
ಹೌದು ರಾಯಬಾಗ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ಅವರೇ ಪಟ್ಟಣದ ಎಲ್ಲರ ಮೆಚ್ಚುಗೆಯ ಕಾರ್ಯಕ್ಕೆ ಪಾತ್ರರಾಗಿದ್ದಾರೆ.

ಲಾಕ್ಡೌನ್ ಮಧ್ಯೆದಲ್ಲಿಯೂ ಕೂಡಾ ಒಂದು ವೇಳೆ ಅಲ್ಲಲ್ಲಿ ಜನ ಸೇರಿದ್ದು ಗೊತ್ತಾಯಿತು ಅಂದರೆ ಇವರೇ ಒಂದು ಲಾಠಿ ಹಿಡಿದುಕೊಂಡು ಜನರನ್ನು ಚದುರಿಸಿ, ಜನರು ಒಟ್ಟಿಗೆ ಸೇರದಂತೆ ಮತ್ತು ಮನೆ ಬಿಟ್ಟು ಹೊರಗಡೆ ಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ರಾಯಬಾಗ ಪಟ್ಟಣಕ್ಕೆ ಯಾರೇ ಕೂಡಾ ಬೇರೆ ಕಡೆಯಿಂದ ಬಂದಿರುವ ಬಗ್ಗೆ ಮಾಹಿತಿ ಬಂದರೆ ಸಾಕು ಕೂಡಲೇ ಅವರ ಮನೆಗೆ ಹೋಗಿ ಆರೋಗ್ಯ ಇಲಾಖೆಯವರನ್ನು ಕರೆದುಕೊಂಡು ಹೋಗಿ ಅವರ ಆರೋಗ್ಯ ತಪಾಸಣೆ ಮಾಡಿಸಿ ಸಂಶಯ ಬಂದ ವ್ಯಕ್ತಿಗಳನ್ನು ಕೂಡಲೇ ಅಂತಹವರನ್ನು ಹೊಂ ಕ್ವಾರಂಟೈನ್ದಲ್ಲಿ ಇಡುವ ವ್ಯವಸ್ಥೆ ಮಾಡಿಸುತ್ತಿದ್ದಾರೆ.
ಇನ್ನು ಪಟ್ಟಣದ ಬ್ಯಾಂಕ್ ಮುಂದೆ ಜನ ಜಂಗಳು ಸೇರಿದರೂ ಕೂಡ ಹೋಗಿ ಜನರನ್ನು ನಿಯಂತ್ರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಬ್ಯಾಂಕಿನ ಒಳಗಡೆ ಸರದಿ ಸಾಲಿನಂತೆ ನಿಂತು ಹೋಗುವಂತೆ ತಿಳಿಹೇಳುತ್ತಾರೆ. ಅಲ್ಲದೇ ಪಟ್ಟಣದಲ್ಲಿ ಫಾಂಗೀಗ್ ಹಾಗೂ ದ್ರಾವಣವನ್ನು ಸಿಂಪಡಿಸಿ ನಗರವನ್ನು ರೋಗ ರುಜೀಗಳು ಹರಡಂತೆ ಎಚ್ಚರವಹಿಸಿ ದಿನಪ್ರತಿ ಬೆಳೆಗ್ಗೆಯಿಂದ ಸಾಂಯಕಾಲದವರೆಗೂ ನಿರಂತರ ಶ್ರಮವಿಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಕಾರ್ಯ ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡಾ ಇಂತಹ ಪರಿಸ್ಥಿತಯಲ್ಲಿ ಹಿಂಗೂ ಕೆಲಸ ಮಾಡಬಹುದೆಂದು ತೋರಿಸಿಕೊಟ್ಟ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ಅವರ ಒಂದು ಕಾರ್ಯಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಾಕಷ್ಟು ಜನರಿಗೆ ಕೊರೋನಾ ಪಾಸಿಟೀವ್ ವರದಿ ಬಂದಿವೇ ಆದರೆ ರಾಯಬಾಗ ಪಟ್ಟಣದಲ್ಲಿ ಇಲ್ಲಿಯವರೇಗೆ ಯಾವುದೋ ಒಂದು ಕೊರೋನಾ ಪಾಸಿಟಿವ್ ಬಂದಿಲ್ಲವಲ್ಲ ಅದೇ ನಮ್ಮ ಪುಣ್ಯ ಎನ್ನುತ್ತಾರೆ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ಅವರು ಸಂತೋಷ ವ್ಯಕ್ತಪಡಿಸುತ್ತಾರೆ.