ಬ್ರೇಕಿಂಗ್ ನ್ಯೂಸ್ ವೈದ್ಯರು ಸುರಕ್ಷೀತವಾಗಿದ್ದರೇ ಮಾತ್ರ ಸಾಮಾನ್ಯ ಜನರು ಸುರಕ್ಷೀತವಾಗಿರಲು ಸಾಧ್ಯ : ಶಾಸಕ ಎ ಎಸ್ ಪಾಟೀಲ 17/04/202017/04/20201 min read admin ಮುದ್ದೇಬಿಹಾಳ:ವೈದ್ಯರು ಸುರಕ್ಷೀತವಾಗಿದ್ದರೇ ಮಾತ್ರ ಸಾಮಾನ್ಯ ಜನರು ಸುರಕ್ಷೀತವಾಗಿರಲು ಸಾಧ್ಯ ಈ ನಿಟ್ಟಿನಲ್ಲಿ ಕೊರೊನಾ ವೈದೈಕೀಯ ಸಂಕಷ್ಟದಲ್ಲಿ ಖಾಸಗಿ ಆಸ್ಪತ್ರೆಗೆಂದು ಬರುವ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು.ಪಟ್ಟಣದ ತಮ್ಮ ದಾಸೋಹ ನಿಲಯದಲ್ಲಿ ಶುಕ್ರುವಾರ ಪಟ್ಟಣದ ಖಾಸಗಿ ವೈದ್ಯರಿಗೆ ವೇನುಸ್ ವ 20 ಗುಣಮಟ್ಟದ ಮಾಸ್ಕಗಳನ್ನು ಹಾಗೂ ಪಿಪಿ ಕಿಟ್ಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.ಕೆಮ್ಮು, ನೆಗಡಿ, ಜ್ವರ, ಶಾಸಕೋಶ ತೊಂದರೆ ಯಂತಹ ಕೊರೊನಾ ಲಕ್ಷಣಗಳುಳ್ಳ ರೋಗಿಗಳನ್ನು ಖಾಸಗಿ ವೈದ್ಯರು ತಾವೂ ಚಿಕತ್ಸೆ ನೀಡದೇ ತಕ್ಷಣ ಸರಕಾರಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೇ ನೀಡಬೇಕು. ಸಧ್ಯ ವಿಜಯಪುರ ಜಿಲ್ಲೇಯಲ್ಲಿ ಅತೀ ಹೆಚ್ಚು ಕೋರೋನಾ ಸೊಂಕಿತರ ವರದಿ ದೃಡಪಟ್ಟಿರುವ ಹಿನ್ನೇಲೆಯಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲಿಯೂ ಸಹ ಜಾಗ್ರತಿ ವಹಿಸಿಕೊಳ್ಳುವುದು ಸೂಕ್ತವಾಗಿದೆ.ಇಲ್ಲಿಯ ತನಕ ಮುದ್ದೇಬಿಹಾಳ ತಾಲೂಕಿನಲ್ಲಿ ತಾಲೂಕಿನಲ್ಲಿ ಯಾವೂದೇ ಕೊರೊನಾ ಸೊಂಕಿತರು ಕಂಡುಬAದಿಲ್ಲ ಆದರೇ ಯಾವ ವ್ಯಕ್ತಿಗೆ ಯಾವಾಗ ಸೊಂಕು ತಗುಲಿದೆ ಅಥವಾ ಇಲ್ಲವಾ ಎಂಬುದು ತಕ್ಷಣದಲ್ಲಿಯೇ ಕಂಡುಹಿಡಿಯಲು ಸಾಧ್ಯವಿಲ್ಲ ಕಾರಣ ಮುಂಜಾಗೃತ ಕ್ರಮವಾಗಿ ಪ್ರತಿಯೊಬ್ಬ ಖಾಸಗಿ ವೈದ್ಯರು ತಮ್ಮ ಬಳಿ ಚಿಕಿತ್ಸೆಗೆಂದು ಬರುವವರ ರೋಗ ಲಕ್ಷಣಗಳನ್ನು ದೂರಿನಿಂದಲೇ ಅರ್ಥೈಸಿಕೊಂಡು ಯೋಗ್ಯ ಚಿಕಿತ್ಸೇ ನೀಡುವಲ್ಲಿ ಪ್ರಯತ್ನಿಸಬೇಕು.ಈಗಾಗಲೇ ವಿಜಯಪುರ ಜಿಲ್ಲಾಢಳಿತ ಕೋರೋನಾ ವೈರಾಣುವನ್ನು ತಡೆಗಟ್ಟುವಲ್ಲಿ ಸಾಕಷ್ಟು ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ ಹಾಗಾ ಜಿಲ್ಲಾಢಳಿತದ ಆದೇಶದಂತೆ ಖಾಸಗಿ ವೈದ್ಯರು ನಿಯಮವನ್ನು ಪಾಲಿಸಬೇಕು ಜೊತೆಗೆ ಹೆರಿಗೆ ನೋವಿನಿಂದ ಖಾಸಗಿ ಆಸ್ಪತ್ರೆಗೆಂದು ಬರುವ ಗರ್ಭಿಣಿ ಮಹಿಳೆಯರ ಬಗ್ಗೆಯೂ ಸಹ ಎಚ್ಚರಿಕೆ ವಹಿಸಬೇಕಾಗಿದೇ ಇಂತಹ ಸಂದರ್ಭದಲ್ಲಿ ಅನುಕೂಲವಾಗುವ ಉದ್ದೇಶದಿಂದ ಪಿಪಿ ಕಿಟ್ಟ್ ಗಳನ್ನು ಹಾಗೂ ಗುಣಮಟ್ಟ ಮಾಸ್ಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಖಾಸಗಿ ವೈದ್ಯರಾದ ಡಾ,ಸಿ ಎಚ್ ನಾಗರಬೆಟ್ಟ, ಡಾ, ಡಿ ಬಿ ಓಸ್ವಾಲ,ಡಾ, ಎಸ್ ಬಿ ವಡವಡಗಿ, ಡಾ,ವಿರೇಶ ಪಾಟೀಲ, ಡಾ,ಉತ್ಕರ್ಷ ನಾಗೂರ, ಡಾ, ವಿರೇಶ ಇಟಗಿ, ಡಾ,ಮಹಾಂತೇಶ ಹಿರೇಮಠ, ಡಾ,ವಿಜಯಕುಮಾರ ನಾಯಕ, ಡಾ,ಜಿ ಕೆ ಹೋಕ್ರಾಣಿ, ಡಾ,ಸಿ ಕೆ ಶಿವಯೋಗಿಮಠ, ವಿಜಯಕುಮಾರ ಗೂಳಿ ಸೇರಿದಂತೆ ಮತ್ತಿತರರು ಇದ್ದರು. Share