ಮುಧೋಳದಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನಲೆ ಶಾಸಕರ ಕಚೇರಿಯ ಸಿಬ್ಬಂದಿಗಳಿಂದ ಯಾದವಾಡಾ ಗ್ರಾಮದ ಜನತೆಗೆ ಜಾಗೃತಿಯನ್ನು ಮೂಡಿಸಲಾಯಿತು

ಮೂಡಲಗಿ: ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಕೊರೊನಾ ಸೊಂಕು ಧೃಡಪಟ್ಟಿರುವ ಹಿನ್ನಲೆಯಲ್ಲಿ ಮೂಡಲಗಿ ತಾಲೂಕಿನ ಕೊನೆಯ ಭಾಗವಾಗಿರುವ ಯಾದವಾಡ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ತಾಲೂಕಾಡಳಿತ ಮತ್ತು ಟೀಮ್ ಎನ್‍ಎಸ್‍ಎಫ್ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಬುಧವಾರದಂದು ಮುಧೋಳದ ವ್ಯಕ್ತಿಯೊರ್ವನಿಗೆ ಕೊರೊನಾ ವೈರಸ್ ಕಂಡುಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮುಧೋಳಕ್ಕೆ ಹೊಂದಿಕೊಂಡಿರುವ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ವಿಶೇಷ ಮನವಿಯನ್ನು ಅಧಿಕಾರಿಗಳ ತಂಡ ಮಾಡಿಕೊಂಡಿತ್ತು.
ಕೊರೊನೊ ಹಿನ್ನಲೆಯಲ್ಲಿ ಈಗಾಗಲೇ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಮನೆಯಲ್ಲಿಯೇ ಉಳಿದುಕೊಳ್ಳಬೇಕು. ಹೊರಗಡೆ ಯಾರು ಬರಬಾರದು. ಅಗತ್ಯವಿರುವ ಕೆಲಸಗಳಿಗೆ ಮಾತ್ರ ಹೊರಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್‍ಗಳನ್ನು ಹಾಕಿಕೊಳ್ಳಬೇಕು. ಇದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೊನೊ ಬಗ್ಗೆ ಎಚ್ಚರದಿಂದ ಇರುವಂತೆ ಯುವ ಧುರೀಣ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರತಿನಿಧಿಯಾಗಿ ಸ್ಥಳಕ್ಕೆ ಧಾವಿಸಿದ ನಾಗೇಶ ಶೇಖರಗೋಳ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೂಡಲಗಿ ತಹಶೀಲದಾರ ದಿಲಶಾದ ಮಹಾತ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಯಾದವಾಡ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಕುಲಗೋಡ ಠಾಣೆಯ ಪಿಎಸ್‍ಐ ಹಣಮಂತ ನೆರಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ, ನಿಂಗಪ್ಪ ಕುರಬೇಟ, ಬಸವರಾಜ ಹತ್ತರಕಿ ಮುಂತಾದವರು ಉಪಸ್ಥಿತರಿದ್ದರು.
ಬಾಕ್ಸ: ಯಾದವಾಡ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಹುತೇಕ ಗ್ರಾಮಗಳು ಮುಧೋಳ ಪಟ್ಟಣಕ್ಕೆ ಸಮೀಪವಿರುವದರಿಂದ ಯಾದವಾಡ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಜಾಗೃತಿಯಿಂದ ಇರಬೇಕು. ಕೊರೊನೊ ವೈರಸ್ ಮಹಾಮಾರಿಯಾಗಿದ್ದು, ಈಗಾಗಲೇ ಕ್ಷೇತ್ರದಲ್ಲೆಡೆ ಸಾರ್ವಜನಿಕರಲ್ಲಿ ಈ ಸಂಬಂಧ ಅರಿವು ಮೂಡಿಸಲು ನಮ್ಮ ಟೀಮ್ ಎನ್‍ಎಸ್‍ಎಫ್ ಕಾರ್ಯಪ್ರವೃತ್ತವಾಗಿದೆ. ಎಲ್ಲರಿಗೂ ಮಾಸ್ಕ್‍ಗಳನ್ನು ವಿತರಿಸುವಂತೆ ಸೂಚಿಸಲಾಗಿದೆ. ಲಾಕ್‍ಡೌನ್ ಮುಗಿಯುವ ತನಕ ಸಾರ್ವಜನಿಕರು ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ.

Share
WhatsApp
Follow by Email