ಚಿಕ್ಕೋಡಿ : ಕಾರ್ಯನಿರತ ಪತ್ರಕರ್ತ ನಿಗೆ ಪೊಲೀಸ್ ಸಿಬ್ಬಂದಿಯಿಂದ ಅವಾಚ್ಯ ಶಬ್ದಗಳಿಂದ ನಿಂದನೆ :ಪತ್ರಕರ್ತ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ

ಚಿಕ್ಕೋಡಿ:- ಪಟ್ಟಣದಲ್ಲಿ ಗುರುವಾರ ಮನೆಯಿಂದ ಕಚೇರಿಗೆ ಎಂದು ತೆರಳುತ್ತಿರುವ ತರುಣ ಭಾರತ ದಿನಪತ್ರಿಕೆಯ ಸಿಬ್ಬಂದಿ  ಹಿರೇಮಠನನ್ನು ಚಿಕ್ಕೋಡಿ ಡಿವೈಎಸ್ಪಿ ಮನೋಜ್ ಕುಮಾರ್ ನಾಯಕ್ ಕರ್ತವ್ಯನಿರತ ಬಸವ ಸರ್ಕಲ್‌ ನಲ್ಲಿ ನಿಲ್ಲಿಸಿ ಗುರುನಾಥ್ ಹಿರೇಮಠನಿಗೆ ಗುರುತಿನ ಚೀಟಿ ತೋರಿಸಿದರು ಆತನನ್ನು ಅನುಚಿತವಾಗಿ ವರ್ತಿಸಿರುವ ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಚಿಕ್ಕೋಡಿ ಕಾರ್ಯನಿರತ ಪತ್ರಕರ್ತರರ ಸಂಘ  ಬಲವಾಗಿ ಖಂಡಿಸುತ್ತದೆ  ಅಲ್ಲದೆ  ಅನುಚಿತವಾಗಿ ವರ್ತಿಸಿರುವ ಪೊಲೀಸ್ ಅಧಿಕಾರಿ ಮೇಲೆ  ಕ್ರಮ ಕೈಗೊಳ್ಳುವವರೆಗೂ ರಾಜಕಾರಣಿಗಳ ಹಾಗೂ  ಎಲ್ಲಾ ಸರ್ಕಾರಿ ಸಭೆ-ಸಮಾರಂಭಗಳನ್ನು  ಪತ್ರಕರ್ತ ಸಂಘದಿಂದ ನಿಷೇಧಿಸಿರುತ್ತದೆ ಎಂದು ಮನವಿ ಪತ್ರದಲ್ಲಿ ನಮೂದಿಸಲಾಗಿದೆ.
ಜೊತೆಗೆ ತಾಲೂಕಾ ತಹಶಿಲ್ದಾರ ಮುಕಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ  ಮನವಿಯನ್ನು ಸಲ್ಲಿಸಲಾಯಿತು 
Share
WhatsApp
Follow by Email