ಕೊರೊನಾ ಪೊಸಿಟಿವ್ ಪೇದೆ ಪೂರ್ವದಲ್ಲಿ ಮಹಾಲಿಂಗಪೂರ ಪೋಲಿಸ್ ಠಾಣೆಗೆ ಭೇಟಿ ! ಕಾಡಿದ ಆತಂಕ ! ಕೇಂದ್ರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳಿಗೆಲ್ಲ ತಪಾಸಣೆ.ಮಹಾಲಿಂಗಪುರ : ಮುಧೋಳ ಸಿಪಿಐ ಆಫೀಸಿನಲ್ಲಿ ಕಾರ್ಯನಿರತ ಪೋಲಿಸ್ ಪೇದೆಗೆ ಇತ್ತೀಚೆಗೆ ಕೊರೊನಾ ಪೊಸಿಟಿವ್ ಬಂದಿರುವುದು ದೃಢವಾಗಿದೆ. ಕಾರಣ ಆ ವ್ಯಕ್ತಿ ಮಹಾಲಿಂಗಪೂರ ಹಾಗೂ ಲೋಕಾಪುರ ಪೊಲೀಸ್ ಠಾಣೆಗಳಿಗೂ ಕಾರ್ಯ ನಿಮಿತ್ಯ ಭೇಟಿ ನೀಡಿದ್ದಾನೆ ಎಂದು ಇಲಾಖೆ ಸಿಬ್ಬಂದಿಯಿAದ ತಿಳಿದು ಬಂದಿರುತ್ತದೆ.
ಆದಕಾರಣ ಠಾಣೆಯ ಎಲ್ಲ 35
ಜನರನ್ನು ತಪಾಸಿಸಲು ಸ್ಥಳೀಯ ಸಮುದಾಯ ಆರೊಗ್ಯ ಕೇಂದ್ರಕ್ಕೆ ಮಹಾಲಿಂಗಪೂರ ಠಾಣಾಧಿಕಾರಿ ಮನವಿ ಸಲ್ಲಿಸಿದ ಪ್ರಯುಕ್ತವಾಗಿ ಅವರ ಗಂಟಲು ದ್ರವ ಶೇಖರಿಸಿ ಹೆಚ್ಚಿನ ತಪಾಸಣೆಗೆ ಮುಧೋಳ ತಾಲೂಕಾಸ್ಪತ್ರೆಗೆ ಕಲುಹಿಸಲಾಗಿದೆ ಎಂದು ಆರೊಗ್ಯಧಿಕಾರಿ ಡಾ.ಗುರುನಾಥ ಕಗಲ್ಗೊಂಬ್ ತಿಳಿಸಿದ್ದಾರೆ.
ಈ ಕಾರ್ಯದಲ್ಲಿ ಲ್ಯಾಬ್ ಟೆಕ್ನಿಷಿಯನ್ ಶಾಲಿನಿ ನಾಯಕ, ರೂಪಾ ಶೇರಖಾನೆ,ಎಸ್.ಕೆ.ಔರಸಂಗ ಹಾಗೂ ಸ್ಟಾಪ್ ನರ್ಸ್ ಗಳಾದ ಎಸ್.ಎಸ್. ಕೋಟಿ,ಕೆ.ಪಿ.ವಿಭೂತಿ ಹಾಗೂ ಅಟೆಂಡರ್ ಪ್ರಕಾಶ ತಳವಾರ ಉಪಸ್ಥಿತರಿದ್ದರು
Share
WhatsApp
Follow by Email