ಮತ್ತೆ ನಾಲ್ವರಿಗೆ ಸೊಂಕು, ಬೆಳಗಾವಿಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 14 ಕ್ಕೆ ಏರಿಕೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಇಂದು ಜಿಲ್ಲೆಯ ನಾಲ್ವರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಸೊಂಕಿತರ ಸಂಖ್ಯೆ ಹತ್ತರಿಂದ 14 ಕ್ಕೆ ಏರಿದೆ .
ಇಂದು ಭಾನುವಾರ ಬೆಳಿಗ್ಗೆ ಹೆಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ರಾಯಬಾಗ ಕುಡಚಿಯ ನಾಲ್ವರು ಸೊಂಕಿತರ ಸಮಂಧಿಕರ ಮೂವರ ರಿಪೋರ್ಟ್ ಪಾಸಿಟೀವ್ ಬಂದಿದ್ದು ರಾಯಬಾಗದಲ್ಲಿ ಸೊಂಕಿತರ ಸಂಖ್ಯೆ 7 ಕ್ಕೆ ಏರಿದೆ.
ಹಿರೇಬಾಗೇವಾಡಿ ಯಲ್ಲಿ ಒಂದು ಹೊಸ ಕೊರೋನಾ ಸೊಂಕಿತ ಪ್ರಕರಣ ಬೆಳಕಿಗೆ ಬಂದಿದೆ
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವದರಿಂದ ಬೆಳಗಾವಿ ಜಿಲ್ಲೆ ಸಂಪೂರ್ಣವಾಗಿ ಸೀಲ್ ಡೌನ್ ಆಗುವ ಆತಂಕ ಎದುರಾಗಿದೆ.
ಇಂದು ಜಿಲ್ಲೆಯ ಮೂವರಿಗೆ ಹೊಸದಾಗಿ ಸೊಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದ್ದು ಜನ ಮನೆಯಿಂದ ಹೊರಗೆ ಬಾರದೇ ಲಾಕ್ ಡೌನ್ ಕಡ್ಡಾಯವಾಗಿ ಪಾಲಿಸಿದರೆ ಕೊರೋನಾ ಸೊಂಕು ಸಾಮಾಜಿಕವಾಗಿ ಹರಡದಂತೆ ತಡೆಯಬಹುದಾಗಿದೆ.
Share
WhatsApp
Follow by Email