್ರಮವನ್ನು ಸ್ಮರಿಸಿದರು. ಕರೋನ ಅಂಧಕಾರ ತೊಲಗಿಸಲು ದೀಪಾವಳಿಯಂತೆ ಬೆಳಗಿತು ಭಾರತಅಭೂತಪೂರ್ವವಾಗಿ ಸ್ಪಂದಿಸಿದ ಭಾರತಾಂಬೆಯ ಮಕ್ಕಳುಹಿಂದೊಂದು ನಡೆಯದ ಕ್ಷಣಕ್ಕೆ ಸಾಕ್ಷಿಯಾಯ್ತು ಭರತ ಭೂಮಿಕರೋನ ಅಂಧಕಾರ ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಇಡೀ ಭಾರತ ಸಾತ್ ನೀಡಿತು. ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಇಡೀ ದೇಶ ದೀಪಾವಳಿಯಂತೆ ಬೆಳಗಿತು. ಇಡೀ ದೇಶದ ಜನ ಪಕ್ಷ-ಭಾಷೆ-ಧರ್ಮ ಬದಿಗಿಟ್ಟು ದೀಪ ಬೆಳಗಿಸಿ ಭಾರತವನ್ನು ಬೆಳಕಾಗಿಸಿದರು.ಒಟ್ಟಾರೆ, ಭಾರತೀಯ ಮನ-ಮನಸ್ಸುಗಳು ಕರೋನ ತೊಲಗಿಸಲು ಒಂದಾದ ಅಭೂತಪೂರ್ವ ಸನ್ನಿವೇಶಕ್ಕೆ ಭಾನುವಾರ ರಾತ್ರಿ ಸಾಕ್ಷಿಯಾದದ್ದು ವಿಶೇಷವಾಗಿತ್ತು Share