ಮಧ್ಯ ಮಾರಾಟ ಬಂದ ಪರಿಣಾಮ ಜೋರಾಗಿದೆ ಕಳ್ಳಬಟ್ಟಿ ಸಾರಾಯಿ : ಪೋಲಿಸ್ ಇಲಾಖೆ ದಾಳಿ


ಮುದ್ದೇಬಿಹಾಳ : ಕೋವಿಡ್-19 ಸೋಂಕನ್ನು ತಡೆಗಟಗಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಆದೇಶ ಹೊರಡಿಸಿರುವುದರಿಂದ ತಾಲ್ಲೂಕಾದ್ಯಂತ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗಿ ಕಂಡು ಬರುತ್ತಿರುವ ತಾಲ್ಲೂಕಿನ ಕೆಲವು ತಾಂಡಾಗಳಾದ ಕಾಳಗಿ, ಕೋಳೂರ ಇನ್ನೂ ಅನೇಕ ತಾಂಡಾಗಳ ಮೇಲೆ ಸಿಪಿಐ ಆನಂದ ವಾಗ್ಮೋರೆ ಹಾಗೂ ಪಿಎಸೈ ಮಲ್ಲಪ್ಪ ಮಡ್ಡಿ ನೇತ್ರತ್ವ ಪೋಲಿಸ್ ತಂಡ ಗುರುವಾರ ಭರ್ಜರಿ ದಾಳಿ ನಡೆಸಿ ಕಳ್ಳಬಟ್ಟಿ ಸರಾಯಿ ತಯಾರಿಸುವ ರಾಸಾಯನಿಕ ದ್ರಾವಣವನ್ನು ನಾಶಪಡಿಸಿದರು.
ಸಧ್ಯ ಕೋರೋನಾ ಲಾಕ್ ಡೌನ ವೇಳೆ ಎಲ್ಲೇಡೆ ಮದ್ಯ ಮಾರಾಟ ನಿಷೇಧಿಸಿ ಸರಕಾರ ಆದೇಶ ಹೋರಡಿಸಿದ ಹಿನ್ನೇಲಯಲ್ಲಿ ತಾಲೂಕಿನೆಲ್ಲೇಡೆ ಕಳ್ಳಬಟ್ಟಿ ಚಿಗುರೊಡೆದಿದೆ, ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಜನ ಕಳ್ಳಬಟ್ಟಿಯ ಅಮಲಿನಲ್ಲೇ ತೇಲಾಡುತ್ತಿದ್ದಾರೆ. ಸರಕಾರ ಮಧ್ಯ ನಿಷೇಧಗೊಳಿಸಿದಾಗಲೆಲ್ಲ ಕಳ್ಳಬಟ್ಟಿ ತನ್ನ ರುಚಿ ತೋರಿಸುವುದು ಮಾಮೂಲಿ. ಮಧ್ಯ ವ್ಯಸನಿಗಳಿಗೆ ಅಮಲು ಬೇಕೆ ಬೇಕು. ಲಾಕಡೌನನಿಂದಾಗಿ ಜನರಿಗೆ ಮಧ್ಯ ದೊರೆಯುತ್ತಿಲ್ಲ, ಇದಕ್ಕಾಗಿ ಅವರು ಕಂಡುಕೊAಡಿರುವ ಮಾರ್ಗ ದೇಸಿ ದಾರು ಅರ್ಥಾತ ಕಳ್ಳಬಟ್ಟಿ. ಸರಕಾರದ ಪ್ರಯತ್ನದ ಮಧ್ಯೆಯೂ ಕೆಲ ತಾಂಡಾಗಳಲ್ಲಿ ಕಳ್ಳಬಟ್ಟಿ ಮಾರಾಟ ದಾರಾಳವಾಗಿ ಸಾಗಿದೆ. ಕಳ್ಳಬಟ್ಟಿ ಪ್ರತಿ ಲೀಟರಿಗೆ ಮೊದಲು 100 ರೂ, ಇತ್ತಿನ ದಿನ ರೂ. 300-500ಕ್ಕೆ ಮಾರಾಟ ನಡೆದಿದೆ. ಇದನ್ನು ಕಂಡ ಪೋಲಿಸ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಅಧಿಕಾರಿಗಳ ಜೋತೆಗೂಡಿ ತಂಡ ರಚಿಸಿ ದಾಳಿಗೆ ಮುಂದಾಗಿದ್ದು. ತಾಲ್ಲೂಕಿನ ಕೆಲವೊಂದು ತಾಂಡಾಗಳ ಮೇಲೆ ಕಣ್ಣಾವಲು ಹೂಡಿದ್ದು ಮೇಲಿಂದ ಮೇಲೆ ದಾಳಿ ನಡೆಸಿ ನಡೆಯುತ್ತಿರುವ ದಾರಳ ಕಳ್ಳಬಟ್ಟಿ ಸರಾಯಿ ತಯಾರಿಕೆ ದಂಧೆಯನ್ನು ಸಂಪೂರ್ಣ ಕಡಿವಾಣ ಹಾಕಲು ಪೋಲಿಸ ಠಾಣೆ ಅಧಿಕಾರಿಗಳು ಮುಂದಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಇದ್ದಕ್ಕಿದ್ದಂತೆ ಪೋಲಿಸ ಇಲಾಕೆ ಜಾಲಿ ಬೀಸುತ್ತಿದ್ದು, ಅಧಿಕಾರಿಗಳ ನೇತೃತ್ವದಲ್ಲಿ ಇವತ್ತಿನ ದಿನ ಕಾಳಗಿ ತಾಂಡಾದ ಮೇಲೆ ಬೆಳ್ಳಂ ಬೆಳ್ಳಿಗೆ ಮುದ್ದೇಬಿಹಾಳ ಪೋಲಿಸ ಠಾಣೆಯ ಸಿ.ಪಿ.ಆಯ್ ಆನಂದ ವಾಗ್ಮಮೋರೆ ತಮ್ಮ ಸಿಬ್ಬಂದಿಗಳ ತಂಡದೊAದಿಗೆ ಅಕ್ರಮ ಕೇಂದ್ರಗಳ ಮೇಲೆ ದಾಳಿ, ಅದರಂತೆ ಪಿ.ಎಸ್.ಆಯ್ ಎಮ್ ಡಿ ಮಡ್ಡಿ ಅವರ ನೇತೃತ್ವದ ತಂಡ ಕೋಳೂರ ತಾಂಡಾದ ಮೇಲೆ ದಾಳಿ ನಡೆಸಿ ಅಕ್ರಮ ಮಧ್ಯ ಹಾಗೂ ರಾಸಾಯನಿಕ ದ್ರಾವಣವನ್ನು ಶೇಖರಿಸಿ ಇಟ್ಟಿರುವ ಕೊಡ, ದ್ರಾವಣವನ್ನು ನಾಶಪಡಿಸಿದರು ಸರಾಯಿ ತಯಾರಿಸಲು ಬಳಸುವು ಬೆಲ್ಲವನ್ನು ತಮ್ಮ ವಶಕ್ಕೆ ಪಡೆದು ಜನರಲ್ಲಿ ಪ್ರತಿಕ್ರಿಯಿಸಿದ್ದು, ತಾಂಡಾಗಳು ಕಳ್ಳಬಟ್ಟಿ ಮಾರಾಟ ಕೇಂದ್ರಗಳಾಗಿ ಬದಲಾಗಬಾರದು. ಅಲ್ಲಿನ ಮುಖಂಡರು ಕಳ್ಳಬಟ್ಟಿ ತಯಾರಿಸದಂತೆ ನಿಗಾ ವಹಿಸಬೇಕು. ಕಳ್ಳಬಟ್ಟಿ ಪತ್ತೆಗಾಗಿ ಎಲ್ಲ ತಾಂಡಾಗಳ ಮೇಲೆ ಪಡೆ ರಚಿಸಲಾಗಿದ್ದು, ಮೇಲಿಂದ ಮೇಲೆ ದಾಳಿ ನಡೆಸುತ್ತೇವೆ ತಾವೂ ಎಚ್ಚೇತ್ತುಕೊಂಡು ಕಳ್ಳಬಟ್ಟಿ ಸರಾಯಿ ತಯಾರಿಸುವದನ್ನು ನಿಲ್ಲಿಸಬೇಕು ಒಂದು ವೇಳೆ ಅಕ್ರಮ ಮದ್ಯ ಮಾರಾಟಕ್ಕೆ ಮುಂದಾದರೆ ತಾವೂ ಜೈಲು ಪಾಲಾಗುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ, ಎ.ಎಸ್.ಆಯ್ ಜಾಗಿರ್ದಾರ, ಕುಲಕರ್ಣಿ ರಾಘು ಪೂಜಾರಿ, ರವಿ ಲಮಾಣಿ, ಸಂಜು ಜಾಧವ,ಯಾಸೀನ ಅತ್ತಾರ, ಸಂಗನಗೌಡ ಬಿರಾದಾರ, ಶಿವಾನಂದ ಮಟ್ಯಾಳ, ಮಂಜುನಾಥ, ಚಿದಾನಂದ ಸಿಬ್ಬಂದಿಗಳು ಇದ್ದರು
Share
WhatsApp
Follow by Email