ಹುಕ್ಕೇರಿ ಹಿರೇಮಠದ ರಾಯಬಾಗ ಶಾಖಾಮಠದಿಂದ ರವಿವಾರ ಚಿಂಚಲಿ ಪಟ್ಟಣದ ಬಡಜನರಿಗೆ ಜೀವನಾವಶ್ಯಕ ವಸ್ತುಗಳ ಕೀಟ್‌ನ್ನು ವಿತರಿಸಲಾಯಿತು

ರಾಯಬಾಗ : ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್‌ದಿಂದ ತೊಂದರೆಗಿಡಾದ ತಾಲೂಕಿನ ಚಿಂಚಲಿ ಪಟ್ಟಣದ ನಿರ್ಗತಿಕ ಕುಟುಂಬಳಿಗೆ ರವಿವಾರ ಹುಕ್ಕೇರಿ ಹಿರೇಮಠದ ರಾಯಬಾಗ ಶಾಖಾ ಮಠದಿಂದ ಜೀವನಾವಶ್ಯಕ ವಸ್ತುಗಳ ಕಿಟ್‌ವನ್ನು ವಿತರಿಸಲಾಯಿತು.
ಸಮಾಜ ಸೇವಕ ಹಾಗೂ ಯುವಧುರೀಣ ಅರುಣ ಐಹೊಳೆ ಅವರು ಮಾತನಾಡಿ ಕೊರೋನಾ ಹಿನ್ನಲೆಯಲ್ಲಿ ಚಿಂಚಲಿ ಪಟ್ಟಣದ ನಿರ್ಗತಿಕ ಹಾಗೂ ಬಡವರು ತೊಂದರೆಯಾದದನ್ನು ಕಂಡು ಹುಕ್ಕೇರಿ ಹಿರೇಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸುಮಾರು 50 ಕುಟುಂಬಳಿಗೆ ಜೀವನಾಶ್ಯಕ ವಸ್ತುಗಳ ಕೀಟ್‌ನ್ನು ನೀಡಿದ್ದಾರೆ ಅವರ ಈ ಒಂದು ಕಾರ್ಯ ಶ್ಲಾಘನಿಯ ಅವರು ನೊಂದವರ ಹಾಗೂ ನಿರ್ಗತಿಕರ ಬಗ್ಗೆ ಹಾಗೂ ಸಮಾಜದ ಬಗ್ಗೆ ಎಷ್ಟು ಕಾಳಜಿ ಹಾಗೂ ಕಳಕಳಿ ಹೊಂದಿದ್ದಾರೆoಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲಾ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರುಣ ಐಹೊಳೆ, ರವಿ ರಂಗೊಳೆ, ಅಂಕುಶ ಜಾಧವ, ಸಂಜು ಮೈಶಾಳೆ, ಎಸ್.ಎಸ್.ಕಾಂಬಳೆ. ಬಿ.ಬಿ.ಪೂಜಾರ, ಸುಭಾಷ ಮಲ್ಲಪ್ಪಗೋಳ, ವಿವೇಕ ಯಮಕನಮರಡಿ, ಮಾಯಪ್ಪ ಖಿಚಡೆ, ಆನಂದ ಖಿಚಡೆ ಸೇರಿದಂತೆ ಅನೇಕರು ಇದ್ದರು
Share
WhatsApp
Follow by Email