ರಬಕವಿ-ಬನಹಟ್ಟಿ ನಗರಸಭೆಯಿಂದ ಸಾರ್ವಜನಿಕರಿಗೆ ಸಹಾಯವಾಣಿ ಕೇಂದ್ರ ಪ್ರಾರಂಭ

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ನಗರಸಭಾ ವ್ಯಾಪ್ತಿಯಲ್ಲಿ ಕೋವಿಡ್-19 ಪ್ರಯುಕ್ತ ಲಾಕ್‍ಡೌನ್ ಮಾಡಿದ ಹಿನ್ನೆಲೆಯಲ್ಲಿ ರಬಕವಿ-ಬನಹಟ್ಟಿ, ರಾಮಪುರ ಹಾಗೂ ಹೊಸೂರ ಸಾರ್ವಜನಿಕರಿಗೆ ದಿನಸಿ (ಕಿರಾಣಿ) ಹಾಲು, ಔಷದಿ ಮತ್ತು ತರಕಾರಿಗಳನ್ನು ಮಾರಾಟ ಮಾಡಲು ತಾಲೂಕಾ ಆಡಳಿತ, ನಗರಸಭೆ ರಬಕವಿ-ಬನಹಟ್ಟಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸಹಾಯವಾಣಿಯನ್ನು ತೆರೆಯಲಾಗಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದ್ದಾರೆ.
ಬನಹಟ್ಟಿ ನಗರದ ವಾರ್ಡ ನಂ. 1 ರಿಂದ 16 ರ ವರಗೆ ನೂಡಲ್ ಅಧಿಕಾರಿ ಎಸ್.ಎಂ. ಬಬಲಾದಿ ಸಮುದಾಯ ಸಂಘಟಣಾ ಅಧಿಕಾರಿ ನಗರಸಭೆ ರಬಕವಿ-ಬನಹಟ್ಟಿ 959122879, ರಬಕವಿ, ಹೊಸೂರ ಹಾಗೂ ರಾಮಪುರ ವಾರ್ಡ ನಂ. 17 ರಿಂದ 31 ರ ವರಗೆ ವಿ.ಎಸ್.ಬೀಳಗಿ ಕಂದಾಯ ಅಧಿಕಾರಿ ನಗರಸಭೆ ರಬಕವಿ-ಬನಹಟ್ಟಿ ಮೊ. 8105827038 ನೂಡಲ್ ಅಧಿಕಾರಿಯಾಗಿದ್ದಾರೆ.
ಬನಹಟ್ಟಿ ವಾರ್ಡ ನಂ. 1 ರಿಂದ 6 ರ ವರೆಗೆ ಎಸ್.ಐ. ಸೂಡಿ 9743210008 ಎ. ಆರ್. ತಾಂಬೋಳಿ 8095685976 ಜಿ.ಆರ್.ಪರ್ವತಿಕರ 916535665, ಬನಹಟ್ಟಿ ವಾರ್ಡ ನಂ. 7 ರಿಂದ 11 ರ ವರಗೆ ಎಸ್.ಎಮ್.ಸಜ್ಜನ 980085366, ವಿ.ಪಿ.ಕುಗಾಟೆ 9008314277, ಉಲ್ಲಾಸ ಮಠಪತಿ 9591862101, ಬನಹಟ್ಟಿ ವಾರ್ಡ ನಂ. 12 ರಿಂದ 16 ರ ವರೆಗೆ ಅರಬಾಜಖಾನ ಜಮಖಂಡಿ 9740774666, ಪ್ರಶಾಂತ ಕೆಂಗನಾಳ 9972236668, ದೀಪಾ ಮಳ್ಳಿ 8050708309, ರಬಕವಿ ವಾರ್ಡ ನಂ. 17 ರಿಂದ 21 ರ ವರೆಗೆ ಪಿ.ಎಸ್ ವಂದಾಲ 9845411132, ಎಮ್.ವಿ.ಯರಕಲ್ 9902020090, ಬಿ.ಎಸ್.ಗಡಾದ 9916545328, ರಬಕವಿ ವಾರ್ಡ ನಂ. 22 ರಿಂದ 25 ರ ವರೆಗೆ  ಚೇತನ ಭಜಂತ್ರಿ 7353729235, ರಾಚಯ್ಯ ಮಠಪತಿ 9611715790, ಸಂತೋಷ ಅರಬಳ್ಳಿ 8073656560, ಹೊಸೂರ ಮತ್ತು ರಾಮಪುರದ ವಾರ್ಡ ನಂ. 26 ರಿಂದ 31 ರ ವರೆಗೆ ಸುರೇಶ ನೀಲನೂರ 9110202643, ಎಮ್.ಆರ್.ಖವಟಕೊಪ್ಪ 8971808046, ಕಾವೇರಿ ಸೋರಗಾಂವಿ 8971135180 ಇವರುಗಳನ್ನು ಸಾರ್ವಜನಿಕ ಸಹಾಯವಾಣಿಗೆ ನೇಮಿಸಲಾಗಿದ್ದು, ಸಾರ್ವಜನಿಕರು ದಿನಸಿ (ಕಿರಾಣಿ) ಹಾಲು, ಔಷಧಿ ಮತ್ತು ತರಕಾರಿಗಳನ್ನು ಪಡೆಯಲು ಸಂಪರ್ಕಿಸಬಹುದಾಗಿದೆ ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದ್ದಾರೆ.
Share
WhatsApp
Follow by Email