ಕೊರೋನಾ ನಿಯಂತ್ರಣಕ್ಕೆ ಹೋಮಿಯೋಪತಿಯಲ್ಲಿ ಔಷಧ ಸಿದ್ಧ. ಅನುಮತಿ ಕೋರಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಪತ್ರ.


ಮಹಾಲಿoಗಪುರ : ಜಗತ್ತಿಗೇ ಮರಣ ಶಾಸನವಾಗಿರುವ ಮಹಾಮಾರಿ ಕರೋನಾ ವೈರಸ್ ಗೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಪ್ರಸಿದ್ಧ ಹೋಮಿಯೋಪತಿ ತಜ್ಞ ಡಾ.ಯು.ಎಸ್.ವನಹಳ್ಳಿ ನಿರಂತರವಾಗಿ 30 ವರ್ಷದ ತಮ್ಮ ಹೋಮಿಯೋಪತಿ ಕ್ಷೇತ್ರದ ಅನುಭವದಿಂದ ಮಹಾಮಾರಿ ಕರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡದಂತೆ ಒಂದು ದ್ರವವನ್ನು ಸಿದ್ಧಪಡಿಸಿ ಕರೋನಾ ಎಂಬ ಮಹಾಮಾರಿ ವೈರಸ್ ಹರಡದಂತೆ ತಡೆಯುಂತಹ ಔಷಧ ಪತ್ತೆ ಹಚ್ಚಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಅನುಮತಿಗಾಗಿ ಪತ್ರ ಬರೆದಿದ್ದಾರೆ.
ಹಲವಾರು ರೀತಿಯ ಪ್ರಯೋಗಗಳನ್ನು ಮಾಡುವುದರೊಂದಿಗೆ ಗ್ರಾಮೀಣ ಭಾಗದಲ್ಲಿ ಹೋಮಿಯೋಪತಿ ಸೇವೆಯನ್ನು ನೀಡುವುದರೊಂದಿಗೆ ಸುಮಾರು 55 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಯಶಸ್ವಿಯಾಗಿರುವ ವನಹಳ್ಳಿಯವರು ಹಲವಾರು ಗ್ರಂಥಗಳ ಅಧ್ಯಯನವನ್ನು ಮಾಡುವ ಮೂಲಕ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಶತಮಾನಗಳ ಹಿಂದೆ ಗಂಟಲುಬೇನೆ ಕಾಯಿಲೆ, ಶೀತ, ಕೆಮ್ಮು, ದಮ್ಮು, ಉಸಿರಾಟ ತೊಂದರೆ, ತೀವ್ರ ಜ್ವರ ಮುಂತಾದ ಕಾಯಿಲೆಗಳಿಗೆ ನಮ್ಮಋಷಿಮುನಿಗಳು,ಅನೇಕ ಪ್ರಸಿದ್ಧ ವೈದ್ಯರು ಹೋಮಿಯೋಪತಿ ಕ್ಷೇತ್ರದಲ್ಲಿ ರಚನೆಗೊಂಡ ಅನೇಕ ಗ್ರಂಥಗಳ ಅಧ್ಯಯನ ಮಾಡುವುದರ ಫಲವಾಗಿ ಹಾಗೂ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಈ ಔಷಧಿ ಕಂಡುಹಿಡಿದು ಕರೋನಾ ಮಹಾಮಾರಿ ವಿರುದ್ಧ ಹೋರಾಡುವಲ್ಲಿ ತುಂಬಾ ಪರಿಣಾಮಕಾರಿ ಪ್ರತಿಫಲವನ್ನು ನೀಡುತ್ತದೆ ಎಂದು ತಿಳಿಸುತ್ತಾರೆ. ನಾನು ಚಿಕಿತ್ಸೆ ನೀಡುತ್ತೇನೆ ದೇವರು ನಿಮ್ಮನ್ನು ಕಾಪಾಡುತ್ತಾನೆ ಎಂದು ಹೇಳುತ್ತಾರೆ.
ಬಾಕ್ಸ್ :
ನಾನು ಸುಮಾರು ಮೂವತ್ತೈದು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಹೋಮಿಯೋಪತಿ ವೈದ್ಯನಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತೇನೆ.ನಮ್ಮದೇ ಸ್ವಂತ ಹೋಮಿಯೋಪತಿ ಔಷಧಿಗಳ ತಯಾರಿಕೆ ಘಟಕವು ಇದೆ. ನಮ್ಮಲ್ಲಿ ಸುಮಾರು 55 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಅನೇಕ ಕಡೆಗಳಲ್ಲಿ ಬಳಕೆಯಲ್ಲಿವೆ. ಹಲವಾರು ಪ್ರಯತ್ನಗಳ ಫಲವಾಗಿ ಅನೇಕ ಅಧ್ಯಯನ ಮಾಡುವುದರ ಮೂಲಕ ನಾವು ಕರೋನಾ ವೈರಸ್ ವಿರುದ್ಧ ಹೋರಾಡಲು ಔಷಧವನ್ನು ಕಂಡುಹಿಡಿದಿರುತ್ತೇನೆ. ಈಗಾಗಲೇ ಈ ಔಷಧ ಒಳಗೊಂಡಿರುವ ಎಲ್ಲ ಮಾಹಿತಿಯನ್ನು ಹಾಗೂ ಇದಕ್ಕೆ ಬಳಸಿದಂತ ವಿವಿಧ ಪದಾರ್ಥಗಳ ಮಾಹಿತಿಯನ್ನು ನಾವು ನಮ್ಮ ದೇಶದ ಪ್ರಧಾನಿ,ರಾಜ್ಯದ ಮುಖ್ಯಮಂತ್ರಿ,ಆರೋಗ್ಯ ಸಚಿವರು,ಆಯುಷ್ ಇಲಾಖೆ ಹಾಗೂ ಸರ್ಕಾರದ ಅನೇಕ ಅಧಿಕಾರಿಗಳಿಗೆ ಇಮೇಲ್ ಮೂಲಕ ಮಾಹಿತಿಯನ್ನು ಸಲ್ಲಿಸಿರುತ್ತೇನೆ, ಮುಂದೆ ಅವರು ಅನುಮತಿ ನೀಡಿದರೆ ಎಲ್ಲರಿಗೂ ನೀಡುವ ಮೂಲಕ ಸರ್ವರಿಗೂ ವೈರಸ್ ವಿರುದ್ಧ ಹೋರಾಡಲು ಔಷಧವನ್ನು ನೀಡಲು ಸದಾ ಸಿದ್ಧನಿದ್ದೇನೆ. ನಾನು ಸದಾ ನಿಮ್ಮ ಸೇವೆ ಮಾಡುತ್ತೇನೆ, ನೀವು ನಂಬಿದ ದೈವಶಕ್ತಿ ಅವರನ್ನು ಕಾಪಾಡುತ್ತದೆ. -ಡಾ.ಯು.ಎಸ್.ವನಹಳ್ಳಿ , ಹೋಮಿಯೋಪತಿ ವೈದ್ಯರು, ಮಹಾಲಿಂಗಪುರ.
Share
WhatsApp
Follow by Email